Webdunia - Bharat's app for daily news and videos

Install App

ಬಾಲಕಿ ಮೇಲೆ ಗ್ಯಾಂಗ್ ರೇಪ್ ಎಸಗಿ ಮೈಮೇಲೆ ಬೈಕ್ ಹರಿಸಿದರು

Webdunia
ಗುರುವಾರ, 5 ಜನವರಿ 2017 (16:44 IST)
ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿ, ಮನಬಂದಂತೆ ಥಳಿಸಿ ಮೈಮೇಲೆ ಬೈಕ್ ಹರಿಸಿದ ಅಮಾನವೀಯ ಘಟನೆ ರಾಜಸ್ಥಾನದ ಚುರುವಿನಲ್ಲಿ ನಡೆದಿದೆ. 

 
ಕ್ರಿಸ್ಮಸ್ ಮುನ್ನಾ ದಿನದಂದು ಈ ಹೇಯ ಕೃತ್ಯ ನಡೆದಿದ್ದು ಬಹಳ ತಡವಾಗಿ ಬೆಳಕಿಗೆ ಬಂದಿದೆ. 
 
ಆಕೆಗೆ ಸೊಂಟದಿಂದ ಕೆಳಗಿನ ಭಾಗ, ಮೂತ್ರಕೋಶ ಮತ್ತು ಕರುಳಿನ ಮೇಲೆ ನಿಯಂತ್ರಣವಿಲ್ಲದಿದುದರಿಂದ, ಬದುಕುಳಿದಿದ್ದರೂ ಜೀವಂತ ಶವವಾಗಿದ್ದಾಳೆ. 
 
ಘಟನೆ ವಿವರ: ಕೂಲಿ ಕಾರ್ಮಿಕರ ಮಗಳಾದ ಪೀಡಿತೆ ಮನೆಯಲ್ಲಿ ಒಬ್ಬಳೇ ಇದ್ದ ಸಮಯ ನೋಡಿ ಆಕೆಗೆ ಪರಿಚಿತರೇ ಆಗಿದ್ದ ರಾಕೇಶ್ ಮತ್ತು ನರೇಶ್ ಎಂಬುವವರು ಎಳೆದೊಯ್ದಿದ್ದರು. ಡಿಸೆಂಬರ್ 25 ರಂದು ಬೆಳಗಿನ ಜಾವ ಮೂರು ಗಂಟೆ ಸುಮಾರಿಗೆ ಈ ಘಟನೆ ನಡೆದಿತ್ತು.
 
ಆಕೆಯ ಮೇಲೆ ಬಲಾತ್ಕಾರವೆಸಗಿದ ಬಳಿಕ ಯಾರಿಗೂ ಹೇಳದಂತೆ ಕೀಚಕರು ಬೆದರಿಕೆ ಒಡ್ಡಿದ್ದಾರೆ. ಅಷ್ಟೇ ಅಲ್ಲದೇ ಆಕೆಯ ಮೇಲೆ ಬೈಕ್ ಹರಿಸಿ ಕೊಲ್ಲಲು ಪ್ರಯತ್ನಿಸಿದ್ದಾರೆ. 
 
ಬಾಲಕಿಯ ಬೆನ್ನು ಹುರಿಗೆ ಸಹ ಗಂಭೀರ ಗಾಯಗಳಾಗಿದ್ದು ಆಕೆಯನ್ನು ಜೈಪುರದ ಆಸ್ಪತ್ರೆಗೆ ದಾಖಲಿಸಲಾಗಿದೆ. 
 
ಅಲ್ವರ್‌ನಲ್ಲಿ ಕಾರ್ಮಿಕರಾಗಿರುವ ತಂದೆ ಗ್ರಾಮಕ್ಕೆ ಹಿಂತಿರುಗಿದಾಗ ಮಗಳ ಸ್ಥಿತಿಯನ್ನು ಕಂಡು ಆಘಾತಗೊಂಡಿದ್ದಾರೆ ಮತ್ತು ಈ ಕುರಿತು ಪೊಲೀಸರಿಗೆ ದೂರು ನೀಡಿದ್ದಾರೆ.  
 
ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ. 
 

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ನಮ್ಮಲ್ಲಿರುವುದು ಬರೀ 6 ಲಕ್ಷ ಸೈನಿಕರು, ನಾವು ಉಳಿಯುವುದಿಲ್ಲ ಎಂದ ಪಾಕ್‌ನ ಮಾಜಿ ಸೇನಾಧಿಕಾರಿ

Operation Sindoor: ಶಾಲೆ, ಆಸ್ಪತ್ರೆ ಗುರಿಯಾಗಿಸಿ ನಡೆಸಿದ ಪಾಕ್‌ ಮಿಸೈಲ್‌ ದಾಳಿಗೆ ತಕ್ಕ ಉತ್ತರ

ಪಾಕಿಸ್ತಾನದ ಸೇನಾ ಪಡೆಯ ಗುಂಡಿನ ದಾಳಿಗೆ ರಜೌರಿಯ ಹೆಚ್ಚುವರಿ ಜಿಲ್ಲಾಧಿಕಾರಿ ಸಾವು, ಹಲವರಿಗೆ ಗಾಯ

Operation Sindoor: ಪಾಕಿಸ್ತಾನದ ಮಿಲಿಟರಿ ಪೋಸ್ಟ್‌, ಡ್ರೋನ್ ಲಾಂಚ್‌ಪ್ಯಾಡ್‌ ಉಡೀಸ್‌

Operation Sindoor: ಭಾರತ ಏಟಿಗೆ ಪಾಕ್‌ ತತ್ತರ - ಇಸ್ಲಾಮಾಬಾದ್‌ನಲ್ಲಿ ಪೆಟ್ರೋಲ್ ಪಂಪ್‌ಗಳು ಬಂದ್‌

ಮುಂದಿನ ಸುದ್ದಿ
Show comments