Select Your Language

Notifications

webdunia
webdunia
webdunia
webdunia

ಅಂದು ಚರ್ಚ್ ಇಂದು ಶಿವಾಲಯ: ಇದು ಧರ್ಮ ಪರಿವರ್ತನೆಯ ಕಥೆ

ಅಂದು ಚರ್ಚ್  ಇಂದು ಶಿವಾಲಯ: ಇದು ಧರ್ಮ ಪರಿವರ್ತನೆಯ ಕಥೆ
ಅಲಿಘಡ್‌‌‌ , ಶನಿವಾರ, 30 ಆಗಸ್ಟ್ 2014 (15:01 IST)
ಅಲಿಘಡ್‌‌‌ದಲ್ಲಿ ಸೆವೆಂಥ್‌ ಡೆ ಎಡವೆಂಟಿಸ್ಟ್ರಸ್ ಗೆ ಹೊಂದಿಕೊಂಡಿರುವ ಒಂದು ಚರ್ಚ್ ರಾತ್ರೋರಾತ್ರಿ ಶಿವಮಂದಿರವಾಗಿ ಬದಲಾಗಿದೆ. 1995ರಲ್ಲಿ ಹಿಂದು ಧರ್ಮ ಬಿಟ್ಟು ಕ್ರೈಸ್ತ ಧರ್ಮಕ್ಕೆ ಸೇರಿದ ವಾಲ್ಮೀಕಿ ಸಮೂದಾಯಯದ ಜನರು ಮತ್ತೆ ಮರಳಿ ಹಿಂದು ಧರ್ಮಕ್ಕೆ ಬಂದಿದ್ದಾರೆ. ಈ ಚರ್ಚ್ ನಲ್ಲಿ ಮೊದಲಿ ಕ್ರಾಸ್‌ ಅಳವಡಿಸಲಾಗಿತ್ತು, ಇದನ್ನು ತೆಗೆದು ಅಲ್ಲಿ ಶಿವನ ಚಿಂತ್ರ ಅಳವಡಿಸಲಾಗಿದೆ. ಹಿಂದು ಸಂಘಟನೆ ಇದನ್ನು ' ಮನೆಗೆ ಮರಳಿದ್ದೇವೆ' ಎಂದು ಹೇಳಿದ್ದಾರೆ. 
 
19 ವರ್ಷದ ಹಿಂದೆ ಕ್ರೈಸ್ತರಾಗಿದ್ದ 72 ಜನರು ಹಿಂದು ಧರ್ಮಕ್ಕೆ ಮರಳಿದ್ದರಿಂದ,  ಅಲಿಘಢ್‌‌ದಿಂದ 30 ಕಿಲೋಮೀಟರ್‌ ದೂರದ ಅಸರೊಯಿ ಚರ್ಚ್‌ನ ಒಳಗಡೆ ವ್ಯಾಪಕ ಸ್ಥರದಲ್ಲಿ ಶುಧ್ದೀಕರಣ ಮಾಡಲಾಗಿದೆ.
 
ಈ ಚರ್ಚ್‌ನಲ್ಲಿರುವ ಕ್ರಾಸ್‌‌ಅನ್ನು ತೆಗೆದು ಹೊರಗಡೆ ಇಟ್ಟು ಶಿವನ ಚಿತ್ರ ಅಳವಡಿಸಲಾಗಿದೆ ಎಂದು ಹೇಳಲಾಗುತ್ತಿದೆ. ಲೋಕಲ್‌ ಇಂಟೆಲಿಜೆನ್ಸ್‌‌ ಯೂನಿಟ್‌ ಸ್ಥಳಕ್ಕೆ ಬಂದಾಗ, ಶಿವನ ಚಿತ್ರವನ್ನು ಕೂಡ ತೆಗೆದು ಒಂದು ಮನೆಯೊಳಗಡೆ ಇಡಲಾಗಿದೆ ಎಂದು ಕೆಲ ಸ್ಥಳಿಯ ಜನರು ಮಾಧ್ಯಮದವರಿಗೆ ತಿಳಿಸಿದ್ದಾರೆ. 
 
' ಇದನ್ನು ಧರ್ಮಾಂತರಣ ಎಂದು ಕರೆಯುವುದಿಲ್ಲ, ಹೊರತು ಧರ್ಮಕ್ಕೆ ಮರಳಿ ಬಂದಿದ್ದಾರೆ ಎಂದೆನ್ನಲಾಗುತ್ತದೆ. ಇವರು ತಮ್ಮ ಇಚ್ಛೆಯಿಂದ ಹಿಂದು ಧರ್ಮ ಬಿಟ್ಟು ಹೋಗಿದ್ದರು. ನಂತರ ಇವರಿಗೆ ತಾವು ಮಾಡಿದ್ದು ತಪ್ಪು ಎಂದು ಅನಿಸಿ ಮರಳಿ ಹಿಂದು ಧರ್ಮಕ್ಕೆ ಬಂದಿದ್ದಾರೆ' ನಾವು ಅವರನ್ನು ಸ್ವಾಗತಿಸುತ್ತೇವೆ. ನಾವು ನಮ್ಮ ಸಮಾಜವನ್ನು ಒಡೆಯಲು ಬಿಡುವುದಿಲ್ಲ, ಇದನ್ನು ಸಂಘಟಿಸಿಕೊಂಡು ಜಹೋಗಬೇಕಾಗಿದೆ. ಈ ಜನರು ಹಲವು ವರ್ಷಗಳಿಂದ ಕ್ರೈಸ್ತಧರ್ಮವನ್ನು ಪಾಲೀಸುತ್ತಿದ್ದರು. ಅವರನ್ನು ನಾನು ಹಲವು ಬಾರಿ ಭೇಟಿಯಾಗಿದ್ದೇನೆ ಮತ್ತು ಇವರ ನಿರ್ಧಾರಕ್ಕೆ ಮತ್ತೊಂದು ಬಾರಿ ವಿಚಾರ ಮಾಡಿ ಎಂದು ಹೇಳಿದ್ದೇನೆ" ಎಂದು ಸಂಘ ಪ್ರಚಾರಕ ಮತ್ತು ಧರ್ಮ ಜಾಗರಣ ಸಂಘಟನೆಯ ಮುಖ್ಯಸ್ಥ ಖೆಮ್‌ ಚಂದ್ರ ತಿಳಿಸಿದ್ದಾರೆ. 
 '
78 ವರ್ಷ ವಯಸ್ಸಿನ ರಾಜೇಂದ್ರ ಸಿಂಗ್‌‌ ಹೇಳುವುದೇನೆಂದರೆ ತಾನು ಹಿಂದು ಧರ್ಮಕ್ಕೆ ಬಂದಿರುವುದು ನನಗೆ ತುಂಬಾ ಖುಷಿ ತಂದಿದೆ. ಕಳೆದ ವರ್ಷ ಒಂದು ದಿನ ನಾನು ಚರ್ಚನ ಎದುರಗಡೆ ಮಲಗಿದ್ದೆ ಆಗ ನನಗೆ ಪ್ಯಾರಾಲಿಸಿಸ್‌ ಆಯಿತು. ನನಗೆ ಅಲುಗಾಡಲು ಕೂಡ ಆಗುತ್ತಿರಲಿಲ್ಲ. ಅಂದಿನಿಂಗ ನನಗೆ ಅನಿಸಿರುವುದೇನೆಂದರೆ ಇದು ಮಾತಾ ದೇವಿಯ ಶಾಪವಾಗಿದೆ ,ಏಕೆಂದರೆ ನಾನು ನನ್ನ ವಿಶ್ವಾಸವನ್ನು ಮುರಿದಿದ್ದೇನೆ ಎಂದು ಹೇಳಿದ್ದಾನೆ. 
 

Share this Story:

Follow Webdunia kannada