Webdunia - Bharat's app for daily news and videos

Install App

ಇಂದಿನಿಂದ ವಿಬ್ ಗಯಾರ್ ಶಾಲೆ ಪುನರಾರಂಭ

Webdunia
ಸೋಮವಾರ, 28 ಜುಲೈ 2014 (09:12 IST)
6 ವರ್ಷದ ವಿದ್ಯಾರ್ಥಿನಿಯ ಮೇಲಿನ ಲೈಂಗಿಕ ದೌರ್ಜನ್ಯ ದ ಕಾರಣಕ್ಕೆ 13 ದಿನಗಳಿಂದ ಮುಚ್ಚಲಾಗಿದ್ದ ನಗರದ ಮಾರತಹಳ್ಳಿಯ ವಿಬ್ ಗಯಾರ ಶಾಲೆ ಇಂದಿನಿಂದ ಪುನರಾರಂಭಗೊಳ್ಳಲಿದೆ. 

ಒಂದನೇ ಹಂತದಲ್ಲಿ 5 ನೇ ತರಗತಿಯಿಂದ 10 ನೇ ತರಗತಿಯವರೆಗಿನ ತರಗತಿಗಳು ಇಂದಿನಿಂದ  ಪುನರಾರಂಭಗೊಳ್ಳಲಿದ್ದು, ಎರಡನೇ ಹಂತವಾಗಿ ಗುರುವಾರದಿಂದ ಎಲ್ಲ ತರಗತಿಗಳು ಪುನರಾರಂಭಗೊಳ್ಳಲಿವೆ ಎಂದು ಆಡಳಿತ ಮಂಡಳಿ ತಿಳಿಸಿದೆ.
 
ಇಂದು ಸ್ವತಃ ಪೋಷಕರೇ ಮಕ್ಕಳನ್ನು ಶಾಲೆಗೆ ಕರೆ ತರುತ್ತಿದ್ದು, ಆಡಳಿತ ಮಂಡಳಿ ಜತೆ ಮತ್ತೆ ಮಾತುಕತೆಯನ್ನು ಮುಂದುವರೆಯಲಿದ್ದಾರೆ. 
 
ಕಳೆದ ಕೆಲ ದಿನಗಳ ಹಿಂದೆ ಶಾಲೆಯಲ್ಲಿ ನಡೆದ ಪುಟ್ಟ ಮಗುವಿನ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣ ರಾಜ್ಯಾದ್ಯಂತ ಪ್ರಖರ ಖಂಡನೆ, ವಿರೋಧ, ಪ್ರತಿಭಟನೆಗೆ ಕಾರಣವಾಗಿತ್ತು. ಶಾಲೆಯ ಮುಂದೆ ಪಾಲಕರು ಸಹ ತೀವೃ ಸ್ವರೂಪದ ಪ್ರತಿಭಟನೆ ಕೈಗೊಂಡಿದ್ದರು. ಅಲ್ಲದೇ ಮಕ್ಕಳ ರಕ್ಷಣೆಗೆ ಸಂಬಧಿಸಿದಂತೆ ಆಡಳಿತ ಮಂಡಳಿ ಜತೆ ಚರ್ಚೆ ನಡೆಸಿ ಪೋಷಕರು 40 ಬೇಡಿಕೆಗಳನ್ನಿಟ್ಟಿದ್ದರು. ಇದುವರೆಗೂ ಆಡಳಿತ ಮಂಡಳಿ 11 ಬೇಡಿಕೆ ಈಡೇರಿಸಿದ್ದು, ಪೋಷಕರು  ಮತ್ತು ಆಡಳಿತ  ಮಂಡಳಿ ನಡುವೆ ಸಂಧಾನವಾಗಿದೆ. 
 
ಮಕ್ಕಳ ಶಿಕ್ಷಣಕ್ಕೆ ತೊಡಕಾಗುತ್ತಿರುವುದರಿಂದ ಶಾಲೆಯನ್ನು ಪುನರ್ ಆರಂಭಿಸಲು ಅನುಮತಿ ನೀಡಬೇಕೆಂದು ಪೋಷಕರೇ ಸರಕಾರದ ಬಳಿ ಬೇಡಿಕೆನ್ನಿಟ್ಟಿದ್ದರು. ಹಾಗಾಗಿ ಸರಕಾರ ಶಾಲೆಯನ್ನು ಮತ್ತೆ ತೆರೆಯುವುದಕ್ಕೆ ಅನುಮತಿ ನೀಡಿತ್ತು. 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ