Select Your Language

Notifications

webdunia
webdunia
webdunia
webdunia

ಗತಿಮಾನ್: ಚಲಿಸುತ್ತಿದ್ದ ರೈಲಿನಲ್ಲಿ ಹುಟ್ಟಿದ ಈ ಪೋರ

ಗತಿಮಾನ್: ಚಲಿಸುತ್ತಿದ್ದ ರೈಲಿನಲ್ಲಿ ಹುಟ್ಟಿದ ಈ ಪೋರ
ಆಗ್ರಾ , ಶನಿವಾರ, 11 ಏಪ್ರಿಲ್ 2015 (12:39 IST)
ಗರ್ಭಿಣಿ ಮಹಿಳೆಯೊಬ್ಬರು ಚಲಿಸುತ್ತಿದ್ದ ರೈಲಿನಲ್ಲಿಯೇ ಮಗುವೊಂದಕ್ಕೆ ಜನ್ಮ ನೀಡಿದ ಘಟನೆ ಮಥುರಾದಲ್ಲಿ ನಡೆದಿದೆ. ತಾಯಿ ಮಗು ಆರೋಗ್ಯದಿಂದಿದ್ದು ಶಿಶುವಿಗೆ ರೈಲು ಅಧಿಕಾರಿಗಳು ‘ಗತಿಮಾನ್’ ಎಂದು ನಾಮಕರಣ ಮಾಡಿದ್ದಾರೆ. 

ತುಂಬು ಗರ್ಭಿಣಿಯಾಗಿದ್ದ 25 ವರ್ಷದ ಸೋನಮ್ ಮತ್ತು ಆಕೆಯ ಪತಿ ನವದೆಹಲಿ ರೈಲು ನಿಲ್ದಾಣದಿಂದ ರೈಲನ್ನೇರಿದ್ದರು. ರೈಲು ಮಥುರಾ ರೈಲು ನಿಲ್ದಾಣವನ್ನು ಸಮೀಪಿಸುತ್ತಿದ್ದಂತೆ ಸೋನಮ್ ಪ್ರಸವ ವೇದನೆಯಿಂದ ನರಳಲು ಪ್ರಾರಂಭಿಸಿದ್ದಾಳೆ. ಆಕೆಯ ಈ ಸಂಕಷ್ಟದ ಸ್ಥಿತಿಯಲ್ಲಿ ಸ್ಪಂದಿಸಿದ ಸಹ ಪ್ರಯಾಣಿಕರು ದಂಪತಿಗಳಿಗೆ ತಮ್ಮಿಂದಾದ ಸಹಕಾರವನ್ನು ನೀಡಿದ್ದಾರೆ. ಹೀಗಾಗಿ ಆಕೆ ಸುಸೂತ್ರವಾಗಿ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ಸುದ್ದಿಯನ್ನು ತಿಳಿದ ಜಿಆರ್‌ಎಫ್, ಆರ್‌ಆರ್‌ಎಫ್ ಮತ್ತು ವೈದ್ಯರ ತಂಡ ರೈಲು ಮಥುರಾ ನಿಲ್ದಾಣವನ್ನು ತಲುಪುತ್ತಿದ್ದಂತೆಯೇ ಸಹಾಯಕ್ಕಾಗಿ ಧಾವಿಸಿದೆ. 
 
ರೈಲು ಆಗ್ರಾ ನಿಲ್ದಾಣವನ್ನು ತಲುಪಿದಾಗ ತಾಯಿ ಮಗುವಿನ ಚಿಕಿತ್ಸೆಗಾಗಿ 20 ನಿಮಿಷ ರೈಲು ನಿಲ್ಲಿಸಲಾಯಿತು. ವೈದ್ಯರು ಅವರಿಬ್ಬರ ಆರೋಗ್ಯ ಸ್ಥಿತಿಯನ್ನು ಪರಿಶೀಲಿಸಿದರು.ರೈಲು ಅಧಿಕಾರಿ ಗೋಪೇಶ್ ಖನ್ನಾ ತಾಯಿ ಮಗುವಿಗೆ ಬೇಕಾದ ಅಗತ್ಯ ವಸ್ತುಗಳನ್ನು ಪೂರೈಸಿ ಮಾನವೀಯತೆ ನೆರೆದರಲ್ಲದೇ ಮಗುವಿಗೆ ‘ಗತಿಮಾನ್’ ಎಂದು ಹೆಸರಿಟ್ಟರು. 
 
ಈ ಕುರಿತು ಮಾತನಾಡಿದ ಅವರು "ಭಾರತದ ಪ್ರಥಮ ಸೆಮಿ ಹೈಸ್ಪೀಡ್ ರೈಲು ಸೇವೆ ಗತಿಮಾನ್, ಸದ್ಯದಲ್ಲಿಯೇ ನವದೆಹಲಿ - ಆಗ್ರಾ ಮಾರ್ಗವಾಗಿ ಚಾಲನೆಗೊಳ್ಳಲಿದ್ದು  ಆ ಕಾರಣಕ್ಕಾಗಿ ನಾವು ಮಗುವಿನ ಹೆಸರನ್ನು  ‘ಗತಿಮಾನ್’ ಎಂದು ನಮ್ಮ ದಾಖಲೆಗಳಲ್ಲಿ ದಾಖಲಿಸಿಕೊಂಡೆವು", ಎಂದು ಹೇಳಿದ್ದಾರೆ. 

Share this Story:

Follow Webdunia kannada