Select Your Language

Notifications

webdunia
webdunia
webdunia
webdunia

ವಿದ್ಯುತ್ ವಿತರಣೆ : ಆಂಧ್ರ ಸಿಎಂ ವಿರುದ್ಧ ತೆಲಂಗಾಣ ಸಿಎಂ ವಾಗ್ದಾಳಿ

ವಿದ್ಯುತ್ ವಿತರಣೆ : ಆಂಧ್ರ ಸಿಎಂ ವಿರುದ್ಧ ತೆಲಂಗಾಣ ಸಿಎಂ ವಾಗ್ದಾಳಿ
ಹೈದರಾಬಾದ್ , ಭಾನುವಾರ, 26 ಅಕ್ಟೋಬರ್ 2014 (10:48 IST)
ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ದುಹಂಕಾರಿ ಮತ್ತು ಸೊಕ್ಕಿನ ಮನುಷ್ಯ ಎಂದು ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ ಅವರು ಹೇಳಿದ್ದಾರೆ.
 
ಶ್ರೀಶೈಲಂ ಜಲ ವಿದ್ಯುತ್ ಯೋಜನೆ ಸ್ಥಗಿತ ಹಿನ್ನಲೆಯಲ್ಲಿ ಚಂದ್ರಬಾಬು ನಾಯ್ಡು ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡ ತೆಲಂಗಾಣ ಸಿಎಂ ಕೆಸಿಆರ್ ಅವರು, ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಮಾಧ್ಯಮಗಳಲ್ಲಿ ಸುಳ್ಳು ಹೇಳಿಕೊಂಡು ತಿರುಗುತ್ತಿದ್ದಾರೆ. ಒಪ್ಪಂದದ ಪ್ರಕಾರ ತೆಲಂಗಾಣ ಭಾಗಕ್ಕೆ ಆಂಧ್ರ ಪ್ರದೇಶ ಶೇ.53.89ರಷ್ಟು ವಿದ್ಯುತ್ ನೀಡಬೇಕು. ಇಲ್ಲವಾದರೆ ತಾವು ಸುಪ್ರೀಂಕೋರ್ಟ್ ಮೆಟ್ಟಿಲೇರುವುದಾಗಿ ಕೆಸಿಆರ್ ಎಚ್ಚರಿಕೆ ನೀಡಿದ್ದಾರೆ.
 
ಹೈದರಾಬಾದಿನಲ್ಲಿ ನಡೆದ ಕ್ಯಾಬಿನೆಟ್ ಸಭೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಚಂದ್ರಬಾಬು ನಾಯ್ಡು ಅವರು ಆಂಧ್ರ ಪ್ರದೇಶ ವಿಭಜನಾ ಕಾಯ್ದೆಯನ್ನು ಉಲ್ಲಂಘಿಸುತ್ತಿದ್ದು, ಒಪ್ಪಂದದ ಪ್ರಕಾರ ಆಂಧ್ರ ಪ್ರದೇಶ ತೆಲಂಗಾಣಕ್ಕೆ ಶೇ.53.89ರಷ್ಟು ವಿದ್ಯುತ್ ನೀಡಬೇಕು. ಆದರೆ ತೆಲಂಗಾಣ ವಿಚಾರವಾಗಿ ನಾಯ್ಡು ಅವರು ಅಹಂಕಾರದಿಂದ ವರ್ತಿಸುತ್ತಿದ್ದಾರೆ. ವಿದ್ಯುತ್ ಉತ್ಪಾದನೆಗಾಗಿಯೇ ಶ್ರೀಶೈಲಂ ಜಲ ವಿದ್ಯುತ್ ಯೋಜನೆಯನ್ನು ಕೇಂದ್ರ ಸರ್ಕಾರ ಮಂಜೂರು ಮಾಡಿದ್ದು, ಇದೀಗ ಅದನ್ನು ಸ್ಥಗಿತಗೊಳಿಸುವುದು ಸರಿಯಲ್ಲ. ರಾಜ್ಯ ವಿಭಜನಾ ಕಾನೂನಿನ ಅನ್ವಯ ಎಲ್ಲ ಯೋಜನೆಗಳಲ್ಲೂ ಆಂಧ್ರ ಪ್ರದೇಶ ಸರ್ಕಾರ ತೆಲಂಗಾಣ ಭಾಗಕ್ಕೆ ಶೇ.54ರಷ್ಟು ಮೀಸಲಿಡಬೇಕು. ಇಲ್ಲವಾದರೆ ಆಂಧ್ರ ಪ್ರದೇಶ ಸರ್ಕಾರದ ವಿರುದ್ಧ ಸುಪ್ರೀಂಕೋರ್ಟ್‌ನಲ್ಲಿ ತಾವು ಅರ್ಜಿ ಸಲ್ಲಿಸುವುದಾಗಿ ಕೆಸಿಆರ್ ಹೇಳಿದ್ದಾರೆ.
 
ಈ ಹಿಂದೆ ರಾಯಲಸೀಮಾ ಭಾಗದಲ್ಲಿ ನೀರಿನ ಅಭಾವ ಉಂಟಾಗುತ್ತಿದ್ದು, ಶ್ರೀಶೈಲಂ ಜಲ ವಿದ್ಯುತ್ ಯೋಜನೆಯನ್ನು ಸ್ಥಗಿತಗೊಳಿಸಬೇಕು ಎಂದು ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಕೃಷ್ಣಾ ನ್ಯಾಯಾಧಿಕರಣಕ್ಕೆ ಪತ್ರ ಬರೆದಿದ್ದರು. ಈ ವಿಚಾರ ತಿಳಿಯುತ್ತಿದ್ದಂತೆಯೇ ಆಂಧ್ರ ಪ್ರದೇಶ ಸಚಿವರ ಚಂದ್ರಬಾಬು ನಾಯ್ಡು ಅವರ ವಿರುದ್ಧ ವಾಗ್ದಾಳಿ ನಡೆಸಿದರು. ಇದರ ಬೆನ್ನಲ್ಲೇ ಟಿಆರ್‌ಎಸ್ ಕಾರ್ಯಕರ್ತರು ನಲ್ಗೊಂಡ ಮತ್ತು ನಿಜಾಮಾಬಾದಿನಲ್ಲಿರುವ ತೆಲುಗುದೇಶಂ ಪಕ್ಷ ಕಚೇರಿಗಳ ಮೇಲೆ ದಾಳಿ ನಡೆಸಿದ್ದರು.
 

Share this Story:

Follow Webdunia kannada