Webdunia - Bharat's app for daily news and videos

Install App

ಇನ್ಫೋಸಿಸ್ ಕಚೇರಿಯಲ್ಲಿ ಉದ್ಯೋಗಿಯ ನಗ್ನ ಮೃತದೇಹ ಪತ್ತೆ

Webdunia
ಬುಧವಾರ, 31 ಮೇ 2017 (15:33 IST)
ಸಾಫ್ಟ್‌ವೇರ್ ಕ್ಷೇತ್ರದ ದಿಗ್ಗಜ ಕಂಪೆನಿಯಾದ ಇನ್ಫೋಸಿಸ್ ಕಚೇರಿಯಲ್ಲಿ ಉದ್ಯೋಗಿಯೊಬ್ಬನ ನಗ್ನ ಮೃತದೇಹ ಪತ್ತೆಯಾಗಿದೆ.
 
ತಿರುವಣ್ಣಮಲೈ ಜಿಲ್ಲೆಯ ಮೂಲದ 32 ವರ್ಷ ವಯಸ್ಸಿನ ಇಳಿಯರಾಜಾ ಅರುಣಾಚಲಂ ಅವರ ನಗ್ನ ಮೃತ ದೇಹ ನಿಗೂಢ ಪರಿಸ್ಥಿತಿಯಲ್ಲಿ ಕಚೇರಿಯ ಶೌಚಾಲಯದಲ್ಲಿ ಪತ್ತೆಯಾಗಿದೆ.  
 
ಕೆಲ ಸಹದ್ಯೋಗಿಗಳು ಶೌಚಾಲಯಕ್ಕೆ ತೆರಳಿದಾಗ ಇಳಿಯರಾಜಾ ನಗ್ನ ಮೃತದೇಹ ಕಂಡು ಗಾಬರಿಯಾಗಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇಳಿಯರಾಜಾನನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಮಾರ್ಗ ಮಧ್ಯದಲ್ಲಿಯೇ ಕೊನೆಯುಸಿರು ಎಳೆದಿದ್ದಾರೆ.
 
ಪೊಲೀಸರು ಇಳಿಯರಾಜಾ ಅರುಣಾಚಲಂ ನಿಗೂಢ ಸಾವಿನ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. 
 
ಇಳಿಯರಾಜಾ ನಿಗೂಢ ಸಾವಿನ ಹಿಂದೆ ಕೆಲ ವ್ಯಕ್ತಿಗಳಿರಬಹುದು ಎಂದು ಕುಟುಂಬದ ಸದಸ್ಯರು ಶಂಕಿಸಿದ್ದಾರೆ. ಆದರೆ, ಹೆಚ್ಚಿನ ಮಾಹಿತಿ ನೀಡಲು ನಿರಾಕರಿಸಿದ್ದಾರೆ.
 
ಜನವರಿಯಲ್ಲಿ, ಇನ್ಫೋಸಿಸ್ ಉದ್ಯೋಗಿ ಪುಣೆ ಕಚೇರಿಯಲ್ಲಿ ಸತ್ತರು. ಪುಣೆಯಲ್ಲಿನ ಇನ್ಫೋಸಿಸ್ ಕಟ್ಟಡದ ಒಂಬತ್ತನೇ ಮಹಡಿಯಲ್ಲಿ ಸಭೆ ಕೊಠಡಿಯಲ್ಲಿ ಮೃತಪಟ್ಟಿದ್ದ ರಸಿಲ್ ರಾಜು ಒಪಿ, ಕೇರಳದ ಕೋಜಿಕ್ಕೋಡ್ಗೆ ಸೇರಿದವರಾಗಿದ್ದಾರೆ. ಅವಳ ಕೊಲೆಗೆ ಸಂಬಂಧಿಸಿದಂತೆ ಭದ್ರತಾ ಸಿಬ್ಬಂದಿಯನ್ನು ಬಂಧಿಸಲಾಯಿತು.
 
ಕಳೆದ ಜನವರಿ ತಿಂಗಳಲ್ಲಿ ಪುಣೆಯ ಇನ್ಫೋಸಿಸ್ ಕಚೇರಿಯ ಒಂಬತ್ತನೇ ಅಂತಸ್ತಿನಲ್ಲಿರುವ ಸಭಾಂಗಣದಲ್ಲಿ ಕೇರಳದ ಕೋಳಿಕ್ಕೋಡ್ ಮೂಲದ ರಸಿಲಾ ರಾಜು ಎನ್ನುವ ಮಹಿಳಾ ಉದ್ಯೋಗಿ ಶವವಾಗಿ ಪತ್ತೆಯಾಗಿದ್ದರು. ಮಹಿಳಾ ಉದ್ಯೋಗಿಯ ಹತ್ಯೆಗೆ ಸಂಬಂಧಿಸಿದಂತೆ ಭದ್ರತಾ ಸಿಬ್ಬಂದಿಯೊಬ್ಬನನ್ನು ಬಂಧಿಸಲಾಗಿತ್ತು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ನನ್ನ ಹೆಸರು ವೋಟರ್ ಲಿಸ್ಟ್ ನಲ್ಲಿಲ್ಲ ಎಂದು ಸುಳ್ಳು ಹೇಳಿದ್ರಾ ತೇಜಸ್ವಿ ಯಾದವ್

ಜಾರ್ಖಾಂಡ್ ಮಾಜಿ ಸಿಎಂ ಶಿಬು ಸೊರೇನ್ ಇನ್ನಿಲ್ಲ

ವೋಟ್ ಗಾಗಿ ಟಿಪ್ಪು ಸಂತತಿಯನ್ನು ವೈಭವೀಕರಿಸೋದು ಕಾಂಗ್ರೆಸ್ ಜಾಯಮಾನ: ವಿಜಯೇಂದ್ರ

ಸೋನಿಯಾ ಗಾಂಧಿ ಪ್ರಧಾನಿ ಪದವಿ ಬಿಟ್ಟ ತ್ಯಾಗಮಯಿ ಎಂದು ಸಿದ್ದರಾಮಯ್ಯಗೆ ಡಿಕೆ ಶಿವಕುಮಾರ್ ಟಾಂಗ್

ಸುಧಾಮೂರ್ತಿ ಹೇಳುವ ಈ ಮೂರು ಜೀವನಪಾಠವನ್ನು ತಪ್ಪದೇ ಪಾಲಿಸಿ

ಮುಂದಿನ ಸುದ್ದಿ