Select Your Language

Notifications

webdunia
webdunia
webdunia
webdunia

ಆಮ್ ಆದ್ಮಿ ಪಕ್ಷದ ಮಾಜಿ ಸಚಿವನ ವಿರುದ್ಧ ಚಾರ್ಜ್‌ಶಾಟ್ ಸಲ್ಲಿಕೆ

ಆಮ್ ಆದ್ಮಿ ಪಕ್ಷದ ಮಾಜಿ ಸಚಿವನ ವಿರುದ್ಧ ಚಾರ್ಜ್‌ಶಾಟ್ ಸಲ್ಲಿಕೆ
ನವದೆಹಲಿ , ಬುಧವಾರ, 1 ಅಕ್ಟೋಬರ್ 2014 (15:36 IST)
ಆಫ್ರಿಕನ್‌ ಮಹಿಳೆಯರು ವಾಸಿಸುತ್ತಿದ್ದ ಪ್ರದೇಶದಲ್ಲಿ ಮಧ್ಯರಾತ್ರಿ ದಾಳಿ ನಡೆಸಿ ಲೈಂಗಿಕ ಕಿರುಕುಳ ನೀಡಿದ ಹಾಗೂ ಇತರ ಆರೋಪಗಳಿಗೆ ಸಂಬಂಧಿಸಿದಂತೆ  ಮಾಜಿ ಕಾನೂನು ಸಚಿವ ಹಾಗೂ ಆಮ್‌ ಆದ್ಮಿ ಪಕ್ಷದ ಮುಖಂಡ ಸೋಮನಾಥ್‌ ಭಾರ್ತಿ ವಿರುದ್ಧ ದೋಷಾರೋಪ ದಾಖಲಿಸಿರುವುದಾಗಿ ದೆಹಲಿ ಪೊಲೀಸರು ನವದೆಹಲಿಯಲ್ಲಿನ ಸ್ಥಳೀಯ ನ್ಯಾಯಾಲಯಕ್ಕೆ  ಬುಧವಾರ ತಿಳಿಸಿದ್ದಾರೆ.
 
ನ್ಯಾಯಾಲಯದ ಹಿಂದಿನ ಆದೇಶದನ್ವಯ, ಪ್ರಕರಣ ಸಂಬಂಧ ಸೆಪ್ಟಂಬರ್ 29ರಂದು ಚಾರ್ಜ್‌ಶೀಟ್‌ ದಾಖಲಿಸಿದೆ ಎಂದು ಮೆಟ್ರೋಪಾಲಿಟನ್‌ ಮ್ಯಾಜಿಸ್ಟ್ರೇಟ್‌ ಚೇತನ್‌ ಸಿಂಗ್ ಅವರಿಗೆ ಪ್ರಕರಣದ ತನಿಖಾಧಿಕಾರಿ ವಿಜಯ್ ಚಾಂದೆಲ್‌ ಅವರು ತಿಳಿಸಿದರು.
 
ಸಂಕ್ಷಿಪ್ತವಾಗಿ ದೋಷಾರೋಪ ಪಟ್ಟಿಯನ್ನು ಪರಿಶೀಲಿಸಿದ ಚೇತನ್‌ಸಿಂಗ್ ‘ಮುಖ್ಯ ಮೆಟ್ರೋಪಾಲಿಟನ್‌ ಮ್ಯಾಜಿಸ್ಟ್ರೇಟ್‌ ಎದುರು ಬುಧವಾರ ಮಧ್ಯಾಹ್ನ 2 ಗಂಟೆಗೆ ಹಾಜರಾಗುವಂತೆ  ಪ್ರಕರಣದ ತನಿಖಾಧಿಕಾರಿಗೆ ಸೂಚಿಸಲಾಗಿದೆ’ ಎಂದು ತಿಳಿಸಿದರು.
 
ಪ್ರಕರಣದಲ್ಲಿ ಭಾರ್ತಿ ಅವರನ್ನು ಒಳಗೊಂಡಂತೆ 18 ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ 16 ಕಲಂಗಳಡಿ ಚಾರ್ಜ್‌ಶೀಟ್‌ ದಾಖಲಿಸಲಾಗಿದೆ ಎಂದು ಚಾಂದೆಲ್‌ ತಿಳಿಸಿದ್ದಾರೆ.

Share this Story:

Follow Webdunia kannada