ಶ್ರೀಹರಿಕೋಟ : ಮತ್ತೊಂದು ಐತಿಹಾಸಿಕ ಸಾಧನೆಯತ್ತ ಇಸ್ರೋ ಹೆಜ್ಜೆ ಇಟ್ಟಿದೆ. ಶುಭ ಶುಕ್ರವಾರವಾದ ಇಂದು ಶ್ರೀಹರಿಕೋಟಾದ ಸತೀಶ್ ಧವನ್ ಅಂತರಿಕ್ಷ ಕೇಂದ್ರದಿಂದ ಭಾರತದ ಗಗನನೌಕೆ ನಭಕ್ಕೆ ಚಿಮ್ಮಲಿದೆ.
ಬಾಹುಬಲಿ ರಾಕೆಟ್ ಎಂದೇ ಹೆಸರಾದ ಜಿಎಲ್ಎಲ್ವಿ ಮಾರ್ಕ್ 3 ರಾಕೆಟ್ ಇದನ್ನು ಹೊತ್ತೊಯ್ಯಲಿದೆ. ಚಂದ್ರಯಾನ-3 ಉಡಾವಣೆ ಬಗ್ಗೆ ಈ 10 ಅಂಶಗಳನ್ನು ನೀವು ತಿಳಿದುಕೊಳ್ಳಲೇ ಬೇಕು.
* ಬಾಹುಬಲಿ ರಾಕೆಟ್ ಎಂದು ಕರೆಯಲ್ಪಡುವ ಜಿಎಸ್ಎಲ್ವಿ ಮಾರ್ಕ್ 3 ಹೆವಿ-ಲಿಫ್ಟ್ ಉಡಾವಣಾ ವಾಹನದಲ್ಲಿ ಚಂದ್ರನಲ್ಲಿ ಇಳಿಯುವ ಲ್ಯಾಂಡರ್ ವಿಕ್ರಮ್ ಅನ್ನು ಅಳವಡಿಸಲಾಗಿದೆ. ಇದು 43.5 ಮೀ ಎತ್ತರವಿದ್ದು, ಕುತುಬ್ ಮಿನಾರ್ನ ಅರ್ಧಕ್ಕಿಂತಲೂ ಹೆಚ್ಚು ಎತ್ತರವಾಗಿದೆ.
* ಇಂದು ಮಧ್ಯಾಹ್ನ 2:35ಕ್ಕೆ ಚಂದ್ರಯಾನ-3 ಉಡಾವಣೆಯಾಗಲಿದೆ. ಇದು 40 ದಿನಗಳ ಕಾಲ ಅಂತರಿಕ್ಷದಲ್ಲಿ ಪ್ರಯಾಣಿಸಲಿದ್ದು, ಆಗಸ್ಟ್ 23 ಇಲ್ಲವೇ 24ರಂದು ಚಂದ್ರನ ಮೇಲೆ ಇಳಿಯಲಿದೆ.
* 4 ವರ್ಷಗಳ ಹಿಂದೆ ಚಂದ್ರಯಾನ-2 ಪ್ರಯೋಗಿಸಿ ಚಂದ್ರನ ಅಂಗಳದಲ್ಲಿ ಲ್ಯಾಂಡಿಂಗ್ ವೇಳೆ ಉಂಟಾದ ವೈಫಲ್ಯದಿಂದ ಪಾಠ ಕಲಿತ ಇಸ್ರೋ ಇದೀಗ ಮತ್ತಷ್ಟು ಉತ್ಸಾಹದೊಂದಿಗೆ ಚಂದ್ರಯಾನ-3 ಪ್ರಯೋಗಕ್ಕೆ ಸಜ್ಜಾಗಿದೆ.
* 2008ರಲ್ಲಿ ಭಾರತದ ಮೊದಲ ಚಂದ್ರಯಾನ ಸಮಯದಲ್ಲಿ ಆದ ಸಂಶೋಧನೆಯೊಂದು ಜಗತ್ತನ್ನೇ ವಿಸ್ಮಯಗೊಳಿಸಿತ್ತು. ಚಂದ್ರನ ದಕ್ಷಿಣ ಧ್ರುವದಲ್ಲಿ ನೀರಿನ ಅಣುಗಳು ಕಂಡುಬಂದಿದ್ದು, ಇದೀಗ ಚಂದ್ರಯಾನ-3 ಮೊದಲ ಬಾರಿಗೆ ಅದೇ ಸ್ಥಳದಲ್ಲಿ ಇಳಿಯಲಿದೆ.
* ವಿಕ್ರಮ್ ಸುರಕ್ಷಿತ ಹಾಗೂ ನಾಜೂಕಿನಿಂದ ಚಂದ್ರನ ಮೇಲೆ ಇಳಿಯಲು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ.
* ವಿಜ್ಞಾನಿಗಳು ಚಂದ್ರನ ಮಣ್ಣನ್ನು ವಿಶ್ಲೇಷಿಸಲು, ಚಂದ್ರನ ಮೇಲ್ಮೈ ಸುತ್ತಲೂ ತಿರುಗಲು ಹಾಗೂ ಚಂದ್ರನ ಕಂಪನಗಳನ್ನು ದಾಖಲಿಸಲಿಸಲು ಆಶಿಸಿದ್ದಾರೆ.
* ಕಳೆದ ಬಾರಿಯ ಚಂದ್ರಯಾನದ ಮಿಷನ್ನಿಂದ ಸಾಕಷ್ಟು ವೈಜ್ಞಾನಿಕ ವಿಷಯಗಳನ್ನು ಕಲಿತಿದ್ದು, ಈ ಬಾರಿ ಲ್ಯಾಂಡರ್ನಲ್ಲಿ ಎಂಜಿನ್ಗಳ ಸಂಖ್ಯೆಯನ್ನು 5 ರಿಂದ 4ಕ್ಕೆ ಇಳಿಸಲಾಗಿದೆ. ಮಾತ್ರವಲ್ಲದೇ ಸಾಫ್ಟ್ವೇರ್ ಅನ್ನು ನವೀಕರಿಸಲಾಗಿದೆ ಎಂದು ಇಸ್ರೋ ತಿಳಿಸಿದೆ.