Select Your Language

Notifications

webdunia
webdunia
webdunia
webdunia

ಕಾಶ್ಮೀರಿ ಜನರ ನೊಂದ ಮನಗಳನ್ನು ಸಾಂತ್ವನಗೊಳಿಸಬೇಕು: ಮೆಹಬೂಬ ಮುಫ್ತಿ

ಕಾಶ್ಮೀರಿ ಜನರ ನೊಂದ ಮನಗಳನ್ನು ಸಾಂತ್ವನಗೊಳಿಸಬೇಕು: ಮೆಹಬೂಬ ಮುಫ್ತಿ
ಜಮ್ಮು , ಮಂಗಳವಾರ, 30 ಆಗಸ್ಟ್ 2016 (18:58 IST)
ಕೇಂದ್ರ ನಾಯಕತ್ವ ಪಾಕಿಸ್ತಾನಕ್ಕಿಂತ ಒಂದೆರಡು ಹೆಜ್ಜೆ ಮುಂದೆ ಹೋಗಿ ಕಾಶ್ಮೀರಿಗಳ ಗಾಯಕ್ಕೆ ಮುಲಾಮು ಹಚ್ಚಬೇಕು ಎಂದು ಮುಖ್ಯಮಂತ್ರಿ ಮೆಹಬೂಬ ಮುಫ್ತಿ ಮಾರ್ಮಿಕವಾಗಿ ಹೇಳಿದರು. ಪ್ರಧಾನಿ ಮೋದಿ ತಮ್ಮ ಜನಾದೇಶ ಬಳಸಿಕೊಂಡು ಕಾಶ್ಮೀರದ ಮಕ್ಕಳ ಜೀವನ ಮತ್ತು ಭವಿಷ್ಯವನ್ನು ರಕ್ಷಿಸಬೇಕು  ಮತ್ತು ನೊಂದ ಮನಗಳಿಗೆ ಸಾಂತ್ವನ ಹೇಳುವ ಕೆಲಸ ಮಾಡಬೇಕು ಎಂದು ಮುಫ್ತಿ ತಿಳಿಸಿದರು.
 
 
ಫುಡ್ ಕ್ರಾಫ್ಟ್ ಸಂಸ್ಥೆಯ ಉದ್ಘಾಟನೆಯಲ್ಲಿ ಅವರು ಮಾತನಾಡುತ್ತಾ, ಜಮ್ಮು ಕಾಶ್ಮೀರದ ಜನರ ನೊಂದ ಮನಕ್ಕೆ ಸಾಂತ್ವನ ಹೇಳಲು , ಅವರ ಗಾಯಕ್ಕೆ ಮುಲಾಮು ಲೇಪಿಸಲು ಕಾಂಗ್ರೆಸ್, ಸಿಪಿಎಂ, ಜೆಡಿಯು ಸೇರಿದಂತೆ ದೇಶದ ಇಡೀ ನಾಯಕತ್ವ ಮುಂದೆ ಬಂದು ಶಾಂತಿ ನಿರ್ಮಾಣದ ಉಪಕ್ರಮವನ್ನು ಬೆಂಬಲಿಸಬೇಕು ಎಂದು ಮೆಹಬೂಬಾ ಹೇಳಿದರು.
 
 ಮೋದಿ ಅವರಿಗೆ ಜಮ್ಮು ಕಾಶ್ಮೀರವನ್ನು ಬಾಧಿಸುತ್ತಿರುವ ಸಮಸ್ಯೆ ನೀಗಿಸಲು ವಾಜಪೇಯಿ ಮಾದರಿಯಲ್ಲಿ ದಿಟ್ಟ ನಿರ್ಧಾರ ಕೈಗೊಳ್ಳುವಷ್ಟು ಜನಾದೇಶವಿದೆ ಎಂದು ತಿಳಿಸಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಸುಜುಕಿಯಿಂದ ಐಷಾರಾಮಿ ಗಿಕ್ಸರ್, ಗಿಕ್ಸರ್ ಎಸ್‌ಎಫ್‌ ಬೈಕ್‌ಗಳು ಮಾರುಕಟ್ಟೆಗೆ