Webdunia - Bharat's app for daily news and videos

Install App

ಕೇಂದ್ರದಿಂದ ಒಂದೇ ಪುಟದ ಆದಾಯ ತೆರಿಗೆ ಸಲ್ಲಿಕೆ ನಮೂನೆ ಜಾರಿ

Webdunia
ಶುಕ್ರವಾರ, 31 ಮಾರ್ಚ್ 2017 (20:29 IST)
ಆದಾಯ ತೆರಿಗೆ ವಿವರ ಸಲ್ಲಿಕೆ ನಮೂನೆಯನ್ನು ಸರಳಗೊಳಿಸಿ ಒಂದೇ ಪುಟದಲ್ಲಿ ಜಾರಿಗೊಳಿಸಿ ಕೇಂದ್ರ ಸರಕಾರ ಅಧಿಸೂಚನೆ ಹೊರಡಿಸಿದೆ.
 
ಆದಾಯ ತೆರಿಗೆ ಸಲ್ಲಿಸುವವರು ಆಧಾರ ಸಂಖ್ಯೆ ನಮೂದಿಸುವುದು ಮತ್ತು ನೋಟು ನಿಷೇಧದ ನಂತರ 2 ಲಕ್ಷಕ್ಕೂ ಮೇಲ್ಪಟ್ಟ ಠೇವಣಿಯ ವಿವರಗಳನ್ನು ಉಲ್ಲೇಖಿಸುವುದು ಕಡ್ಡಾಯಗೊಳಿಸಿದೆ.
 
ಇಲ್ಲಿಯವರೆಗೆ ಆದಾಯ ತೆರಿಗೆ ವಿವರ ಸಲ್ಲಿಕೆ ನಮೂನೆ ಏಳು ಪುಟಗಳನ್ನು ಹೊಂದಿತ್ತು. ಇದೀಗ ಕೇವಲ ಒಂದು ಪುಟದ ಸರಳ ಐಟಿಆರ್‌ ನಮೂನೆ-1 ಸಹಜ್ ಎನ್ನುವ ಹೆಸರಲ್ಲಿ ಜಾರಿಗೆ ತಂದಿದೆ.
 
ನಮೂನೆ-1 ರಲ್ಲಿ 50 ಲಕ್ಷ ರೂಪಾಯಿ ವೇತನದ ಆದಾಯ ಹೊಂದಿರುವವರು ಆದಾಯ ತೆರಿಗೆ ಇಲಾಖೆಗೆ ಅರ್ಜಿಯನ್ನು ಭರ್ತಿ ಮಾಡಿ ಸಲ್ಲಿಸಬಹುದಾಗಿದೆ.
 
ಇದೀಗ ಆದಾಯ ತೆರಿಗೆ ಪಾವತಿಸುವ ಪ್ರತಿಯೊಬ್ಬರು ಆಧಾರ ಸಂಖ್ಯೆ ಮತ್ತು ಪಾನ್ ಸಂಖ್ಯೆಯನ್ನು ಕಡ್ಡಾಯವಾಗಿ ನಮೂದಿಸಬೇಕಾಗಿದ್ದಲ್ಲದೇ 2 ಲಕ್ಷಕ್ಕೂ ಅಧಿಕ ಹಣವನ್ನು ಠೇವಣಿ ಮಾಡಿದ್ದರೆ ಸಂಪೂರ್ಣ ವಿವರ ನೀಡುವುದು ಕಡ್ಡಾಯವಾಗಿದೆ.  

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಪಾಕ್‌, ಭಾರತ ನಡುವೆ ಹೆಚ್ಚಿದ ಉದ್ವಿಗ್ನತೆ: ಚೀನಾಗೂ ತಟ್ಟಿದ ಬಿಸಿ, ನಾಗರಿಕರಿಗೆ ಸಂದೇಶ ರವಾನೆ

ಸರ್ಕಾರದ ಈ ಕ್ರಮವು ದೇಶದ ಸ್ವಾಭಿಮಾನವನ್ನು ಹೆಚ್ಚಿಸಿದೆ: ಸಶಸ್ತ್ರ ಪಡೆಗಳನ್ನು ಅಭಿನಂದಿಸಿದ RSS

'Sindoor Is For Love, Not War: ಚರ್ಚೆ ಹುಟ್ಟುಹಾಕಿದ ಛಾಯಾಗ್ರಾಹಕನ ಪೋಸ್ಟ್‌

Operation Sindoor: ರಾಷ್ಟ್ರ ರಾಜಧಾನಿಯಲ್ಲಿ ಎರಡು ಬಾರಿ ಮೊಳಗಿದ ಸೈರನ್, ಬೆಚ್ಚಿದ ಜನತೆ

Pakistan ರಕ್ಷಣಾ ಸಚಿವ ಖವಾಜ ಆಸಿಫ್ ಬುದ್ಧಿವಂತಿಗೆ ಏನನ್ನಬೇಕೋ

ಮುಂದಿನ ಸುದ್ದಿ
Show comments