Select Your Language

Notifications

webdunia
webdunia
webdunia
webdunia

ಬೆಳೆ ವಿಮೆ ಯೋಜನೆ ಜಾರಿಗೆ ಕೇಂದ್ರ ಚಿಂತನೆ: ವೆಂಕಯ್ಯ ನಾಯ್ಡು

ಬೆಳೆ ವಿಮೆ ಯೋಜನೆ ಜಾರಿಗೆ ಕೇಂದ್ರ ಚಿಂತನೆ:   ವೆಂಕಯ್ಯ ನಾಯ್ಡು
ಬೆಂಗಳೂರು , ಸೋಮವಾರ, 27 ಜುಲೈ 2015 (13:38 IST)
ರೈತರು ಹಾಗೂ ಕೃಷಿ ಕ್ಷೇತ್ರ ಎದುರಿಸುತ್ತಿರುವ ಗಂಭೀರವಾದ ಸಮಸ್ಯೆಗಳಿಗೆ ಇತಿಶ್ರೀ ನೀಡುವ ದೃಷ್ಟಿಯಿಂದ ಬೆಳೆ ವಿಮೆ ಯೋಜನೆ ಜಾರಿಗೊಳಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ ಎಂದು ಸಂಸದೀಯ ವ್ಯವಹಾರಗಳ ಸಚಿವ ಎಂ.ವೆಂಕಯ್ಯನಾಯ್ಡು ತಿಳಿಸಿದ್ದಾರೆ. ಈ ಯೋಜನೆಯ ಮೂಲಕ ನೀರಾವರಿ, ಮೂಲಸೌಕರ್ಯ, ಬಡ್ಡಿ ಹಾಗೂ ವಿಮೆ –ಈ ನಾಲ್ಕು ವಲಯಗಳನ್ನು ಬಲಪಡಿಸುವ ಗುರಿ ಇದೆ ಎಂದು ಅವರು ತಿಳಿಸಿದ್ದಾರೆ. 
 
ಕೃಷಿ ವಿಶ್ವವಿದ್ಯಾಲಯದಲ್ಲಿ ಕೃಷಿ ವಿಜ್ಞಾನಿಗಳ ಜತೆ ಸಮಾಲೋಚನೆ ನಡೆಸಿದ ಬಳಿಕ ಸಿಲಿಕಾನ್ ಸಿಟಿಯ ಹೊರವಲಯದಲ್ಲಿ ತಾವು ದತ್ತು ಪಡೆದಿರುವ ಗ್ರಾಮದ ಭೇಟಿಯ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಈ ವಿಷಯವನ್ನು ಬಹಿರಂಗ ಪಡಿಸಿದ್ದಾರೆ. 
 
‘ಕೃಷಿ ಬೆಳೆ ವರಮಾನ ವಿಮೆ ಯೋಜನೆ ಜಾರಿ ಪ್ರಸ್ತುತ ತುರ್ತು ಅಗತ್ಯವಾಗಿದೆ. ಆದ್ದರಿಂದ ಸರ್ಕಾರ ಈ ಕುರಿತು ಗಂಭೀರವಾಗಿ ಚಿಂತನೆ ನಡೆಸಿದೆ’ ಎಂದು ಕೇಂದ್ರ ಸಚಿವರು ತಿಳಿಸಿದ್ದಾರೆ.
 
ಈ ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ವ್ಯಾಪಕ ಸಂಪನ್ಮೂಲಗಳ ಅಗತ್ಯವಿದ್ದು, ಕೇಂದ್ರ ಹಾಗೂ ರಾಜ್ಯಗಳು ಒಟ್ಟಾಗಿ ಕೈಜೋಡಿಸಬೇಕಿದೆ. ಇದೊಂದು ಸವಾಲಿನ ಕ್ಷೇತ್ರವಾಗಿರುವುದರಿಂದ ಪರಷ್ಪರ ಸಹಕಾರದ ಹೊರತು, ಯೋಜನೆಯ ಅನುಷ್ಠಾನ ಸುಲಭವಲ್ಲ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.
 
ಯೋಜನೆಯಲ್ಲಿ ಕೇಂದ್ರ ಸರ್ಕಾರ 8.50 ಲಕ್ಷ ಕೋಟಿ ರೂಪಾಯಿ ವ್ಯಯಿಸಲಿದ್ದು, ಆದರೆ ಅದು ಸಾಲುವ ಸಾಧ್ಯತೆ ಕಡಿಮೆ ಎಂದು ಅವರು ತಿಳಿಸಿದ್ದಾರೆ.
 
ಕೃಷಿ ಸಾಲಕ್ಕೆ ಬಡ್ಡಿ ದರವನ್ನು ಮತ್ತಷ್ಟು ಕಡಿಮೆ ಮಾಡಲು ಸರ್ಕಾರ ಮಾರ್ಗಗಳನ್ನು ಹುಡುಕುತ್ತಿದೆ. ಈ ಕುರಿತು ಗಮನ ಹರಿಸುವಂತೆ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿಯವರಿಗೆ ಸೂಚಿಸಲಾಗಿದೆ ಎಂದು ವೆಂಕಯ್ಯ ನಾಯ್ಡು ಹೇಳಿದ್ದಾರೆ. 

Share this Story:

Follow Webdunia kannada