Select Your Language

Notifications

webdunia
webdunia
webdunia
webdunia

ಭಾರತವನ್ನು ಪ್ರವೇಶಿಸಿದ ಐವರು ಪಾಕ್ ಉಗ್ರರು: ಕಟ್ಟೆಚ್ಚರ ವಹಿಸಲು ರಾಜ್ಯಗಳಿಗೆ ಕೇಂದ್ರ ಸೂಚನೆ

ಭಾರತವನ್ನು ಪ್ರವೇಶಿಸಿದ ಐವರು ಪಾಕ್ ಉಗ್ರರು: ಕಟ್ಟೆಚ್ಚರ ವಹಿಸಲು ರಾಜ್ಯಗಳಿಗೆ ಕೇಂದ್ರ ಸೂಚನೆ
ನವದೆಹಲಿ , ಸೋಮವಾರ, 12 ಅಕ್ಟೋಬರ್ 2015 (21:46 IST)
ಮುಂಬರುವ ಹಬ್ಬದ ಸೀಜನ್‌ನಲ್ಲಿ ದೇಶದಲ್ಲಿ ಶಾಂತಿಯನ್ನು ಕೆಡಿಸಿ ಕೋಮುವಾದವನ್ನು ಹರಡುವ ಉದ್ದೇಶದಿಂದ ಐವರು ಪಾಕಿಸ್ತಾನಿ ಉಗ್ರರು ದೇಶದೊಳಗೆ ಪ್ರವೇಶಿಸಿದ್ದಾರೆ ಎನ್ನುವ ವರದಿಗಳಿಂದಾಗಿ ಎಲ್ಲಾ ರಾಜ್ಯಗಳು ಕಟ್ಟೆಚ್ಚರಿಕೆ ವಹಿಸಬೇಕು ಎಂದು ಕೇಂದ್ರ ಸರಕಾರ ಕೋರಿದೆ.
 
ಗುಪ್ತಚರ ದಳದಿಂದ ಮಾಹಿತಿ ಪಡೆದ ಗೃಹ ಸಚಿವಾಲಯ, ಕೆಲ ದಿನಗಳ ಹಿಂದೆ ಐವರು ಉಗ್ರರು ಭಾರತವನ್ನು ಪ್ರವೇಶಿಸಿದ್ದು, ದಾಳಿ ನಡೆಸುವ ಸಾಧ್ಯತೆಗಳಿರುವುದರಿಂದ ಎಲ್ಲಾ ರಾಜ್ಯಗಳು ಮಾರುಕಟ್ಟೆಗಳು, ರೈಲ್ವೆ ನಿಲ್ದಾಣಗಳು, ಬಸ್ ನಿಲ್ದಾಣಗಳು ಮತ್ತು ಧಾರ್ಮಿಕ ಸ್ಥಳಗಳಲ್ಲಿ ಹೆಚ್ಚಿನ ಭದ್ರತೆ ವಹಿಸುವಂತೆ ಕೇಂದ್ರ ಸರಕಾರ ಸಲಹೆ ನೀಡಿದೆ.  
 
ಮುಂಬರುವ ಹಬ್ಬಗಳಾದ ನವರಾತ್ರಿ, ದುರ್ಗಾಪೂಜೆ, ದಸರಾ, ದೀಪಾವಳಿ ಮತ್ತು ಮೊಹರಂ ಹಬ್ಬದ ಸಂದರ್ಭದಲ್ಲಿ ವಿಶೇಷವಾಗಿ ದೇಶದ ಪ್ರಮುಖ ನಗರಗಳಾದ ದೆಹಲಿ, ಮುಂಬೈ, ಕೋಲ್ಕತಾ, ಚೆನ್ನೈ, ಬೆಂಗಳೂರು ಮತ್ತು ಹೈದ್ರಾಬಾದ್‌ನಲ್ಲಿ ಭಾರಿ ಕಟ್ಟೆಚ್ಚರವಹಿಸುವಂತೆ ಗೃಹ ಸಚಿವಾಲಯ ರಾಜ್ಯಗಳಿಗೆ ಮಾಹಿತಿ ನೀಡಿದೆ. 
 
ಮಸೀದಿ, ದರ್ಗಾ, ದೇವಾಲಯಗಳ ಹತ್ತಿರದಲ್ಲಿ ಕಿಡಿಗೇಡಿಗಳು ಘೋಷಣೆಗಳನ್ನು ಕೂಗದಂತೆ ಕಟ್ಟುನಿಟ್ಟಿನ ನಿಗಾವಹಿಸಬೇಕು. ಸಂಪ್ರದಾಯಕ ರಹಿತವಾಗಿ ಮೆರವಣಿಗೆ, ಒತ್ತಾಯಪೂರ್ವಕವಾಗಿ ದೇಣಿಗೆ ಸಂಗ್ರಹ, ಯುವತಿಯರನ್ನು ಚುಡಾಯಿಸುವುದು ಇತ್ಯಾದಿಗಳು ಕೋಮುಗಲಭೆಗೆ ಕಾರಣವಾಗಲಿರುವುದರಿಂದ ಅಂತಹ ಕೃತ್ಯಗಳ ಬಗ್ಗೆ ಎಚ್ಚರಿಕೆಯಿಂದಿರುವಂತೆ ಕೇಂದ್ರದ ಗೃಹ ಸಚಿವಾಲಯ ರಾಜ್ಯಗಳ ಗೃಹ ಸಚಿವಾಲಯಗಳಿಗೆ ಕಟ್ಟುನಿಟ್ಟಿನ ಸಂದೇಶ ರವಾನಿಸಿದೆ. 

Share this Story:

Follow Webdunia kannada