Select Your Language

Notifications

webdunia
webdunia
webdunia
webdunia

ಮುಚ್ಚಿ ಹೋಗಿದ್ದ ಸಿಖ್ ವಿರೋಧಿ ಗಲಭೆ ಕೇಸ್‌ಗೆ ಮರುಜೀವ

ಮುಚ್ಚಿ ಹೋಗಿದ್ದ ಸಿಖ್ ವಿರೋಧಿ ಗಲಭೆ ಕೇಸ್‌ಗೆ ಮರುಜೀವ
ನವದೆಹಲಿ , ಭಾನುವಾರ, 1 ಫೆಬ್ರವರಿ 2015 (13:06 IST)
1984ರ ಸಿಖ್ ವಿರೋಧಿ ಗಲಭೆ ಪ್ರಕರಣ ಮತ್ತೆ ಜೀವ ಪಡೆದುಕೊಂಡಿದೆ. ಪೊಲೀಸರು ಮುಚ್ಚಿಹಾಕಿದ್ದ ಈ ಪ್ರಕರಣದ ತನಿಖೆಗೆ ವಿಶೇಷ ತನಿಖಾ ತಂಡ ರಚಿಸಲು ಕೇಂದ್ರ ಸರ್ಕಾರ ನಿರ್ಧರಿಸುವುದರೊಂದಿಗೆ ಸಿಖ್ ವಿರೋಧಿ ಸಂತ್ರಸ್ತ ಕುಟುಂಬಗಳಿಗೆ ಆಶಾಕಿರಣ ಮೂಡಿದೆ.

ದೆಹಲಿಯಲ್ಲಿ ಚುನಾವಣೆ ಮುಗಿದ ಬಳಿಕ ಎಸ್ಐಟಿ ರಚನೆಯ ಬಗ್ಗೆ ಅಧಿಕೃತ ಪ್ರಕಟಣೆ ಹೊರಬೀಳಲಿದ್ದು, ಮುಂದಿನ ಮೂರು ದಿನಗಳಲ್ಲಿ ತಂಡದ ಸದಸ್ಯರ ಹೆಸರು ಪ್ರಕಟಿಸಲಾಗುತ್ತದೆ. ನಿವೃತ್ತ ನ್ಯಾಯಾಧೀಶ ಜಿ.ಪಿ. ಮಾಥುರ್ ನೇಮಿಸಿದ ಸಮಿತಿಯು ಸಲ್ಲಿಸಿದ ವರದಿಯಲ್ಲಿ ಸಿಖ್ ವಿರೋಧಿ ಗಲಭೆಯಲ್ಲಿ 225 ಪ್ರಕರಣಗಳ ಮರುಪರಿಶೀಲನೆ ಅಗತ್ಯವಾಗಿದೆ ಎಂದು ತಿಳಿಸಿದೆ.

ಅನೇಕ ಪ್ರಕರಣಗಳಲ್ಲಿ ನಿರ್ಣಾಯಕ ಸಾಕ್ಷ್ಯವನ್ನು ಕಡೆಗಣಿಸಲಾಗಿದ್ದು, ಹೊಸ ತನಿಖೆ ನಡೆಸಬೇಕು ಎಂದು ವರದಿಯಲ್ಲಿ ಸೂಚಿಸಲಾಗಿದೆ.  ಕೆಲವು ಪ್ರಕರಣಗಳಲ್ಲಿ ಸಾಕ್ಷ್ಯಗಳು ಇದ್ದರೂ ಪೊಲೀಸರು ಆರೋಪಪಟ್ಟಿಗಳನ್ನು ಸಲ್ಲಿಸದೇ ಪ್ರಕರಣಗಳನ್ನು ಮುಚ್ಚಿಹಾಕಿದೆ.

ಕಾಂಗ್ರೆಸ್ ಮುಖಂಡರಾದ ಸಜ್ಜನ್ ಕುಮಾರ್ ಮತ್ತು ಜಗದೀಶ್ ಟೈಟ್ಲರ್ ವಿರುದ್ಧ ಈ ಪ್ರಕರಣಗಳಿವೆ. ರಾಜಕೀಯ ಒತ್ತಡಗಳಿಗೆ ಒಳಗಾಗಿ ದೆಹಲಿ ಪೊಲೀಸರು ಸಾಕ್ಷ್ಯಗಳನ್ನು ಮತ್ತು ಸಾಕ್ಷಿಗಳ ಹೇಳಿಕೆಗಳನ್ನು ಕಡೆಗಣಿಸಿಸಿದರು ಎಂದು ಸಂತ್ರಸ್ತರ ಕುಟುಂಬಗಳು ಆರೋಪಿಸಿವೆ. 

Share this Story:

Follow Webdunia kannada