Select Your Language

Notifications

webdunia
webdunia
webdunia
webdunia

ಕೇಜ್ರಿ- ಜಂಗ್ ಜಂಗಿ ಕುಸ್ತಿ: ಎಲ್‌ಜಿ ಬೆಂಬಲಕ್ಕೆ ನಿಂತ ಕೇಂದ್ರ ಸರಕಾರ

ಕೇಜ್ರಿ- ಜಂಗ್ ಜಂಗಿ ಕುಸ್ತಿ: ಎಲ್‌ಜಿ ಬೆಂಬಲಕ್ಕೆ ನಿಂತ ಕೇಂದ್ರ ಸರಕಾರ
ನವದೆಹಲಿ , ಶುಕ್ರವಾರ, 22 ಮೇ 2015 (15:44 IST)
ನವದೆಹಲಿ: ದೆಹಲಿ ಮುಖ್ಯಮಂತ್ರಿ ಮತ್ತು ಲಿಫ್ಟಿನೆಂಟ್ ಗವರ್ನರ್ ನಡುವೆ ನಡೆಯುತ್ತಿರುವ ಜಂಗಿ ಕುಸ್ತಿ ತಾರಕಕ್ಕೇರಿದ್ದು, ಈ ಮಧ್ಯೆ ಜಂಗ್ ಅವರ ಬೆಂಬಲಕ್ಕೆ ನಿಂತಿರುವ ಕೇಂದ್ರ,  ಉನ್ನತಾಧಿಕಾರಿಗಳನ್ನು ನೇಮಕ ಮಾಡುವಾಗ ಉಪ ರಾಜ್ಯಪಾಲರು ಮುಖ್ಯಮಂತ್ರಿಗಳ ಜತೆ ಚರ್ಚಿಸುವುದು ಕಡ್ಡಾಯವಲ್ಲ ಎಂದಿದೆ. 

 
ಕೇಂದ್ರ ಗೃಹ ಸಚಿವಾಲಯ ಇಂದು ಈ ಕುರಿತು ಪ್ರಕಟನೆ ಹೊರಡಿಸಿದ್ದು , ಸಾರ್ವಜನಿಕ ದೃಷ್ಟಿ, ಪೊಲೀಸ್, ಭೂಮಿಗೆ ಸಂಬಂಧಿಸಿದಂತಹ ವಿಚಾರಗಳಲ್ಲಿ ಎಲ್‌ಜಿ  ಸ್ವಂತ "ವಿವೇಚನೆ" ಬಳಸಿಕೊಂಡು ನಿರ್ಧಾರಕ್ಕೆ ಬರಬಹುದು. ಅಗತ್ಯವಿದ್ದಲ್ಲಿ ಮಾತ್ರ ಸಿಎಂ ಬಳಿ ಸಮಾಲೋಚಿಸಬಹುದೆಂದು ಈ ಪ್ರಕಟನೆಯಲ್ಲಿ ಹೇಳಲಾಗಿದೆ. 
 
ಅಧಿಕಾರಿಗಳ ನೇಮಕಕ್ಕೆ ಸಂಬಂಧಿಸಿ ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಹಾಗೂ ಲೆಫ್ಟಿನೆಂಟ್‌ ಜನರಲ್‌ ನಜೀಬ್‌ ಜಂಗ್‌ ನಡುವೆ ಕಳೆದೊಂದು ವಾರದಿಂದ ವಾದವಿವಾದ ನಡೆಯುತ್ತಿದೆ. 
 
ಮಂಗಳವಾರ ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಅವರನ್ನು ಭೇಟಿಯಾದ ಈ ಇಬ್ಬರೂ ಪರಸ್ಪರರ ಮೇಲೆ ದೂರು ಸಲ್ಲಿಸಿದ್ದಾರೆ. ಸಂವಿಧಾನ ಉಲ್ಲಂಘಿಸಿ,  ಅಧಿಕಾರ ವ್ಯಾಪ್ತಿಯನ್ನು ಮೀರಿ ವರ್ತಿಸಿದ್ದಾಗಿ ಜಂಗ್‌ ಹಾಗೂ ಕೇಜ್ರಿವಾಲ್‌ ಪರಸ್ಪರರ ವಿರುದ್ಧ ಆರೋಪ ಮಾಡಿದ್ದಾರೆ.
 
ಅಲ್ಲದೇ ಕೇಜ್ರಿವಾಲ್ ಕೇಂದ್ರ ಸರಕಾರಕ್ಕೆ ಪತ್ರ ಬರೆದು ನಮ್ಮದು ಚುನಾಯಿತ ಸರ್ಕಾರ. ಉಪರಾಜ್ಯಪಾಲರ ಮೂಲಕ ನಮ್ಮ ಆಡಳಿತದಲ್ಲಿ ಹಸ್ತಕ್ಷೇಪ ಮಾಡಿ ಸಂವಿಧಾನಬಾಹಿರವಾಗಿ ವರ್ತಿಸದಿರಿ. ನಮ್ಮ ಕೆಲಸ ನಮಗೆ ಮಾಡಲು ಬಿಡಿ ಎಂದು ಪತ್ರ ಬರೆದಿದ್ದರು. 
 
ಆದರೆ ಈಗ ಗೃಹ ಸಚಿವಾಲಯ ಜಂಗ್ ಅವರ ಬೆನ್ನಿಗೆ ನಿಂತಿರುವುದು ಆಪ್ ನಾಯಕನನ್ನು ಮತ್ತಿಷ್ಟು ಕೆರಳುವಂತೆ ಮಾಡಿದೆ. 

Share this Story:

Follow Webdunia kannada