Select Your Language

Notifications

webdunia
webdunia
webdunia
webdunia

ಬಾರ್ ಗರ್ಲ್ ಜತೆ ಶಾಸಕನ ಅಸಭ್ಯ ನೃತ್ಯ

ಬಾರ್ ಗರ್ಲ್ ಜತೆ ಶಾಸಕನ ಅಸಭ್ಯ ನೃತ್ಯ
ಪಾಟ್ನಾ , ಮಂಗಳವಾರ, 2 ಫೆಬ್ರವರಿ 2016 (12:08 IST)
ಬಿಹಾರ್‌ನ ಆಡಳಿತಾರೂಢ ಜೆಡಿಯುನ ಶಾಸಕ ಶ್ಯಾಮ್ ಬಹಾದ್ದೂರ್ ಸಿಂಗ್ ಬಾರ್‌ ಗರ್ಲ್ಸ್‌ ಜೊತೆ ಅಸಭ್ಯವಾಗಿ ನೃತ್ಯ ಮಾಡುತ್ತ ಮತ್ತೆ ಸಿಕ್ಕಿ ಬಿದ್ದಿದ್ದು ಸರ್ಕಾರಕ್ಕೆ ಮುಜುಗರವನ್ನು ತಂದೊಡ್ಡಿದ್ದಾರೆ. ಈ ದೃಶ್ಯಾವಳಿಗಳುಳ್ಳ ವಿಡಿಯೋವೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು ವ್ಯಾಪಕ ಖಂಡನೆ ವ್ಯಕ್ತವಾಗಿದೆ. 

 
ಸಿವಾನ್ ಜಿಲ್ಲೆಯಲ್ಲಿನ ತಮ್ಮ ವಿಧಾನಸಭಾ ಕ್ಷೇತ್ರ ಬರ್ಹರಿಯಾದಲ್ಲಿ ಆಯೋಜಿತಗೊಂಡಿದ್ದ ಕಾರ್ಯಕ್ರಮವೊಂದರಲ್ಲಿ ಶಾಸಕ ಈ ನಾಚಿಕೆಗೇಡಿನ ವರ್ತನೆ ತೋರಿದ್ದಾನೆ. 
 
ಈ ವಿಡಿಯೋದಲ್ಲಿ ಶಾಸಕ ಆಕ್ಷೇಪಾರ್ಹ ರೀತಿಯಲ್ಲಿ ನೃತ್ಯ ಮಾಡಿದ್ದಷ್ಟೇ ಅಲ್ಲದೆ ಅಶ್ಲೀಲವಾಗಿ ವರ್ತಿಸಿದ್ದಾನೆ. 2010 ಮತ್ತು 2012ರಲ್ಲಿ ಕೂಡ ಅವರು ಬಾರ್ ಗರ್ಲ್ಸ್ ಜತೆ ಕುಣಿದಾಡುತ್ತ ಕ್ಯಾಮರಾ ಕಣ್ಣಲ್ಲಿ ಸಿಕ್ಕಿ ಹಾಕಿಕೊಂಡಿದ್ದರು. ಮತ್ತೀಗ ಅದನ್ನು ಪುನರಾವರ್ತಿಸಿದ್ದಾರೆ. 
 
ಸಾರ್ವಜನಿಕವಾಗಿ ಡರ್ಟಿ ಡಾನ್ಸ್ ಮಾಡದಂತೆ ಈ ಹಿಂದೆ ಕೂಡ ಪಕ್ಷ ಅವರಿಗೆ ಎಚ್ಚರಿಕೆ ನೀಡಿತ್ತು. ಆದರೆ ಅದಕ್ಕೆ ಕ್ಯಾರೆ ಅನ್ನದ ಶಾಸಕ ತಮ್ಮ ಹೊಲಸು ಚಾಳಿಯನ್ನು ಮುಂದುವರೆಸಿದ್ದಾರೆ. 

Share this Story:

Follow Webdunia kannada