Webdunia - Bharat's app for daily news and videos

Install App

ಕಪ್ಪು ಹಣ: ಶಾಕ್ ಮೇಲೆ ಶಾಕ್...!

Webdunia
ಗುರುವಾರ, 10 ನವೆಂಬರ್ 2016 (16:27 IST)
ನವದೆಹಲಿ: 500, 1000 ಮುಖಬೆಲೆಯ ನೋಟುಗಳ ಚಲಾವಣೆ ಸ್ಥಗಿತಗೊಳಿಸಿ ಇನ್ನೂ ಎರಡು ದಿನ ಕಳೆದಿಲ್ಲ. ಅದಾಗಲೇ ಕೇಂದ್ರ ಸರ್ಕಾರ ಒಂದು ದಿನಕ್ಕೆ ಬ್ಯಾಂಕಿಗೆ ಹಣ ಹೂಡುವ ಮಿತಿಯನ್ನು 2.5 ಲಕ್ಷಕ್ಕೆ ನಿಗದಿಪಡಿಸಿ ಮತ್ತೊಂದು ಶಾಕ್ ನೀಡಿದೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿತ್ತ ಸಚಿವ ಅರುಣ್ ಜೇಟ್ಲಿ,  ಒಂದು ದಿನಕ್ಕೆ ಬ್ಯಾಂಕಿಗೆ ಹಣ ಹೂಡುವ ಮಿತಿಯನ್ನು 2.5 ಲಕ್ಷಕ್ಕೆ ನಿಗದಿಪಡಿಸಲಾಗಿದೆ. ಅದಕ್ಕಿಂತ ಹೆಚ್ಚಿನ ಮೊತ್ತ ಕಟ್ಟುವವರು ಅದರ ಎರಡರಷ್ಟು ಮೊತ್ತವನ್ನು ದಂಡದ ರೂಪದಲ್ಲಿ ಕಟ್ಟಬೇಕು. ಇದರಿಂದ ಸಣ್ಣ ಹೂಡಿಕೆದಾರರಿಗೆ ಯಾವುದೇ ತೊಂದರೆಯಾಗುವುದಿಲ್ಲ ಎಂದರು. 
 
ಈಗಾಗಲೇ ಈ ನಿಯಮಾವಳಿ ಜಾರಿಗೆ ಬಂದಿದ್ದು, ಅಗತ್ಯ ಬಿದ್ದಲ್ಲಿ ಬ್ಯಾಂಕ್ ನೌಕರರೆ ಸಹಾಯ ಮಾಡಲಿದ್ದಾರೆ. ಬ್ಯಾಂಕುಗಳು ಹೆಚ್ಚುವರಿ ಸಮಯ ಕೆಲಸ ಮಾಡಲಿದ್ದು, ಗ್ರಾಹಕರು ಆತಂಕ ಪಡುವ ಅವಶ್ಯಕತೆಯಿಲ್ಲ. ಆರ್​ಬಿಐ ಮೂಲಕವೇ ಬ್ಯಾಂಕುಗಳಿಗೆ ಈ ಸೂಚನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.
 
ಅಲ್ಲದೆ ಯಾರಾದರೂ ಎರಡುವರೆ ಲಕ್ಷಕ್ಕಿಂತ ಹೆಚ್ಚಿನ ಹಣ ಹೂಡಿಕೆ ಮಾಡುವುದು ಕಂಡುಬಂದರೆ ಅವರ ಹಿನ್ನೆಲೆ ಪರಿಶೀಲನೆ ಮಾಡಲಾಗುವುದು. ತೆರಿಗೆ ಪಾವತಿಸದೆ ವಂಚಿಸುತ್ತಿರುವವರು ಹಾಗೂ ಲೆಕ್ಕಕ್ಕಿಲ್ಲದಷ್ಟು ನಗದು ಇಟ್ಟುಕೊಂಡವರ ವಿರುದ್ಧ ಈ ನೂತನ ಕಾನೂನು ಕ್ರಮ ತಗೆದುಕೊಂಡಿರುವುದಾಗಿ ತಿಳಿಸಿದ್ದಾರೆ.
 
ಮಿತಿಗಿಂತ ಹೆಚ್ಚು ಹೂಡಿಕೆ ಮಾಡಿದವರಿಗೆ ಶೇ. 200ರಷ್ಟು ದಂಡ ವಿಧಿಸಲು ಚಿಂತನೆ ನಡೆಸಲಾಗಿದೆ. ಉದಾಹರಣೆಗೆ, 1 ಕೋಟಿ ಡೆಪಾಸಿಟ್ ಮಾಡಿದರೆ, 2 ಕೋಟಿ ದಂಡ ಕಟ್ಟಬೇಕು. ಇನ್ನು ಕೆಲವೇ ತಿಂಗಳಲ್ಲಿ 1000 ರೂ.ನ ಹೊಸ ನೋಟು ಕೂಡಾ ಬರಲಿದೆ. ಅದು ಕೂಡಾ ಹೊಸ ವಿನ್ಯಾಸ ಮತ್ತು ಹೊಸ ಬಣ್ಣದಲ್ಲಿ . ಸಣ್ಣ ಪ್ರಮಾಣದ ಹೂಡಿಕೆದಾರರು ಯಾವ ಆತಂಕ ಪಡಬೇಕಿಲ್ಲ. ಉತ್ತರದಾಯಿತ್ವ ಇಲ್ಲದ ಹಣದ ವಿರುದ್ಧ ಕಠಿಣ ಕ್ರಮ, ಸರಿಯಾದ ಆರ್ಥಿಕ ಮೂಲ ತೋರಿಸಿದವರಿಗೆ ಸಮಸ್ಯೆ ಎದುರಾಗದು. ಯಾವುದೇ ಕಾರಣಕ್ಕೂ ಈ ನಿರ್ಧಾರದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದಿದ್ದಾರೆ.

c

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments