Webdunia - Bharat's app for daily news and videos

Install App

ಕಮಲ ಚಿಹ್ನೆಯನ್ನು ಬಿಜೆಪಿ ಚುನಾವಣೆ ಚಿಹ್ನೆಯಾಗಿ ಮುಂದುವರಿಸಲು ಬಯಸಿದೆಯಾ?: ಮುಂಬೈ ಹೈಕೋರ್ಟ್

Webdunia
ಗುರುವಾರ, 7 ಜುಲೈ 2016 (20:27 IST)
ಭಾರತೀಯ ಜನತಾ ಪಕ್ಷ ಕಮಲದ ಚಿಹ್ನೆಯನ್ನು ಚುನಾವಣಾ ಚಿಹ್ನೆಯಾಗಿ ಬಳಸುವುದನ್ನು ಮುಂದುವರಿಸಲು ಬಯಸುತ್ತದೆಯಾ ಎಂದು ಮುಂಬೈ ಹೈಕೋರ್ಟ್ ಪ್ರಶ್ನಿಸಿದೆ. 
 
 ಬಿಜೆಪಿಯ ಕಮಲದ ಚಿಹ್ನೆಯನ್ನು ವಾಪಸ್ ಪಡೆದುಕೊಳ್ಳುವಂತೆ ಚುನಾವಣೆ ಆಯೋಗಕ್ಕೆ ನಿರ್ದೇಶನ ನೀಡಿ ಎಂದು ಮುಂಬೈ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಲಾಗಿದೆ.
 
ಕಮಲ ರಾಷ್ಟ್ರದ ಹೂವಿನ ಸಂಕೇತ ಎಂದು ಪರಿಗಣಿಸಲಾಗಿದೆ. ಆದ್ದರಿಂದ, ಯಾವುದೇ ರಾಜಕೀಯ ಪಕ್ಷ ಕಮಲದ ಚಿಹ್ನೆಯನ್ನು ಚುನಾವಣೆ ಚಿಹ್ನೆಯಾಗಿ ಬಳಸುವಂತಿಲ್ಲ ಎಂದು ದೂರುದಾರರು ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ದಾಖಲಿಸಿದ್ದಾರೆ.
 
ಕೇಂದ್ರ ಚುನಾವಣೆ ಆಯೋಗ ರಾಷ್ಟ್ರದ ಹೂವಾದ ಕಮಲವನ್ನು ಬಳಸಿಕೊಳ್ಳಲು ಅನುಮತಿ ನೀಡಿ ಚುನಾವಣೆ ನೀತಿಯನ್ನು ಉಲ್ಲಂಘಿಸುತ್ತಿದೆ ಎಂದು ಅರ್ಜಿಯಲ್ಲಿ ವಾದಿಸಲಾಗಿದೆ.
 
ಪುರಾಣ ಪುಣ್ಯ ಕಥೆಗಳಲ್ಲಿ, ಭಾರತೀಯ ಸಂಸ್ಕ್ರತಿಯಲ್ಲಿ ಕಮಲದ ಹೂವಿಗೆ ವಿಶಿಷ್ಠ ಸ್ಥಾನವಿದೆ. ಲಕ್ಷ್ಮಿ ದೇವತೆಯ ಇಷ್ಟದ ಹೂವಾಗಿದೆ ಎಂದು ಸಾಮಾಜಿಕ ಕಾರ್ಯಕರ್ತ ಹೇಮಂತ್ ಪಾಟೀಲ್ ವಾದಿಸಿದ್ದಾರೆ. 
 
ಮುಂದಿನ ವಾರದಲ್ಲಿ ಮತ್ತೊಮ್ಮೆ ವಿಚಾರಣೆ ನಡೆಸಲು ಮುಂಬೈ ಹೈಕೋರ್ಟ್ ದಿನಾಂಕ ನಿಗದಿಪಡಿಸಿದೆ ಎಂದು ನ್ಯಾಯಾಲಯದ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಏರ್‌ ಇಂಡಿಯಾ ವಿಮಾನ ದುರಂತದ ಬಳಿಕ 80 ವಿಮಾನ ಹಾರಾಟಗಳ ರದ್ದು

ಕರುಣೆಯಿಲ್ಲದೆ ಯುದ್ಧ ಮುಂದುವರೆಯುತ್ತದೆ: ಟ್ರಂಪ್‌ ವಾರ್ನಿಂಗ್‌ಗೆ ಇರಾನ್‌ ಡೊಂಟ್ ಕ್ಯಾರೇ

ಲ್ಯಾಂಡ್ ಆದ ಬಳಿಕ ತಾಂತ್ರಿಕ ದೋಷದಿಂದ 40ನಿಮಿಷ ವಿಮಾನದೊಳಗೆ ಸಿಲುಕಿಕೊಂಡ ಇಂಡಿಗೋ ಪ್ರಯಾಣಿಕರು

Ahmedabad Plane Crash: 190 ಶವಗಳ ಗುರುತು ಪತ್ತೆ, 159 ಮಂದಿ ಮೃತದೇಹ ಕುಟುಂಬಕ್ಕೆ ಹಸ್ತಾಂತರ

ಮುಖ್ಯಮಂತ್ರಿ ಕುರ್ಚಿ ಆಸೆಯನ್ನು ಮತ್ತೆ ಪರೋಕ್ಷವಾಗಿ ಬಿಚ್ಚಿಟ್ಟ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌

ಮುಂದಿನ ಸುದ್ದಿ
Show comments