Select Your Language

Notifications

webdunia
webdunia
webdunia
webdunia

ಮಂಕಾಯಿತೇ ಮೋದಿ ಅಲೆ? ಉಪಚುನಾವಣೆಯಲ್ಲಿ ಎರಡು ಸ್ಥಾನ ಗೆದ್ದ ಕೈ

ಮಂಕಾಯಿತೇ ಮೋದಿ ಅಲೆ? ಉಪಚುನಾವಣೆಯಲ್ಲಿ ಎರಡು ಸ್ಥಾನ ಗೆದ್ದ ಕೈ
ಅಹಮದಾಬಾದ್ , ಮಂಗಳವಾರ, 16 ಸೆಪ್ಟಂಬರ್ 2014 (14:59 IST)
ದೆಹಲಿಯಲ್ಲಿ ಪ್ರಧಾನಿ ಗದ್ದುಗೆಗೇರಲು ನರೇಂದ್ರ ಮೋದಿ ತ್ಯಜಿಸಿದ್ದ  ಎರಡು ಸ್ಥಾನಗಳನ್ನು ಉಳಿಸಿಕೊಳ್ಳುವಲ್ಲಿ ಬಿಜೆಪಿ ಸಫಲವಾಗಿದ್ದು, ಚುನಾವಣೆ ನಡೆದ ಏಕೈಕ ಲೋಕಸಭಾ ಸ್ಥಾನವನ್ನು ಮರಳಿ ಪಡೆದಿದೆಯಾದರೂ, 9 ವಿಧಾನ ಸಭಾ ಸ್ಥಾನಗಳಲ್ಲಿ 5 ಕ್ಷೇತ್ರಗಳಲ್ಲಷ್ಟೇ ತೃಪ್ತವಾಗಿದೆ. 

ಮೋದಿ ಅಲೆ ಬಿರುಸಾಗಿದೆ ಎಂದು ಭಾವಿಸಲಾಗಿದ್ದ ಅವರ ತವರು ಗುಜರಾತಿನಲ್ಲಿ ಬಿಜೆಪಿ ನಿರೀಕ್ಷಿಸಿದ್ದ ಜಯವನ್ನು ದಾಖಲಿಸಲು ಸಾಧ್ಯವಾಗದಿದ್ದುದು ನಮೋ ಅಲೆ ಕೊಂಚ ಕಳೆಗುಂದಿದೆ ಎನ್ನುವ ಉತ್ತರವನ್ನು ನೀಡಿದೆ.  ಬಿಜೆಪಿಯ ಅಧಿಪತ್ಯವಿದ್ದ ಎರಡು ಸ್ಥಾನಗಳಲ್ಲಿ ಕಾಂಗ್ರೆಸ್ ತನ್ನ ಮುದ್ರೆಯನ್ನೊತ್ತಿದ್ದು, ಕಳೆದ ಮೇ ತಿಂಗಳಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಒಂದು ಸ್ಥಾನವನ್ನು ಕೂಡ ಪಡೆಯಲು ವಿಫಲವಾಗಿದ್ದ ಕಾಂಗ್ರೆಸ್  ಮಂಗ್ರೋಲ್ ಮತ್ತು ದೀಸಾಗಳಲ್ಲಿ ಅನಿರೀಕ್ಷಿತ ಪುನರಾಗಮನ ಮಾಡಿದೆ. 
 
ಆದರೆ ಮೋದಿ ಲೋಕಸಭಾ ಚುನಾವಣೆಯಲ್ಲಿ ಗೆದ್ದಿದ್ದ ವಡೋದರಾ ಕ್ಷೇತ್ರವನ್ನು ಉಳಿಸಿಕೊಳ್ಳುವುದರ ಮೂಲಕ ತನ್ನ 26-0 ದಾಖಲೆಯನ್ನು ಬಿಜೆಪಿ ಉಳಿಸಿಕೊಂಡಿದೆ.
 
ವಾರಣಾಸಿ ಮತ್ತು ವಡೋದರಾ ಎರಡು ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದಿದ್ದ ಪ್ರಧಾನಿ ಮೋದಿ ವಾರಣಾಸಿಯ ಪ್ರತಿನಿಧಿತ್ವವನ್ನು ಉಳಿಸಿಕೊಂಡು ವಡೋದರಾ ಸಂಸದನ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. 
 
ಗುಜರಾತ್ ಮುಖ್ಯಮಂತ್ರಿಯಾಗಿ ಅನೇಕ ವರ್ಷಗಳಿಂದ ಮೋದಿಯವರು ಪ್ರತಿನಿಧಿಸುತ್ತಿದ್ದ ಅಹಮದಾಬಾದಿನ ಮಣಿನಗರ ವಿಧಾನ ಸಭಾ ಕ್ಷೇತ್ರವನ್ನು ಕೂಡ ಬಿಜೆಪಿ ಉಳಿಸಿಕೊಂಡಿದೆ. 
 
ಬಿಜೆಪಿ ಪ್ರತಿಪಾದಿಸುತ್ತಿರುವ ಮೋದಿ ಅಲೆ  ನಿಜಕ್ಕೂ ಅಸ್ತಿತ್ವದಲ್ಲಿದೆಯೇ ಎಂಬುದರ ಪರೀಕ್ಷೆಯಾಗಿ ಈ ಉಪಚುನಾವಣೆಯನ್ನು ನೋಡಲಾಗುತ್ತಿತ್ತು.  
 
ಗುಜರಾತ್ ಮುಖ್ಯಮಂತ್ರಿಯಾಗಿ ಮೋದಿಯವರ ಉತ್ತರಾಧಿಕಾರಿಯಾದ ಆನಂದಿ ಬೆನ್ ಪಟೇಲ್ ಅವರಿಗೂ ಈ ಚುನಾವಣೆ ಮೊದಲ ದೊಡ್ಡ ಪರೀಕ್ಷೆಯಾಗಿತ್ತು. 

Share this Story:

Follow Webdunia kannada