Select Your Language

Notifications

webdunia
webdunia
webdunia
webdunia

ದೆಹಲಿ ಹೋಟೆಲ್‌ನಲ್ಲಿ ಮಹಿಳಾ ಉದ್ಯಮಿಯ ಮೇಲೆ ರೇಪ್

ದೆಹಲಿ ಹೋಟೆಲ್‌ನಲ್ಲಿ ಮಹಿಳಾ ಉದ್ಯಮಿಯ ಮೇಲೆ ರೇಪ್
ನವದೆಹಲಿ , ಶನಿವಾರ, 2 ಏಪ್ರಿಲ್ 2016 (12:10 IST)
33 ವರ್ಷ ವಯಸ್ಸಿನ ಮಹಿಳೆ ಉದ್ಯಮಿಯ ಮೇಲೆ ಆರೋಪಿಯೊಬ್ಬ ಅತ್ಯಾಚಾರವೆಸಗಿದ ಘಟನೆ ದೆಹಲಿಯ ಕನ್ನಾಟ್ ಪ್ಲೇಸ್‌ ಬಳಿಯಿರುವ ಹೋಟೆಲ್‌ನಲ್ಲಿ ನಡೆದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
 
ಬಿಜೆನೆಸ್ ಬಗ್ಗೆ ಚರ್ಚಿಸಲು ಲಂಚ್ ವೇಳೆಗೆ ಹೋಟೆಲ್‌ಗೆ ಬರುವಂತೆ ಮಹಿಳಾ ಉದ್ಯಮಿಗೆ ಆರೋಪಿ ಕರೆ ಮಾಡಿದ್ದ. ಹೋಟೆಲ್‌ಗೆ ಬಂದ ಮಹಿಳೆಗೆ ಮತ್ತು ಬರಿಸುವ ತಂಪು ಪಾನೀಯ ನೀಡಿ, ಆಕೆ ಪ್ರಜ್ಞೆ ಕಳೆದುಕೊಂಡ ನಂತರ ಅತ್ಯಾಚಾರ ಎಸಗಿ ಪರಾರಿಯಾಗಿದ್ದಾನೆ.
 
ಪ್ರಜ್ಞೆ ಮರಳಿದ ನಂತರ ಪೊಲೀಸರಿಗೆ ಕರೆ ಮಾಡಿದ ಮಹಿಳಾ ಉದ್ಯಮಿ, ಘಟನೆಯ ಬಗ್ಗೆ ಮಾಹಿತಿ ನೀಡಿದ್ದಾಳೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
 
ದಕ್ಷಿಣ ದೆಹಲಿಯ ಡಿಫೆನ್ಸ್ ಕಾಲೋನಿಯಲ್ಲಿರುವ ಮಹಿಳೆ ಸ್ವಂತ ಉದ್ಯಮ ಹೊಂದಿದ್ದು, ಉದ್ಯಮದ ವಿಷಯಗಳ ಬಗ್ಗೆ ಚರ್ಚಿಸಲು ಆರೋಪಿ ಭೇಟಿಗೆ ಹೋಟೆಲ್‌ಗೆ ತೆರಳಿದ್ದಳು ಎನ್ನಲಾಗಿದೆ.
 
ಚಂಡೀಗಡ್ ಮೂಲದ ಆರೋಪಿ, ಮಹಿಳೆಯನ್ನು ಊಟದ ನೆಪದಲ್ಲಿ ಕರೆದುಕೊಂಡು ಹೋಗಿ ಆಕೆಗೆ ತಂಪು ಪಾನೀಯದಲ್ಲಿ ಮತ್ತು ಬರಿಸುವ ಔಷಧಿ ನೀಡಿ, ನಂತರ ತನ್ನ ಕೋಣೆಗೆ ಕರೆದುಕೊಂಡು ಹೋಗಿ ಅತ್ಯಾಚಾರವೆಸಗಿದ್ದಾನೆ ಎಂದು ಮೂಲಗಳು ತಿಳಿಸಿವೆ.
 
ಆರೋಪಿಯ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಿಕೊಂಡು ಆತನ ಪತ್ತೆಗಾಗಿ ಪೊಲೀಸರು ಜಾಲ ಬೀಸಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

Share this Story:

Follow Webdunia kannada