Select Your Language

Notifications

webdunia
webdunia
webdunia
webdunia

ಗುಜರಾತಿನ ರೈಲ್ವೆನಿಲ್ದಾಣದಲ್ಲಿ ಬುಲೆಟ್ ರೈಲು ನಿಂತಿದೆ!

ಗುಜರಾತಿನ ರೈಲ್ವೆನಿಲ್ದಾಣದಲ್ಲಿ ಬುಲೆಟ್ ರೈಲು ನಿಂತಿದೆ!
ನವದೆಹಲಿ , ಸೋಮವಾರ, 22 ಸೆಪ್ಟಂಬರ್ 2014 (17:42 IST)
ಭಾರತದ ರೈಲ್ವೆ ನಿಲ್ದಾಣದಲ್ಲಿ ಬುಲೆಟ್ ರೈಲು ನಿಂತಿರುವ ಚಿತ್ರವು ಭಾನುವಾರ ಎಲ್ಲರನ್ನೂ ಅಚ್ಚರಿಗೊಳಿಸಿತು. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಈ ಚಿತ್ರವನ್ನು ಅನೇಕ ಜನರು ಹಂಚಿಕೊಂಡು ಸಂಭ್ರಮಿಸಿದರು. 
 
ಬುಲೆಟ್ ರೈಲಿನ ಟ್ರಯಲ್ ಆರಂಭವಾಗಿರುವ ಗುಜರಾತಿನ ಬಿಲಿಮೋರಾ ರೈಲ್ವೆ ನಿಲ್ದಾಣದಲ್ಲಿ ಈ ಚಿತ್ರವನ್ನು ತೆಗೆಯಲಾಗಿದೆ ಎಂದು ಕೆಲವು ಜನರು ಹೇಳಿದರು. ಕೆಲವರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಇಷ್ಟು ಶೀಘ್ರದಲ್ಲಿ ಇಂತಹ ಸಾಧನೆ ಮಾಡಿದ ನರೇಂದ್ರ ಮೋದಿ ಅವರಿಗೆ ಅಭಿನಂದಿಸಿ, ಧನ್ಯವಾದ ಸೂಚಿಸಿದರು.
 
ಆದರೆ ನಿಜಾಂಶ ಬಯಲಾಗುವುದಕ್ಕೆ ಹೆಚ್ಚು ಸಮಯವೇನೂ ಬೇಕಾಗಲಿಲ್ಲ. ಕೆಲವರು ನಿಜವಾದ ಚಿತ್ರದ ಬದಲಿಗೆ ಬುಲೆಟ್ ರೈಲಿನ ಫೋಟೋಶಾಪ್ ಚಿತ್ರವನ್ನು ಅಪ್‌ಲೋಡ್ ಮಾಡಿದ್ದರು. ಚಿತ್ರ ಎಡಿಟ್ ಮಾಡುವ  ಅಡೋಬ್ ಫೋಟೋಶಾಪ್ ಸಾಫ್ಟ್‌ವೇರ್ ಬಳಸಿಕೊಂಡು ಚಿತ್ರದಲ್ಲಿ ಸ್ಥಳೀಯ ರೈಲನ್ನು ತೆಗೆದು ಲಂಡನ್ ಜಾವೆಲಿನ್ ರೈಲನ್ನು ಬದಲಿಸಿದ್ದರು. ಈ ವಿಷಯ ಗೊತ್ತಾದ ಕೆಲವು ಜನರು ಇಂತಹ ಚಿತ್ರಗಳಿಂದ ದೇಶದ ಜನತೆಯನ್ನು ಮೂರ್ಖರನ್ನಾಗಿ ಮಾಡುವ ಮತ್ತು ಬಿಜೆಪಿಯನ್ನು ಹೊಗಳುವ ಕ್ರಮವನ್ನು ಟೀಕಿಸಿದರು. 

Share this Story:

Follow Webdunia kannada