ಅಮೃತಸರ್ದಿಂದ ದೆಹಲಿಗೆ ರೈಲಿನಲ್ಲಿ ತೆರಳುತ್ತಿರುವ ಸಂದರ್ಭದಲ್ಲಿ ಪಂಜಾಬ್ ಪೊಲೀಸ್ ಅಧಿಕಾರಿಯೊಬ್ಬ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಬ್ರಿಟಿಷ್ ಮೂಲದ ವಿದ್ಯಾರ್ಥಿನಿಯೊಬ್ಬಳು ವಿರುದ್ಧ ದೂರು ದಾಖಲಿಸಿದ್ದಾರೆ.
ಶಹೀದ್ ಎಕ್ಸಪ್ರೆಸ್ ರೈಲು ಮೂಲಕ ಮಂಗಳವಾರ ಮಧ್ಯಾಹ್ನ ಅಮೃತಸರ್ನಿಂದ ದೆಹಲಿಗೆ ಹೋಗುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಈ ಕುರಿತು ಅಮೃತಸರ್ನ ಪೊಲೀಸರಲ್ಲಿ ದೂರಿದಾಗ ಯಾವುದೇ ಪ್ರತಿಕ್ರಿಯೆ ಬಂದಿಲ್ಲವೆಂಬ ಕಾರಣಕ್ಕೆ ಯುವತಿ ನವದೆಹಲಿಯಲ್ಲಿರುವ ಬ್ರಿಟಿಷ್ ಹೈ ಕಮಿಷನರ್ ಕಚೇರಿಗೆ ದೂರು ನೀಡಿದ್ದಾಳೆ.
ರೈಲು ಹತ್ತಲ್ಲೆಂದು ನಿಲ್ದಾಣಕ್ಕೆ ಬರುತ್ತಿದ್ದಾಗ ನನ್ನನ್ನು ಒಬ್ಬ ಪುರುಷ ಅನುಸರಿಸುತ್ತಿದ್ದ. ನಾನು ರೈಲನ್ನೇರಿದಾಗ ಆತ ಅಲ್ಲೇ ಹತ್ತಿರ ನಿಂತ ಆ ವ್ಯಕ್ತಿ ನನ್ನನ್ನು ದಿಟ್ಟಿಸಿ ನೋಡುತ್ತಿದ್ದ. ಆಗ ನಾನು ಅದೇ ಬೋಗಿಯಲ್ಲಿದ್ದ ಅಲ್ಲೇ ಇದ್ದ ಪೊಲೀಸ ಅಧಿಕಾರಿಯಲ್ಲಿ ಈ ಕುರಿತು ದೂರಿದೆ. ಆಗ ಆತ ಅಲ್ಲಿಂದ ಹೊರಟು ಹೋದ.
"ನಾನು ಸೀಟೊಂದರಲ್ಲಿ ಕುಳಿತು ಅಕ್ಕಪಕ್ಕದಲ್ಲಿ ಗಮನಿಸುತ್ತಿದ್ದಾಗ ನಾನು ಕೆಲ ನಿಮಿಷದ ಹಿಂದೆ ರಕ್ಷಣೆ ಕೋರಿದ ಪೊಲೀಸ್ ಅಧಿಕಾರಿ ಒಬ್ಬ ವ್ಯಕ್ತಿಗೆ ಹಣವನ್ನು ನೀಡುತ್ತಿರುವುದನ್ನು ನೋಡಿದೆ. ಸ್ವಲ್ಪ ಸಮಯದಲ್ಲಿ ಆ ವ್ಯಕ್ತಿ ಮಲಗಲು ಹೋದ. ನಂತರ ಪೊಲೀಸ್ ಅಧಿಕಾರಿ ನನ್ನ ಬಳಿ ಬಂದು ಕುಳಿತು ಪಂಜಾಬಿ ಭಾಷೆಯಲ್ಲಿ ಮಾತನಾಡ ತೊಡಗಿದ. ನನಗದು ಅರ್ಥವಾಗಲಿಲ್ಲ. ನನ್ನ ತೊಡೆಯನ್ನು ಮುಟ್ಟಲು ಪ್ರಾರಂಭಿಸಿದ ಆತ ಅಸಭ್ಯ ಸಂಕೇತಗಳನ್ನು ಮಾಡಿದ", ಎಂದು ವಿದ್ಯಾರ್ಥಿನಿ ಆಪಾದಿಸಿದ್ದಾಳೆ.