Select Your Language

Notifications

webdunia
webdunia
webdunia
webdunia

ವಧು, ವರ ಕುಟುಂಬದವರು ವಿವಾಹ ಸ್ಥಳಕ್ಕೆ ವಿಳಂಬವಾಗಿ ಆಗಮಿಸಿದಲ್ಲಿ ದಂಡವಂತೆ..!

ವಧು, ವರ ಕುಟುಂಬದವರು ವಿವಾಹ ಸ್ಥಳಕ್ಕೆ ವಿಳಂಬವಾಗಿ ಆಗಮಿಸಿದಲ್ಲಿ ದಂಡವಂತೆ..!
ರಾಂಪುರ್ (ಉತ್ತರಪ್ರದೇಶ) , ಮಂಗಳವಾರ, 31 ಮಾರ್ಚ್ 2015 (16:16 IST)
ವಿವಾಹ ಸಮಾರಂಭಗಳಲ್ಲಿ ವಧುವಿನ ಕುಟುಂಬದವರನ್ನು ಕಾಯಿಸುವುದು ವರನ ಕುಟುಂಬದವರ ಹಕ್ಕು ಎನ್ನುವಂತೆ ವರ್ತಿಸಲಾಗುತ್ತಿದೆ. ಆದರೆ, ಉತ್ತರಪ್ರದೇಶದ ಪೂರ್ವಿಯ ಭಾಗದಲ್ಲಿರುವ ಗ್ರಾಮದಲ್ಲಿ ವರನ ಮೆರವಣಿಗೆ ತಡವಾಗಿ ಬಂದಲ್ಲಿ ದಂಡವನ್ನು ತೆತ್ತಬೇಕಾಗುತ್ತದೆ. ಮೆರವಣಿಗೆಯಲ್ಲಿ ಜೋರಾಗಿ ಶಬ್ದ ಮಾಡುವುದು ಕೂಡಾ ತಪ್ಪು ಎಂದು ಪರಿಗಣಿಸಲಾಗುತ್ತದೆ.

ಜಿಲ್ಲೆಯ ಟೌಂಕ್‌ಪುರಿ ತಾಂಡಾದಲ್ಲಿ 10 ಸಾವಿರಕ್ಕೂ ಹೆಚ್ಚಿನ ಕುಟುಂಬಗಳು ಮುಸ್ಲಿಂ ಸಮುದಾಯಕ್ಕೆ ಸೇರಿದ್ದು, ಒಂದು ವೇಳೆ ವರನ ಬಾರಾತ್ ತಡವಾಗಿ ಬಂದಲ್ಲಿ ಪ್ರತಿ ನಿಮಿಷಕ್ಕೆ 100 ರೂಪಾಯಿ ದಂಡ ವಿಧಿಸಲು ತಾಂಡಾದಲ್ಲಿರುವ ಹಿರಿಯರು ನಿರ್ಧರಿಸಿದ್ದಾರೆ.

ವಿವಾಹದ ಮೆರವಣಿಗೆ ಸಂದರ್ಭದಲ್ಲಿ ರಸ್ತೆಯಲ್ಲಿ ನೃತ್ಯ ಮಾಡುವುದು ಡ್ರಮ್ಸ್‌ಗಳನ್ನು ಬಾರಿಸುವುದು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಅನಗತ್ಯ ವೆಚ್ಚಗಳಿಗೆ ಕಡಿವಾಣ ಹಾಕಿ, ತಿಂಡಿ ತಿನಿಸುಗಳನ್ನು ಕೂಡಾ ಹಾಳುಮಾಡದಂತೆ ಮಾಡಿರುವುದು ಜನತೆಯ ಏಳಿಗೆಗಾಗಿ ಎಂದು ಗ್ರಾಮದ ಮಸೀದಿಯ ಮೌಲ್ವಿ ಮೌಲಾನಾ ಅರ್ಷದ್ ಹೇಳಿದ್ದಾರೆ.  

ಗ್ರಾಮದಲ್ಲಿರುವ ಕುಟುಂಬಗಳ ಸದಸ್ಚರು ಗ್ರಾಮದ ಯುವತಿಯನ್ನೇ ಮದುವೆಯಾಗುವುದು ಸೂಕ್ತ. ಇಂತಹ ಸಂಪ್ರದಾಯದಿಂದ ನಮ್ಮ ಪುತ್ರಿಯರು, ಸಹೋದರಿಯರು ರಕ್ಷಣೆ ನೀಡಿದಂತಾಗುತ್ತದೆ. ಸಮಾಜ ದ್ರೋಹಿಗಳಿಗೆ ಕಡಿವಾಣ ಹಾಕಿದಂತಾಗುತ್ತದೆ ಎಂದು ಮೌಲ್ವಿ ಮೌಲಾನಾ ಅರ್ಷದ್ ತಿಳಿಸಿದ್ದಾರೆ.

Share this Story:

Follow Webdunia kannada