Select Your Language

Notifications

webdunia
webdunia
webdunia
webdunia

ಹಸೆಮಣೆಯಲ್ಲಿ ವರದಕ್ಷಿಣೆಗೆ ಒತ್ತಾಯಿಸಿದಾಗ ವಧು ಮಾಡಿದ್ದೇನು ಗೊತ್ತಾ?

ಹಸೆಮಣೆಯಲ್ಲಿ ವರದಕ್ಷಿಣೆಗೆ ಒತ್ತಾಯಿಸಿದಾಗ ವಧು ಮಾಡಿದ್ದೇನು ಗೊತ್ತಾ?
ಇಂದೋರ್ , ಗುರುವಾರ, 8 ಅಕ್ಟೋಬರ್ 2015 (12:41 IST)
ಮದುವೆ ಮನೆಯಲ್ಲಿ ವರನ ಕಡೆಯವರು ವರದಕ್ಷಿಣೆಗಾಗಿ ಪಟ್ಟು ಹಿಡಿಯುವುದು. ವಧುವಿನ ಕಡೆಯವರು ಅವರ ಕಾಲಿಗೆ ಬಿದ್ದು ಮದುವೆ ಕಾರ್ಯ ಮುಗಿಸಲು ಬೇಡಿಕೊಳ್ಳುವುದು. ಇಂತಹ ಪರಿಸ್ಥಿತಿಯಲ್ಲಿ ತನ್ನ ಬದುಕೇ ಮುಗಿದು ಹೋಯಿತು ಎಂದು ವಧು ಗೋಳಾಡುವುದು. ಇಂತಹ ಸನ್ನಿವೇಶಗಳನ್ನು ನೋಡಿರುತ್ತೀರಾ?  ಆದರೆ ಮಧ್ಯಪ್ರದೇಶದಲ್ಲಿ ಇಂತಹದೇ ಪರಿಸ್ಥಿತಿಯನ್ನು ಎದುರಿಸಿದ ವಧುವೊಬ್ಬಳು ಕಂಗಾಲಾಗಿ ಕಣ್ಣೀರು ಹಾಕಲಿಲ್ಲ. ಬದಲಾಗಿ ವರನಿಗೆ ತಕ್ಕ ಪಾಠ ಕಲಿಸಿದಳು. ಅಷ್ಟಕ್ಕೂ ಆಕೆ ಮಾಡಿದ್ದೇನು ಗೊತ್ತಾ? ಮುಂದೆ ಓದಿ.

 
ತನ್ನ ಮದುವೆ ನಿಂತು ಹೋಯಿತು ಎಂದು ಧೈರ್ಯ ಕಳೆದುಕೊಳ್ಳಲಿಲ್ಲ ಆಕೆ. ಮನೆಯವರಿಗೆಲ್ಲ ಸಮಾಧಾನ ಹೇಳಿದಳು. ಜತೆಗೆ ಮದುವೆಗೆ ನಿರಾಕರಿಸಿದ ವರನಿಗೆ ತಕ್ಕ ಪಾಠ ಕಲಿಸಿದ ಆಕೆ, ಮದುವೆಗೆ ಅತಿಥಿಯಾಗಿ ಬಂದಿದ್ದ ಯುವಕನೊಬ್ಬನ ಬಳಿ ಹೋಗಿ, ಮಾತನಾಡಿ ಆತನನ್ನೇ ಮದುವೆಯಾಗಿ ದಿಟ್ಟತನವನ್ನು ಮೆರೆದಿದ್ದಾಳೆ ಮತ್ತು ಧನಪಿಶಾಚಿ ವರನಿಗೆ ಜೈಲಿನ ಹಾದಿ ತೋರಿಸಿದ್ದಾಳೆ. 
 
ವರದಿಗಳ ಪ್ರಕಾರ, ಫರೀದ್ ಶಾ ಎನ್ನುವ ಯುವಕನ ಜತೆ ತಮನ್ನಾ ಎಂಬುವವಳ ಮದುವೆ ನಿಶ್ಚಯವಾಗಿತ್ತು. ವರನ ಕಡೆವರು ಕೇಳಿದ್ದ ವರದಕ್ಷಿಣೆ ಬೇಡಿಕೆಗಳಲ್ಲಿ ಹೆಚ್ಚಿನದನ್ನು ವಧುವಿನ ಕಡೆಯವರು ಪೂರೈಸಿದ್ದರು. ಆದರೆ ಮದುವೆ ಇನ್ನೇನು ಮುಗಿದೇ ಹೋಯಿತು ಎನ್ನುವಷ್ಟರಲ್ಲಿ ಫರೀದ್ ತನಗೆ ಕಾರು ಕೊಡಿಸಿ. ಇಲ್ಲ ಮದುವೆ ಆಗಲಾರೆ ಎಂದು ಹಠ ಹಿಡಿದು ಕುಳಿತ. 
 
ನಡೆಯುತ್ತಿರುವ ಎಲ್ಲ ವಿದ್ಯಮಾನಗಳನ್ನು ನೋಡುತ್ತ ಕುಳಿತಿದ್ದ ಯುವತಿ, ಆತ ತನ್ನ ಹಠವನ್ನು ಬಿಡಲಾರ ಎಂಬುದು ಖಚಿತವಾದಾಗ ಮದುವೆಗೆ ಬಂದಿದ್ದ ಅತಿಥಿಗಳಲ್ಲಿ ಒಬ್ಬನಾದ ಶರೀಫ್‌ ಬಳಿ ಹೋಗಿ ಮಾತನಾಡಿದಾಗ ಆತ ಮದುವೆಯಾಗಲು ಒಪ್ಪಿದ್ದಾನೆ. ಕೊನೆಗೂ ಅದೇ ಮಹೂರ್ತದಲ್ಲಿ ತಮನ್ನಾ ಮದುವೆಯಾಗಿದ್ದಾಳೆ.
 
ಬಳಿಕ ತಮನ್ನಾ, ಫರೀದ್ ಮತ್ತವರ ಕುಟುಂಬದವರ ವಿರುದ್ಧ ವರದಕ್ಷಿಣೆ ಕಿರುಕುಳ ಪ್ರಕರಣ ದಾಖಲಿಸಿದ್ದಾಳೆ. 

Share this Story:

Follow Webdunia kannada