ಹೃದಯಾಘಾತದಿಂದ ವಧು ಸಾವು : ತಂಗಿಗೆ ತಾಳಿ ಕಟ್ಟಿದ ವರ

Webdunia
ಭಾನುವಾರ, 26 ಫೆಬ್ರವರಿ 2023 (12:58 IST)
ಗಾಂಧಿನಗರ : ವಧುವೊಬ್ಬಳು ಮದುವೆ ದಿನವೇ ಹೃದಯಘಾತದಿಂದ ಮೃತಪಟ್ಟ ಘಟನೆ ಗುಜರಾತಿನ ಸುಭಾಷ್ನಗರದ ಭಾವನಗರದಲ್ಲಿ ನಡೆದಿದೆ.
 
ಭಾವನಗರದ ಭಗವಾನೇಶ್ವರ ಮಹಾದೇವ ದೇವಸ್ಥಾನದ ಮುಂಭಾಗದಲ್ಲಿ ಈ ಅಹಿತಕರ ಘಟನೆ ನಡೆದಿದೆ. ಜಿನಾಭಾಯಿ ರಾಥೋಡ್ ಎಂಬವರ ಪುತ್ರಿ ಹೇತಾಲ್ ಹಾಗೂ ನಾರಿ ಗ್ರಾಮದ ರಾಣಾಭಾಯ್ ಬೂತಭಾಯ್ ಅಲ್ಗೋಟಾರ್ ಅವರ ಮಗ ವಿಶಾಲ್ ಅವರಿಬ್ಬರಿಗೂ ಮದುವೆ ನಡೆಯುತ್ತಿತ್ತು.

ಮದುವೆಯ ವಿಧಿವಿಧಾನಗಳನ್ನು ನಡೆಸುತ್ತಿದ್ದಾಗ ಹೇತಾಲ್ ತಲೆ ಸುತ್ತಿ ಬಿದ್ದಿದ್ದಾಳೆ. ತಕ್ಷಣ ಆಕೆಯನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಅಲ್ಲಿ ಹೇತಾಲ್ ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ.

ಹೇತಾಲ್ನ ಸಾವಿನಿಂದ ಕುಟುಂಬ ಶೋಕದಲ್ಲಿದ್ದರೂ ಮದುವೆಯ ಆಚರಣೆಯನ್ನು ಮುಂದುವರಿಸಲು ನಿರ್ಧರಿಸಿದ್ದಾರೆ. ಇದರಿಂದಾಗಿ ಹೇತಾಲ್ನ ತಂಗಿಗೆ ವರ ವಿಶಾಲ್ ತಾಳಿ ಕಟ್ಟಿದ್ದಾನೆ. ಸಮಾರಂಭ ಮುಗಿಯುವವರೆಗೂ ಹೇತಲ್ ಅವರ ಮೃತದೇಹವನ್ನು ಕೋಲ್ಡ್ ಸ್ಟೋರೇಜ್ನಲ್ಲಿ ಇಡಲಾಗಿತ್ತು ಎಂದು ವರದಿಯಾಗಿದೆ. 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಬಿಹಾರ ಗೆಲ್ಲುತ್ತಿದ್ದಂತೇ ಕಾರ್ಯಕರ್ತರಿಗೆ ಮುಂದಿನ ನಾಲ್ಕು ಟಾರ್ಗೆಟ್ ನೀಡಿದ ಪ್ರಧಾನಿ ಮೋದಿ

ಸಾಲುಮರದ ತಿಮ್ಮಕ್ಕನ ಕೊನೆಯ ಆಸೆ ಈಡೇರಿಸಲು ಮುಂದಾದ ಸಿಎಂ ಸಿದ್ದರಾಮಯ್ಯ

ಬಿಹಾರದಲ್ಲಿ ಕೇವಲ 2 ಸ್ಥಾನದಲ್ಲಿ ಮುನ್ನಡೆ, ರಾಹುಲ್ ಗಾಂಧಿಗೆ ಇದು 95 ನೇ ಸೋಲು

ಬಿಜೆಪಿಗೆ ನೆಹರೂ, ಗಾಂಧೀಜಿಯನ್ನು ತೆಗಳುವುದೇ ಕೆಲಸ: ಸಿದ್ದರಾಮಯ್ಯ

ಬಿಹಾರ ಚುನಾವಣೆ ಗೆದ್ದಿದ್ದಕ್ಕೆ ಲಾಡು ಹಂಚಿ ಥಕಥೈ ಕುಣಿದ ಕರ್ನಾಟಕ ಬಿಜೆಪಿ ನಾಯಕರು

ಮುಂದಿನ ಸುದ್ದಿ
Show comments