Select Your Language

Notifications

webdunia
webdunia
webdunia
webdunia

ನನಗಿದ್ದ ಒಬ್ಬನೇ ಮಗನನ್ನು ದೇಶಕ್ಕೆ ನೀಡಿದ್ದೇನೆ: ಹುತಾತ್ಮ ಯೋಧನ ತಂದೆ

ನನಗಿದ್ದ ಒಬ್ಬನೇ ಮಗನನ್ನು ದೇಶಕ್ಕೆ ನೀಡಿದ್ದೇನೆ: ಹುತಾತ್ಮ ಯೋಧನ ತಂದೆ
ನವದೆಹಲಿ , ಭಾನುವಾರ, 21 ಫೆಬ್ರವರಿ 2016 (18:31 IST)
ನನಗಿದ್ದದ್ದು ಒಬ್ಬನೇ ಮಗ, ನಾನವನನ್ನು ದೇಶಕ್ಕಾಗಿ ನೀಡಿದೆ-ಮುಂಜಾನೆ ಉಗ್ರರ ದಾಳಿಯಲ್ಲಿ ಹುತಾತ್ಮರಾದ ಕ್ಯಾಪ್ಟನ್ ಪವನ್ ಕುಮಾರ್ ಅವರ ತಂದೆ ಅಸಹನೀಯ ದುಃಖದ ನಡುವೆಯೂ ಹೆಮ್ಮೆಯಿಂದ ಹೇಳಿದ ಮಾತುಗಳಿವು.

ಜಮ್ಮು ಕಾಶ್ಮೀರದ ಪಾಂಪೋರ್ ಪ್ರದೇಶದಲ್ಲಿ ನಿನ್ನೆಯಿಂದ ನಡೆಯುತ್ತಿರುವ ಉಗ್ರರೊಂದಿಗೆ ಪವನ್ ಕುಮಾರ್ ಹುತಾತ್ಮರಾಗಿದ್ದಾರೆ. 
 
ನನಗಿದ್ದದ್ದು ಒಬ್ಬನೇ ಮಗ, ನಾನು ಅವನನ್ನು ಸೇನೆಗೆ ನೀಡಿದೆ. ಅಪ್ಪನಾದವನು ಹೆಮ್ಮೆ ಪಡುವ ವಿಷಯ ಇದು. ಆತ ಸೇನಾ ದಿವಸ್‌ನಂದೇ ಹುಟ್ಟಿದ್ದನಾದ್ದರಿಂದ ಸೇನೆಗೆ ಸೇರುವುದು ಆತನ ಹಣೆಯಲ್ಲಿ ಬರೆದಿತ್ತು. ಈ ಹಿಂದೆ ಆತ ಎರಡು ಯಶಸ್ವಿ ಕಾರ್ಯಾಚರಣೆಗಳಲ್ಲಿ ಭಾಗಿಯಾಗಿದ್ದ. ಮೂವರು ಉಗ್ರರನ್ನು ಹೊಡೆದುರುಳಿಸಿದ್ದ ಎಂದು ಕ್ಯಾಪ್ಟನ್ ಪವನ್ ಕುಮಾರ್ ಅವರ ಅಪ್ಪ ರಾಜ್‌ಬೀರ್ ಸಿಂಗ್ ಹೇಳಿದ್ದಾರೆ. 
 
23 ವರ್ಷದ ಪವನ್ ಕುಮಾರ್ ಸಿಕ್ ಲಿವ್ ಪಡೆದು ಮನೆಗೆ ತೆರಳುವವರಿದ್ದರು, ಆದರೆ ಉಗ್ರ ದಾಳಿ ಹಿನ್ನೆಲೆಯಲ್ಲಿ ರಜೆ ರದ್ದು ಮಾಡಿ ಕರ್ತವ್ಯಕ್ಕೆ ಹಾಜರಾಗಿದ್ದರು ಎಂದು ಸೇನಾ ಮೂಲಗಳು ತಿಳಿಸಿವೆ. 
 
ಜಮ್ಮು ಕಾಶ್ಮೀರದ ಪಾಂಪೋರ್​ನಲ್ಲಿ ಉಗ್ರರು ಮತ್ತು ಭಾರತೀಯ ಯೋಧರ ನಡುವೆ ನಿನ್ನೆಯಿಂದ ಗುಂಡಿನ ಚಕಮಕಿ ನಡೆಯುತ್ತಿದೆ. ಕಾರ್ಯಾಚರಣೆಯಲ್ಲಿ  ಕ್ಯಾಪ್ಟನ್ ಪವನ್ ಕುಮಾರ್ ಸೇರಿದಂತೆ ಅರೆಸೇನಾ ಪಡೆಯ 2 ಯೋಧರು, ಇಬ್ಬರು ಸಿಆರ್‌ಪಿಎಫ್ ಯೋಧರು ಸೇರಿದಂತೆ ನಾಲ್ವರು ಯೋಧರು ಹುತಾತ್ಮರಾಗಿದ್ದಾರೆ. ಉಗ್ರರ ಗುಂಡಿಗೆ ಓರ್ವ ನಾಗರಿಕ ಕೂಡ ಅಸುನೀಗಿದ್ದಾನೆ ಎಂದು ವರದಿಯಾಗಿದೆ. ಸಿಆರ್‌ಪಿಎಫ್‌ನ  13 ಪೊಲೀಸರಿಗೆ ಗಾಯಗಳಾಗಿದೆ. 

Share this Story:

Follow Webdunia kannada