ನವದೆಹಲಿ : ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ದೆಹಲಿ ತೆರಳಿದ್ದು, ಹೈಕಮಾಂಡ್ ನಾಯಕರ ಭೇಟಿಗೆ ಪ್ರಯತ್ನ ಮಾಡುತ್ತಿದ್ದಾರೆ.
ಸೋಮವಾರ ಇಡೀ ದಿನದ ಪ್ರಯತ್ನದ ಬಳಿಕವೂ ವರಿಷ್ಠರ ಸಮಯ ಸಿಗಲಿಲ್ಲ. ಲೋಕಸಭೆ, ರಾಜ್ಯಸಭೆಯಲ್ಲಿ ಸಾಲು ಸಾಲು ಮಸೂದೆಗಳ ಮಂಡನೆ ಹಿನ್ನೆಲೆ ಹೈಕಮಾಂಡ್ ಬೊಮ್ಮಾಯಿಗೆ ಸಮಯ ನೀಡಿಲ್ಲ.
ಇಂದು ಬೊಮ್ಮಾಯಿಯವರು ಹೈಕಮಾಂಡ್ ನಾಯಕರ ಭೇಟಿ ಮಾಡುವ ಸಾಧ್ಯತೆ ಇದೆ. ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ, ಕೇಂದ್ರ ಗೃಹ ಸಚಿವ ಅಮಿತ್ ಶಾ ಜೊತೆ ಸಮಯ ಕೇಳಿದ್ದಾರೆ. ಇಂದು ವರಿಷ್ಠರಿಂದ ಸಮಯ ಸಿಗುವ ಸಾಧ್ಯತೆ ಇದೆ. ಒಂದು ವೇಳೆ ನಾಯಕರ ಭೇಟಿ ಮಾಡಿದರೆ ವಿಪಕ್ಷ ನಾಯಕನ ಹುದ್ದೆ ಚರ್ಚೆ ಹಾಗೂ ತಮ್ಮ ಅಭಿಪ್ರಾಯವನ್ನು ಹೈಕಮಾಂಡ್ ಮುಂದಿಡಲು ತಿರ್ಮಾನ ಮಾಡಿದ್ದಾರೆ.