Webdunia - Bharat's app for daily news and videos

Install App

ತಿರುವನಂತಪುರಂ ಶ್ರೀಪದ್ಮನಾಭ ಸ್ವಾಮಿ ದೇವಾಲಯದಲ್ಲಿ ಐದು ಬಾಂಬ್‌ಗಳ ಪತ್ತೆ

Webdunia
ಸೋಮವಾರ, 27 ಏಪ್ರಿಲ್ 2015 (16:21 IST)
ಲಕ್ಷ ಲಕ್ಷ ಕೋಟಿ ಗಟ್ಟಲೆ ಮೌಲ್ಯದ ಚಿನ್ನದ ಸಂಗ್ರಹವಿರುವ ಶ್ರೀ ಪದ್ಮನಾಭಸ್ವಾಮಿ ಮಂದಿರದಲ್ಲಿ ಆವರಣದಲ್ಲಿರುವ ಶ್ರೀಪಾದಂ ಕುಂಡದಲ್ಲಿ ಪೈಪ್ ಬಾಂಬ್‌ಗಳು ಪತ್ತೆಯಾಗಿ ಆಘಾತ ಮೂಡಿಸಿದ್ದಲ್ಲದೇ ದೇವಾಲಯದ ಭದ್ರತೆಯ ಬಗ್ಗೆ ಹಲವು ಅನುಮಾನಗಳಿಗೆ ಕಾರಣವಾಗಿದೆ.

ದೇವಾಲಯದ ಭದ್ರತಾ ಸಿಬ್ಬಂದಿಗಳು ಪೈಪ್-ಬಾಂಬ್‌ಗಳನ್ನು ಸುರಕ್ಷಿತ ಸ್ಥಳಕ್ಕೆ ತೆಗೆದುಕೊಂಡು ಹೋಗಿ ನಿಷ್ಟ್ರೀಯಗೊಳಿಸಿದ್ದಾರೆ. ಪೈಪ್-ಬಾಂಬ್‌ಗಳು ಸುಮಾರು 15 ವರ್ಷಗಳಷ್ಟು ಹಳೆಯದಾಗಿವೆ ಎನ್ನಲಾಗಿದೆ.

ಜಿಲ್ಲಾಧಿಕಾರಿ ಮತ್ತು ದೇವಾಲಯದ ಮುಖ್ಯ ಭದ್ರತಾ ಅಧಿಕಾರಿಯಾದ ಜೆ.ಸುಕುಮಾರ್ ಪಿಳ್ಳೈ ಮಾತನಾಡಿ, ಶ್ರೀ ಪದ್ಮನಾಭಸ್ವಾಮಿ ಮಂದಿರದಲ್ಲಿ ಆವರಣದಲ್ಲಿರುವ ಶ್ರೀಪಾದಂ ಕುಂಡವನ್ನು ಸ್ವಚ್ಚಗೊಳಿಸುತ್ತಿರುವಾಗ ಕಬ್ಬಿಣದಿಂದ ತಯಾರಿಸಲಾದ ಐದು ಪೈಪ್-ಬಾಂಬ್‌ಗಳು ಪತ್ತೆಯಾಗಿದ್ದು, ಬಾಂಬ್‌ಗಳು 40 ಸೆಂಟಿಮೀಟರ್ ಉದ್ದ ಮತ್ತು 5 ಸೆಂಟಿಮೀಟರ್ ಸುತ್ತಳತೆಯನ್ನು ಹೊಂದಿವೆ. ಬಾಂಬ್‌ಗಳನ್ನು ಗನ್ನಿ ಬ್ಯಾಗ್‌ನಲ್ಲಿ ಇಡಲಾಗಿತ್ತು ಎಂದು ತಿಳಿಸಿದ್ದಾರೆ.  

ಶ್ರೀಪಾದಂ ಅರಮನೆಯನ್ನು ಹೆರಿಟೇಜ್ ಮ್ಯೂಸಿಯಂ ಆಗಿ ಪರಿವರ್ತಿಸಲು ಶ್ರೀಪಾದಂ ಕುಂಡುವನ್ನು ಸ್ವಚ್ಚಗೊಳಿಸುವ ಹೊಣೆಯ ಮೇಲ್ವಿಚಾರಣೆಯನ್ನು ಆರ್ಕಿಯಾಲಾಜಿ ವಿಭಾಗದ ಗುಮಾಸ್ತನಿಗೆ ವಹಿಸಲಾಗಿತ್ತು. ಕುಂಡುವನ್ನು ಸ್ವಚ್ಚಗೊಳಿಸುವಾಗ ಪೈಪ್-ಬಾಂಬ್‌ಗಳು ಪತ್ತೆಯಾಗಿರುವುದು ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ತಕ್ಷಣವೇ ಭದ್ರತಾ ದಳದ ಸಿಬ್ಬಂದಿ ಬಾಂಬ್‌ಗಳನ್ನು ನಿಷ್ಕ್ರೀಯಗೊಳಿಸಿದ್ದಾರೆ.

ಪೈಪ್-ಬಾಂಬ್‌ಗಳು ಪತ್ತೆಯಾಗಿದ್ದರಿಂದ ಬಾಂಬ್ ನಿಷ್ಟ್ರೀಯ ದಳಕ್ಕೆ ಮಾಹಿತಿ ನೀಡಲಾಯಿತು. ಬಾಂಬ್ ನಿಷ್ಟ್ರೀಯ ದಳದ ತಂಡ ಬಾಂಬ್‌ಗಳನ್ನು ಸುರಕ್ಷಿತ ಸ್ಥಳಕ್ಕೆ ತೆಗೆದುಕೊಂಡು ಹೋಗಿ ನಿಷ್ಟ್ರೀಯಗೊಳಿಸಿದ್ದಾರೆ ಎಂದು ಜಿಲ್ಲಾಧಿಕಾರಿ ಸುಕುಮಾರಾ ಪಿಳ್ಳೈ ತಿಳಿಸಿದ್ದಾರೆ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments