Select Your Language

Notifications

webdunia
webdunia
webdunia
webdunia

ಹರಿಯಾಣದಲ್ಲಿ ಅರಳಿದ ಕಮಲ

ಹರಿಯಾಣದಲ್ಲಿ  ಅರಳಿದ ಕಮಲ
ಹರಿಯಾಣಾ , ಸೋಮವಾರ, 20 ಅಕ್ಟೋಬರ್ 2014 (09:04 IST)
ಹರಿಯಾಣಾದಲ್ಲಿ  ಮೊದಲ ಬಾರಿಗೆ ಸ್ಪಷ್ಟ ಬಹುಮತ ಪಡೆಯುವಲ್ಲಿ ಯಶಸ್ವಿಯಾಗಿರುವ ಕಮಲ ಪಡೆ ಸ್ವಂತ ಬಲದ ಮೇಲೆ ಸರಕಾರ ರಚನೆ ಮಾಡಲಿದೆ.

ಹರಿಯಾಣದಲ್ಲಿ ಬಿಜೆಪಿ, ಕಾಂಗ್ರೆಸ್‌ ಮತ್ತು ಐಎನ್‌ಎಲ್‌ಡಿ ಪಕ್ಷಗಳ ನಡುವೆ ತ್ರಿಕೋನ ಸ್ಪರ್ಧೆ ಉಂಟಾಗಿತ್ತು. ಪ್ರಧಾನಿ ಮೋದಿ ಅವರ ಮ್ಯಾಜಿಕ್‌ ಸಂಪೂರ್ಣವಾಗಿ ಕೆಲಸ ಮಾಡಿದ್ದು ಮೂರು ದಶಕಗಳ ನಂತರ ಬಿಜೆಪಿ ಇಲ್ಲಿ ಉತ್ತಮ ಸಾಧನೆ ಮಾಡಿದೆ. 
 
ಹರಿಯಾಣಾದಲ್ಲಿ ಈ ಬಾರಿ ಐತಿಹಾಸಿಕ ದಾಖಲೆಯ ಶೇ.76.54ರಷ್ಟು ಮತದಾನವಾಗಿತ್ತು.
 
90 ಕ್ಷೇತ್ರಗಳ ಹರಿಯಾಣಾದಲ್ಲಿ ಬಿಜೆಪಿ 47 ಸ್ಥಾನ ಪಡೆದಿದ್ದು, 2009ರಲ್ಲಿ  ಕೇವಲ 4 ಸ್ಥಾನಗಳನ್ನು ಮಾತ್ರ ಪಡೆದಿತ್ತು. 1987ರಲ್ಲಿ ಸಹ ಬಿಜೆಪಿ ಇಲ್ಲಿ ಉತ್ತಮ ಸಾಧನೆ ಮಾಡಿತ್ತು.  20 ಸ್ಥಾನಗಳಲ್ಲಿ ಸ್ಪರ್ಧಿಸಿದ್ದ ಬಿಜೆಪಿ 16ರಲ್ಲಿ ಜಯ ಸಾಧಿಸಿತ್ತು. 
 
ಐಎನ್‌ಎಲ್‌ಡಿ ಮೈತ್ರಿ ಮುರಿದುಕೊಂಡರೂ ಬಿಜೆಪಿ ತನ್ನ ಸ್ವಯಂ ಬಲದ ಮೇಲೆ ಜನಮತವನ್ನು ತನ್ನದಾಗಿಸಿಕೊಂಡಿದೆ.
 
ಈ ಕುರಿತು ಪ್ರತಿಕ್ರಯಿಸಿರುವ ಹರಿಯಾಣಾದಲ್ಲಿ ಬಿಜೆಪಿ ಉಸ್ತುವಾರಿ ಹೊತ್ತಿರುವ ಕೈಲಾಶ್ ವಿಜಯ್‌ ವರ್ಗಿಯಾ, ''ಹರಿಯಾಣಾದಲ್ಲಿ ಜನ ಬದಲಾವಣೆ ಬಯಸಿದ್ದಾರೆ. ನಮ್ಮ ಪಕ್ಷದ ಕಾರ್ಯಕರ್ತರು ಮತ್ತು ನಾಯಕರ ಕಠಿಣ ಪರಿಶ್ರಮಕ್ಕೆ ಬೆಲೆ ದೊರೆತಿದೆ. ಚುನಾವಣೆಯ ಯಶಸ್ಸು ಮೋದಿ ಮತ್ತು  ಅಮಿತ್ ಶಾಗೆರಿಗೆ ಸಲ್ಲುತ್ತದೆ'' ಎಂದಿದ್ದಾರೆ.
 
ಕಳೆದೊಂದು ದಶಕದಿಂದ ಆಡಳಿತದಲ್ಲಿದ್ದ ಆಡಳಿತರೂಢ ಕಾಂಗ್ರೆಸ್‌ ಪಕ್ಷ ರಾಜ್ಯದಲ್ಲಿ ಮೂರನೇ ಸ್ಥಾನಕ್ಕೆ ಕುಸಿದಿದೆ. 

Share this Story:

Follow Webdunia kannada