Select Your Language

Notifications

webdunia
webdunia
webdunia
webdunia

ಜನತಾ ಪರಿವಾರ ವಿಲೀನದಿಂದ ಬಿಜೆಪಿ ಬೆಚ್ಚಿಬಿದ್ದಿದೆ: ನಿತೀಶ್ ಕುಮಾರ್

ಜನತಾ ಪರಿವಾರ ವಿಲೀನದಿಂದ ಬಿಜೆಪಿ ಬೆಚ್ಚಿಬಿದ್ದಿದೆ: ನಿತೀಶ್ ಕುಮಾರ್
ಪಾಟ್ಣಾ , ಗುರುವಾರ, 16 ಏಪ್ರಿಲ್ 2015 (17:07 IST)
ಜನತಾ ಪರಿವಾರ ವಿಲೀನಗೊಂಡಿರುವುದು ಭಾರತೀಯ ಜನತಾ ಪಕ್ಷದ ನಿದ್ದೆಗೆಡಿಸಿದೆ, ಅದು ಅವರ ತತ್‌ಕ್ಷಣದ ಪ್ರತಿಕ್ರಿಯೆಗಳಲ್ಲಿ ಗೋಚರಿಸುತ್ತದೆ ಎಂದು ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಹೇಳಿದ್ದಾರೆ.  

ಬಿಜೆಪಿ ಒಳಗೊಳಗೆ ಬೆದರಿದೆ. ಅವರ ಪ್ರತಿಕ್ರಿಯೆಯಲ್ಲಿ ಭಯ ಸ್ಪಷ್ಟವಾಗಿ ಪ್ರತಿಬಿಂಬಿಸುತ್ತದೆ. ಇಂದು ಅವರು ನಮಗೆ ಅಣಕವಾಡುತ್ತಿದ್ದಾರೆ. ಶೀಘ್ರದಲ್ಲಿಯೇ ಇದು ಅವರ ಅವನತಿಗೆ ಕಾರಣವಾಗಲಿದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ. 
 
"ಪಕ್ಷದ ನೀತಿ ನಿಯಮಗಳು, ಚುನಾವಣಾ ಚಿಹ್ನೆ ಇವೇ ಮುಂತಾದ ಪ್ರಮುಖ ವಿಷಯಗಳ ಬಗ್ಗೆ ನಿರ್ಧರಿಸಲು ಸಮಿತಿಯನ್ನು ರಚಿಸಲಾಗಿದೆ", ಎಂದು ಅವರು ತಿಳಿಸಿದ್ದಾರೆ.
 
"ಮುಲಾಯಂ ಸಿಂಗ್ ಅವರ ನಾಯಕತ್ವದಲ್ಲಿ ಎಲ್ಲ ಪಕ್ಷಗಳು ಜತೆ ಸೇರಿವೆ. ಸಮಾಜವಾದಿ ಪಕ್ಷದ ಸದಸ್ಯರು ಸಹ ವಿಲೀನದ ಸಮಯದಲ್ಲಿ  ಹಾಜರಿದ್ದರು. ಆದಷ್ಟು ಬೇಗ ನಾವು ಪಕ್ಷದ ಹೆಸರು, ಬಾವುಟ, ಹಿಹ್ನೆ ,ಪಕ್ಷದ ಸಿದ್ಧಾಂತಗಳು ಮತ್ತು ನೀತಿ ನಿಯಮಗಳ ಬಗ್ಗೆ ನಿರ್ಧರಿಸಲಿದ್ದೇವೆ", ಎಂದು ಸಿಎಂ ಮಾಹಿತಿ ನೀಡಿದ್ದಾರೆ. 
 
ಜನತಾ ಪರಿವಾರ ವಿಲೀನದ ಕುರಿತು ಪ್ರತಿಕ್ರಿಯಿಸಿದ್ದ ಬಿಜೆಪಿ ಅಧ್ಯಕ್ಷ ಅಮಿತ್ ಶಾ, 'ಸೊನ್ನೆಯನ್ನು ಸೊನ್ನೆಗೆ ಸೇರಿಸಿದರೆ ಉಳಿಯುವುದು ಸೊನ್ನೆಯೇ (0+0=0). ಬಿಹಾರದಲ್ಲಿ  ನಮ್ಮ ಪಕ್ಷ ಅಧಿಕಾರಕ್ಕೆ ಬರುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ', ಎಂದಿದ್ದರು.

Share this Story:

Follow Webdunia kannada