Webdunia - Bharat's app for daily news and videos

Install App

ಮಹಾರಾಷ್ಟ್ರ, ಹರಿಯಾಣಾ ನಂತ್ರ ಕಾಶ್ಮಿರ್, ಜಾರ್ಖಂಡ್‌‌ನಲ್ಲಿ ಬಿಜೆಪಿಗೆ ಅಗ್ನಿ ಪರೀಕ್ಷೆ

Webdunia
ಭಾನುವಾರ, 26 ಅಕ್ಟೋಬರ್ 2014 (12:14 IST)
ಮಹಾರಾಷ್ಟ್ರ, ಹರ್ಯಾಣ ವಿಧಾನಸಭೆ ಚುನಾವಣೆ ಫ‌ಲಿತಾಂಶ ಪ್ರಕಟವಾದ ಒಂದು ವಾರದೊಳಗಾಗಿ ಮತ್ತೆರಡು ರಾಜ್ಯಗಳಿಗೆ ವಿಧಾನಸಭೆ ಚುನಾವಣೆ ಘೋಷಣೆಯಾಗಿದೆ. 87 ಸದಸ್ಯ ಬಲದ ಜಮ್ಮು-ಕಾಶ್ಮೀರ ಹಾಗೂ 81 ಸ್ಥಾನಗಳನ್ನು ಹೊಂದಿರುವ ಜಾರ್ಖಂಡ ವಿಧಾನಸಭೆಗಳಿಗೆ ನ.25ರಿಂದ ಡಿ.20ರವರೆಗೆ ಐದು ಹಂತಗಳಲ್ಲಿ ಚುನಾವಣೆ ನಡೆಸುವ ಸಂಬಂಧ ಕೇಂದ್ರ ಚುನಾವಣಾ ಆಯೋಗ ವೇಳಾಪಟ್ಟಿ ಪ್ರಕಟಿಸಿದೆ. ಈ ಎರಡೂ ರಾಜ್ಯಗಳಲ್ಲಿ ಡಿ.23ರಂದು ಮತ ಎಣಿಕೆ ನಡೆಯಲಿದೆ. 
 
ನ.25, ಡಿ.2, ಡಿ.9, ಡಿ.14 ಹಾಗೂ ಡಿ.20ರಂದು ಮತದಾನ ನಡೆಯಲಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಮುಖ್ಯ ಚುನಾವಣಾ ಆಯುಕ್ತ ವಿ.ಎಸ್‌. ಸಂಪತ್‌ ಅವರು ಪ್ರಕಟಿಸಿದರು. 
 
ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ ಸೇರಿದಂತೆ ಮೂವರು ಸಂಸದರಾಗಿ ಆಯ್ಕೆಯಾಗಿರುವ ಹಿನ್ನೆಲೆಯಲ್ಲಿ ತೆರವಾಗಿರುವ ದೆಹಲಿಯ ಮೂರು ವಿಧಾನಸಭೆ ಕ್ಷೇತ್ರಗಳಿಗೆ ನ.25ರಂದು ಚುನಾವಣೆ ನಡೆಯಲಿದೆ ಎಂದು ಹೇಳಿದರು. 
 
ಜಮ್ಮು-ಕಾಶ್ಮೀರದಲ್ಲಿ ಪ್ರವಾಹ ಪರಿಹಾರ ಕಾರ್ಯಾಚರಣೆ ನಡೆಯುತ್ತಿರುವ ಚುನಾವಣೆ ಮುಂದೂಡಬೇಕು ಎಂಬ ಬೇಡಿಕೆಯನ್ನು ಅಧಿಕಾರಾರೂಢ ನ್ಯಾಷನಲ್‌ ಕಾನ್ಫರೆನ್ಸ್‌ ಇಟ್ಟಿತ್ತು. ಆ ಪಕ್ಷವೊಂದನ್ನು ಬಿಟ್ಟು ಉಳಿದೆಲ್ಲಾ ಪಕ್ಷಗಳು ಚುನಾವಣೆ ಪರ ಒಲವು ತೋರಿವೆ ಎಂದು ಅವರು ವಿವರಿಸಿದರು. 
 
ಕಾಂಗ್ರೆಸ್ಸಿಗೆ ಮತ್ತೂಂದು ಪರೀಕ್ಷೆ: 
 
15 ವರ್ಷಗಳಿಂದ ಅಧಿಕಾರದಲ್ಲಿದ್ದ ಮಹಾರಾಷ್ಟ್ರ, 10 ವರ್ಷದಿಂದ ರಾಜ್ಯಭಾರ ಮಾಡುತ್ತಿದ್ದ ಹರ್ಯಾಣದಲ್ಲಿ ಅಧಿಕಾರ ಕಳೆದುಕೊಂಡಿರುವ ಕಾಂಗ್ರೆಸ್ಸಿಗೆ ಹಾಗೂ ಆ ಪಕ್ಷದ ನಾಯಕತ್ವಕ್ಕೆ ಈ ಎರಡೂ ಚುನಾವಣೆಗಳೂ ಅತ್ಯಂತ ಸವಾಲಿನದ್ದಾಗಿವೆ. ಏಕೆಂದರೆ ಎರಡೂ ರಾಜ್ಯ ಸರ್ಕಾರಗಳಲ್ಲಿ ಕಾಂಗ್ರೆಸ್‌ ಪಾಲುದಾರ ಪಕ್ಷವಾಗಿದೆ. ಜಮ್ಮು-ಕಾಶ್ಮೀರದಲ್ಲಿ ನ್ಯಾಷನಲ್‌ ಕಾನ್ಫರೆನ್ಸ್‌ ಹಾಗೂ ಜಾರ್ಖಂಡದಲ್ಲಿ ಜೆಎಂಎಂ ಪಕ್ಷಗಳು ಕಾಂಗ್ರೆಸ್‌ ಬೆಂಬಲದೊಂದಿಗೆ ಸರ್ಕಾರ ನಡೆಸುತ್ತಿವೆ. 
 
ಕಾಶ್ಮೀರದಲ್ಲಿ ಬಹುಮತಕ್ಕೆ ಬೇಕಾದ 'ಮಿಷನ್‌ +44' ಹೆಸರಿನಲ್ಲಿ ಬಿಜೆಪಿ ಪ್ರಚಾರಕ್ಕೆ ಇಳಿದಿದ್ದು, ಅದು ಯಶಸ್ವಿಯಾಗುತ್ತದೆಯೆ ಎಂಬುದನ್ನು ಕಾದು ನೋಡಬೇಕಿದೆ. 
 
ಜಾರ್ಖಂಡದಲ್ಲಿ ಜೆಎಂಎಂ- ಕಾಂಗ್ರೆಸ್‌ ಮಿತ್ರಕೂಟ ಮಣಿಸಿ ಅಧಿಕಾರಕ್ಕೇರಲು ಬಿಜೆಪಿ ಭರ್ಜರಿ ತಂತ್ರ ಹೆಣೆದಿದೆ. ಆಡಳಿತಾರೂಢ ಜೆಎಂಎಂ ಸರ್ಕಾರಕ್ಕೆ ಆಡಳಿತ ವಿರೋಧಿ ಅಲೆ ಬಾಧಿಸುತ್ತಿರುವುದು ಬಿಜೆಪಿಗೆ ವರದಾನವಾಗಿದೆ. ಜಮ್ಮು-ಕಾಶ್ಮೀರದಲ್ಲೂ ತನ್ನ ಪ್ರಭಾವ ತೋರಿಸಲು ಬಿಜೆಪಿ ಯತ್ನಿಸುತ್ತಿದ್ದರೆ, ನ್ಯಾಷನಲ್‌ ಕಾನ್ಫರೆನ್ಸ್‌ ಹಾಗೂ ಕಾಂಗ್ರೆಸ್‌ ಪಕ್ಷಗಳು ಈಗಾಗಲೇ ಮೈತ್ರಿ ಕಡಿದುಕೊಂಡಿವೆ. 
 
ವಿಧಾನಸಭಾ ವೈಶಿಷ್ಟ: 
 
ವಿಶೇಷಾಧಿಕಾರದ ಕಾರಣಕ್ಕೆ ಆರು ವರ್ಷ ಅಧಿಕಾರಾವಧಿ ಹೊಂದಿರುವ ಜಮ್ಮು-ಕಾಶ್ಮೀರದ ಪ್ರಸಕ್ತ ವಿಧಾನಸಭೆಯ ಅವಧಿ ಜ.16ಕ್ಕೆ ಮುಕ್ತಾಯಗೊಳ್ಳಲಿದೆ. ದೇಶದ ಇತರೆ ರಾಜ್ಯಗಳಂತೆ ಐದು ವರ್ಷ ಅಧಿಕಾರಾವಧಿ ಹೊಂದಿರುವ ಜಾರ್ಖಂಡದ ಪ್ರಸಕ್ತ ವಿಧಾನಸಭೆ ಅವಧಿ ಜ.3ರವರೆಗೆ ಇದೆ. ಜಮ್ಮು-ಕಾಶ್ಮೀರದಲ್ಲಿ 72.25 ಲಕ್ಷ ಹಾಗೂ ಜಾರ್ಖಂಡದಲ್ಲಿ 2 ಕೋಟಿ ಮತದಾರರಿದ್ದಾರೆ. 
 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments