Select Your Language

Notifications

webdunia
webdunia
webdunia
webdunia

ದೆಹಲಿಯಲ್ಲಿ ಸರಕಾರ ರಚನೆಯ ತಯಾರಿ ನಡೆಸುತ್ತಿರುವ ಬಿಜೆಪಿ

ದೆಹಲಿಯಲ್ಲಿ ಸರಕಾರ ರಚನೆಯ ತಯಾರಿ ನಡೆಸುತ್ತಿರುವ ಬಿಜೆಪಿ
ನವದೆಹಲಿ , ಸೋಮವಾರ, 8 ಸೆಪ್ಟಂಬರ್ 2014 (11:06 IST)
ದೆಹಲಿಯ ಗದ್ದುಗೆ ಏರಲು ಬಿಜೆಪಿ ಮುಂದಾಗಿದ್ದು, ರಾಷ್ಟ್ರ ರಾಜಧಾನಿಯಲ್ಲಿ ಸರಕಾರ ರಚನೆಗೆ ಸಂಬಂಧಿಸಿದಂತೆ ನಡೆಯುತ್ತಿರುವ ಎಲ್ಲ ವಿವಾದಗಳು ಅಂತ್ಯವಾಗುವ ಲಕ್ಷಣಗಳು ಗೋಚರಿಸುತ್ತಿವೆ.  

ಸ್ವತಃ ಲೆಫ್ಟಿನೆಂಟ್ ಗವರ್ನರ್ ಅವರೇ  ಸರಕಾರ ರಚಿಸುವಂತೆ ಕೇಸರಿ ಪಕ್ಷಕ್ಕೆ  ಔಪಚಾರಿಕ ಆಹ್ವಾನ ನೀಡಿರುವಾಗ  ಸರಕಾರ ರಚಿಸುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯ ಪಟ್ಟಿದ್ದಾರೆ ಎಂದು ಬಿಜೆಪಿ ವರಿಷ್ಠ ನಾಯಕರು ಖಚಿತ ಪಡಿಸಿದ್ದಾರೆ. ಸರಕಾರ ರಚನೆಯ ಪ್ರಕ್ರಿಯೆ ಮುಂದಿನ ಎರಡು ವಾರಗಳಲ್ಲಿ ಪೂರ್ಣಗೊಳ್ಳುವ ಸಾಧ್ಯತೆಯಿದೆ.
 
ಬಿಜೆಪಿ ಸಂಸದೀಯ ಮಂಡಳಿ ಮಂಗಳವಾರ ಸಭೆ ಸೇರಲಿದ್ದು, ಸರಕಾರ ರಚಿಸಲು ನಿರ್ಧಾರ ಕೈಗೊಳ್ಳುವ ಜತೆಗೆ ಮುಖ್ಯ ಮಂತ್ರಿ ಸ್ಥಾನಕ್ಕೆ ಹೆಸರನ್ನು ಪ್ರಕಟಿಸಲು ನಿರ್ಧರಿಸಲಿದೆ ಎಂದು ಹೇಳಲಾಗುತ್ತಿದೆ. 
 
ಏತನ್ಮಧ್ಯೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರನ್ನು ಭೇಟಿಯಾಗಿರುವ  ಕೇಜ್ರಿವಾಲ್ ನೇತೃತ್ವದ 'ಆಮ್ ಆದ್ಮಿ ಪಾರ್ಟಿ' ನಿಯೋಗ ಬಿಜೆಪಿಗೆ ಸರಕಾರ ರಚನೆಗೆ ಆಹ್ವಾನ ನೀಡುವ ಜಂಗ್ ಅವರ ಶಿಫಾರಸನ್ನು ಪರಿಗಣಿಸಬಾರದು. ಹೊಸದಾಗಿ ಚುನಾವಣೆ ನಡೆಸಬೇಕು ಎಂದು ಮನವಿ ಸಲ್ಲಿಸಿದೆ.
 
ದೆಹಲಿಯಲ್ಲಿ ಹೊಸದಾಗಿ ಚುನಾವಣೆ ಕುರಿತು ಚಿಂತನೆ ನಡೆಸುವ ಮೊದಲು ಬಿಜೆಪಿಗೆ ಬಹುಮತ ಸಾಬೀತುಪಡಿಸಲು ಅನುಮತಿ ಕಲ್ಪಿಸುವಂತೆ ಜಂಗ್ ಅವರು ರಾಷ್ಟ್ರಪತಿಗೆ ಸಲ್ಲಿಸಿರುವ ಶಿಫಾರಸಿನಲ್ಲಿ ತಿಳಿಸಿರುವುದು ಪ್ರಜಾಪ್ರಭುತ್ವಕ್ಕೆ ವಿರುದ್ಧ. ಯಾವ ಆಧಾರದಲ್ಲಿ ಈ ಕ್ರಮವನ್ನು ಸಮರ್ಥಿಸಿಕೊಳ್ಳಬಹುದು ಎಂದು ಕೇಜ್ರಿವಾಲ್ ಪ್ರಶ್ನಿಸಿದ್ದಾರೆ.
 
ಬಿಜೆಪಿ ಸರಕಾರ ರಚನೆಗೆ ಮುಂದಾಗುತ್ತಿರುವುದಕ್ಕೆ ಕಾಂಗ್ರೆಸ್ ಸಹ  ಪ್ರತಿರೋಧ ಒಡ್ಡುವುದಾಗಿ ಹೇಳಿದೆ. 
 
ಆಪ್ ನಾಯಕ ಲೆಫ್ಟಿನೆಂಟ್ ಗವರ್ನರ್ ಅವರನ್ನು ಭೇಟಿಯಾಗುವ ಸಂದರ್ಭದಲ್ಲಿ ಅವರ ಪಕ್ಷದ ಕೆಲವು ಶಾಸಕರು ಹಾಜರಿರದಿದ್ದುದರ ಹಿನ್ನೆಲೆ ಏನು ಎಂದು  ಬಿಜೆಪಿ ಪ್ರಶ್ನಿಸಿದೆ. 

Share this Story:

Follow Webdunia kannada