Select Your Language

Notifications

webdunia
webdunia
webdunia
webdunia

ಬಿಜೆಪಿ, ಆರ್‌ಎಸ್ಎಸ್ ಮುಸ್ಲಿಮರ ಏಳಿಗೆಗಾಗಿ ಕಾರ್ಯ ನಿರ್ವಹಿಸುತ್ತವೆ: ಇಂದ್ರೇಶ್ ಕುಮಾರ್

ಬಿಜೆಪಿ, ಆರ್‌ಎಸ್ಎಸ್ ಮುಸ್ಲಿಮರ ಏಳಿಗೆಗಾಗಿ ಕಾರ್ಯ ನಿರ್ವಹಿಸುತ್ತವೆ: ಇಂದ್ರೇಶ್ ಕುಮಾರ್
ನವದೆಹಲಿ , ಸೋಮವಾರ, 8 ಫೆಬ್ರವರಿ 2016 (17:00 IST)
ಭಾರತೀಯ ಜನತಾ ಪಕ್ಷ ಮತ್ತು ರಾಷ್ಟ್ರೀಯ ಸೇವಾ ಸಂಘಗಳು ಇಸ್ಲಾಂ ಸಮುದಾಯದವರ ಶ್ರೇಯೋಭಿವೃದ್ಧಿಗಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಆರ್‌ಎಸ್‌ಎಸ್ ಹಿರಿಯ ನಾಯಕ ಇಂದ್ರೇಶ್ ಕುಮಾರ್ ಹೇಳಿದ್ದಾರೆ. 

 
ಆರ್‌ಎಸ್‌ಎಸ್‌ನ ಮುಸ್ಲಿಂ ರಾಷ್ಟ್ರೀಯ ವೇದಿಕೆಯನ್ನು ಉಲ್ಲೇಖಿಸಿ ಮಾತನಾಡಿದ ಅವರು ಮುಸ್ಲಿಂ ಸಮುದಾಯದ ಉನ್ನತಿಗಾಗಿ ಉದ್ಯೋಗ ಒದಗಿಸಿರುವುದು, ಸಮರ್ಪಕ ಶಿಕ್ಷಣ, ವಸತಿ ಸೇರಿದಂತೆ ಬಿಜೆಪಿ ಮತ್ತು ಸಂಘ ಅನೇಕ ಕಾರ್ಯಗಳನ್ನು ಮಾಡಿದೆ ಎಂದು ಅವರು ತಿಳಿಸಿದ್ದಾರೆ.
 
ಮುಸ್ಲಿಮ್ ಸಮುದಾಯದವರ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಎಮ್ಆರ್‌ಎಮ್ ಸ್ಥಾಪಿಸಲಾಯಿತು. ತನ್ನ ಸ್ಥಾಪನೆಯ ಉದ್ದೇಶದಲ್ಲಿ ಕಾರ್ಯಪ್ರವೃತ್ತವಾಗಿರುವ ಎಮ್ಆರ್‌ಎಮ್ ಮುಸ್ಲಿಮ್ ಮಕ್ಕಳಿಗೆ ಶಿಕ್ಷಣ ನೀಡಿ ಸ್ವಾವಲಂಬಿಗಳನ್ನಾಗಿಸುವ ದಿಶೆಯಲ್ಲಿ ಮುನ್ನಡೆದಿದೆ . ದೇಶದಲ್ಲಿ ಅವರ ಉತ್ತಮ ಭವಿಷ್ಯಕ್ಕಾಗಿ ಇದು ಅನೇಕ ಕಲ್ಯಾಣ ಯೋಜನೆಗಳನ್ನು ಜಾರಿಗೆ ತಂದಿದೆ ಎಂದು ಅವರು ಹೇಳಿದ್ದಾರೆ.
 
ವಿವಿಧ ಪಕ್ಷಗಳು ಬಡತನದಲ್ಲಿರುವ ಮುಸ್ಲಿಮರನ್ನು ಮುಂದಿಟ್ಟುಕೊಂಡು ರಾಜಕೀಯ ಓಲೈಕೆ ಮಾಡುತ್ತಿರುತ್ತವೆ ಎಂದು ಆರೋಪಿಸಿರುವ ಅವರು ಜಮ್ಮು ಮತ್ತು ಕಾಶ್ಮೀರ ಮುಸಲ್ಮಾನ್ ಬಹುಸಂಖ್ಯಾತ ರಾಜ್ಯವಾಗಿದೆ. ಅದರಲ್ಲಿ ಹೆಚ್ಚಿನವರು ಭಾರತ ತಮ್ಮ ವಾಸಕ್ಕೆ ಅತ್ಯಂತ ಉತ್ತಮ ದೇಶ ಎಂದು ನಂಬುತ್ತಾರೆ. ಇತರ ಸಮುದಾಯದವರಂತೆ ತಾವು ಸಹ ಏಳಿಗೆ ಸಾಧಿಸಲು ಸಾಧ್ಯ ಎಂದು ಅವರು ಭಾವಿಸಿದ್ದಾರೆ ಎಂದು ಅಭಿಪ್ರಾಯ ಪಟ್ಟಿದ್ದಾರೆ. 

Share this Story:

Follow Webdunia kannada