Select Your Language

Notifications

webdunia
webdunia
webdunia
webdunia

ದಲಿತ, ಹಿಂದುಳಿದವರ ಮೀಸಲಾತಿ ಕಸಿದುಕೊಳ್ಳುವ ಯತ್ನ: ನಿತೀಶ್ ಕುಮಾರ್

ದಲಿತ, ಹಿಂದುಳಿದವರ ಮೀಸಲಾತಿ ಕಸಿದುಕೊಳ್ಳುವ ಯತ್ನ: ನಿತೀಶ್ ಕುಮಾರ್
ಪಾಟ್ಣಾ , ಸೋಮವಾರ, 29 ಫೆಬ್ರವರಿ 2016 (15:49 IST)
ಬಿಜೆಪಿ ಮತ್ತು ಆರ್‌ಎಸ್ಎಸ್ ದಲಿತ ಮತ್ತು ಹಿಂದುಳಿದವರಿಂದ ಮೀಸಲಾತಿಯನ್ನು ಕಸಿದುಕೊಳ್ಳುವ ಯತ್ನ ನಡೆಸುತ್ತಿದೆ ಎಂದು ಬಿಹಾರ್ ಮುಖ್ಯಮಂತ್ರಿ ನಿತೀಶ್ ಕುಮಾರ್ ಆರೋಪಿಸಿದ್ದಾರೆ. 
 
ರಾಜ್ಯ ರಾಜಧಾನಿ ಪಾಟ್ಣಾದಲ್ಲಿ ಶೀರೋಮಣಿ ರವಿದಾಸರ 639ನೆಯ ಜಯಂತಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಸಿಎಂ, ದಲಿತರನ್ನು ಮತ್ತು ಹಿಂದುಳಿದ ವರ್ಗದವರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಮೀಸಲಾತಿ ಅಗತ್ಯ ಇನ್ನೂ ಇದೆ. ಅವರಿಗೆ ಮೀಸಲಾತಿ ಮುಂದುವರೆಯಲಿದೆ ಎಂದು ನಾವು ನಿಖರವಾಗಿ ಹೇಳಬಹುದು. ಅವರು ಸಮಾಜದಲ್ಲಿ ಗಮನಾರ್ಹ ಮತ್ತು ಅಗತ್ಯ ಸುಧಾರಣೆಗಳನ್ನು  ಸಾಧಿಸಿದ್ದಾರೆಯೇ? ಅವರಿಗೆ ಮೀಸಲಾತಿ ಅಗತ್ಯ ಮತ್ತೂ ಇದೆ ಎಂದು ಹೇಳಿದ್ದಾರೆ.
 
ಆರ್‌ಎಸ್ಎಸ್ ಮತ್ತು ಬಿಜೆಪಿಯನ್ನು ಉಲ್ಲೇಖಿಸಿ ಹೇಳಿದ ಅವರು ಒಂದು ಕಡೆ ಜನರು ಡಾಕ್ಟರ್.ಬಿ.ಆರ್ ಅಂಬೇಡ್ಕರ್ ಮತ್ತು ರವಿದಾಸ್ ಅವರ ಜಯಂತಿಯನ್ನು ಆಚರಿಸುತ್ತಿದ್ದಾರೆ, ಇನ್ನೊಂದು ಕಡೆ ಅವರು ಅಸ್ತಿತ್ವದಲ್ಲಿರುವ ಮೀಸಲಾತಿ ವ್ಯವಸ್ಥೆಯನ್ನು ಪರಿಶೀಲಿಸುವ ಕುರಿತಂತೆ ಮಾತನ್ನಾಡುತ್ತಿದ್ದಾರೆ ಎಂದು ನಿತೀಶ್ ಕುಮಾರ್ ಕಿಡಿಕಾರಿದ್ದಾರೆ. 
 
ಬಿಜೆಪಿ ತನ್ನನ್ನು ತಾನು ಮೀಸಲಾತಿವಾದಿ ಎಂದು ಬಿಂಬಿಸಿ ಕೊಳ್ಳುತ್ತದೆ. ಆದರೆ ಅದರ ಬೇರುಗಳು ಆರ್‌ಎಸ್ಎಸ್‌ನಿಂದ ಬಂದವುಗಳಾಗಿವೆ. ಅದರ ಸಂಚಾಲಕರು ಬಿಹಾರ್ ಚುನಾವಣೆ ಸಂದರ್ಭದಲ್ಲಿ ಮೀಸಲಾತಿ ಪುನರ್ ಪರಿಶೀಲನೆ ಬಗ್ಗೆ ಸಲಹೆ ನೀಡಿದ್ದರು ಎಂದು ಕುಮಾರ್ ಹೇಳಿದ್ದಾರೆ. 
 
ಮೀಸಲಾತಿಯನ್ನು ಪುನರ್ ಪರಿಶೀಲಿಸುವ ನಿರ್ಧಾರಕ್ಕೆ ಬಿಜೆಪಿ ಮತ್ತು ಆರ್‌ಎಸ್ಎಸ್ ಈಗಲೂ ದೃಢವಾಗಿದ್ದಾರೆ. ಅವರು ನಿಮ್ಮ ಮೀಸಲಾತಿಯನ್ನು ಕಸಿದುಕೊಳ್ಳಲು ಬಯಸುತ್ತಿದ್ದಾರೆ ಎಂಬುದನ್ನು ನೀವು ಅರ್ಥ ಮಾಡಿಕೊಳ್ಳಬೇಕು ಆದರೆ ತಮ್ಮ ಈ ಪ್ರಯತ್ನದಲ್ಲಿ ಅವರು ಸಫಲರಾಗುವುದಿಲ್ಲ ಎಂದಿದ್ದಾರೆ ಸಿಎಂ.
 
ಮುಂದಿನ ವರ್ಷದಿಂದ ರವಿದಾಸ್ ಜಯಂತಿಗೆ ಕುಮಾರ್ ಸರ್ಕಾರಿ ರಜೆಯನ್ನು ಘೋಷಿಸಿದ್ದಾರೆ.

Share this Story:

Follow Webdunia kannada