Select Your Language

Notifications

webdunia
webdunia
webdunia
webdunia

1 ಹಿಂದು ಹುಡುಗಿಗೆ ಪ್ರತಿಯಾಗಿ, 100 ಮುಸ್ಲಿಂ ಹುಡುಗಿಯರ ಮತಾಂತರ : ಬಿಜೆಪಿ ಸಂಸದ

1 ಹಿಂದು ಹುಡುಗಿಗೆ ಪ್ರತಿಯಾಗಿ, 100 ಮುಸ್ಲಿಂ ಹುಡುಗಿಯರ ಮತಾಂತರ : ಬಿಜೆಪಿ ಸಂಸದ
ನವದೆಹಲಿ , ಗುರುವಾರ, 28 ಆಗಸ್ಟ್ 2014 (09:38 IST)
ನೀವು ಕೂಡ ಮುಸ್ಲಿಂ ಸಮುದಾಯದ ಹುಡುಗಿಯರನ್ನು  ಮದುವೆಯಾಗಿ ಲವ್ ಜಿಹಾದ್‌  ಕುತಂತ್ರಕ್ಕೆ ತಕ್ಕ ಉತ್ತರ ನೀಡಿ ಎಂದು ತನ್ನ ಬೆಂಬಲಿಗರನ್ನು ಬಿಜೆಪಿ ಸಂಸದ ಆದಿತ್ಯನಾಥ್ ಪ್ರಚೋದಿಸುತ್ತಿರುವ ವಿಡಿಯೋವೊಂದು ಬೆಳಕಿಗೆ ಬಂದಿದ್ದು ಗಂಭೀರ ವಿವಾದವನ್ನು ಹುಟ್ಟಿ ಹಾಕಿದೆ.

ಈ ವಿಡಿಯೋದಲ್ಲಿ ಯೋಗಿ ಆದಿತ್ಯನಾಥ್ ತಮ್ಮ ಬೆಂಬರಿಗರನ್ನುದ್ದೇಶಿಸಿ ಈ ರೀತಿಯಾಗಿ ಹೇಳುತ್ತಿರುವುದು ಕಂಡು ಬಂದಿದೆ, “  ಅವರು ಒಬ್ಬ ಹಿಂದೂ ಹುಡುಗಿಯನ್ನು ಮತಾಂತರಿಸಿದರೆ,  ನಾವು 100 ಮುಸ್ಲಿಂ ಧರ್ಮೀಯ ಯುವತಿಯರ ಧರ್ಮ ಪರಿವರ್ತನೆ ಮಾಡುವ ಕುರಿತು  ನಾವು ನಿರ್ಧರಿಸಿದ್ದೇವೆ". 
 
ಆದರೆ ಈ ವಿಡಿಯೋದಲ್ಲಿ ದಿನಾಂಕ ಮುದ್ರಿತವಾಗಿಲ್ಲ. 
 
ತಮ್ಮ ಹೇಳಿಕೆ ಕುರಿತು ಪ್ರತಿಕ್ರಿಯಿಸಿರುವ ಆದಿತ್ಯನಾಥ್  'ಲವ್ ಜಿಹಾದ್' ಸಂಬಂಧಿಸಿದ ತನ್ನ ಹೇಳಿಕೆ ಅಧಿಕೃತವಲ್ಲ ಎಂದು ಹೇಳಿದ್ದು, ನಿರಾಧಾರದ ಸುದ್ದಿ ತೋರಿಸಲಾಗಿದೆ ಎಂದು ಮಾಧ್ಯಮದ ವಿರುದ್ಧ ಕಿಡಿಕಾರಿದ್ದಾರೆ.
 
ಆದಿತ್ಯನಾಥ್ ಈ ರೀತಿಯ ವಿವಾದಾತ್ಮಕ  ಹೇಳಿಕೆ ನೀಡಿರುವುದು  ಇದೇ ಮೊದಲಲ್ಲ. ಈ ಹಿಂದೆ ಕೋಮುವಾದಿ ಹಿಂಸಾಚಾರ ಮಸೂದೆ ಬಗ್ಗೆ ಸಂಸತ್ತಿನಲ್ಲಿ ಮಾತನಾಡುತ್ತಿದ್ದ ಅವರು, ಪಾಕಿಸ್ತಾನದ ಆಣತಿಯಂತೆ ವಿರೋಧ ಪಕ್ಷ ಕಾಂಗ್ರೆಸ್ ಈ ಕೆಲಸವನ್ನು ಮಾಡುತ್ತಿದೆ ಎಂದು  ಆರೋಪಿಸಿದ್ದರು. 
 
ಪ್ರಸ್ತುತ ಅವರು 2007ರಲ್ಲಿ  ಗೋರಕ್ಪುರದಲ್ಲಿ ಕೋಮು ಪ್ರಚೋದನೆಗೆ ಕಾರಣರಾದ ಆರೋಪವನ್ನೆದುರಿಸುತ್ತಿದ್ದಾರೆ. 

Share this Story:

Follow Webdunia kannada