Select Your Language

Notifications

webdunia
webdunia
webdunia
webdunia

ಮುಸ್ಲಿಮರಿಂದಾಗಿ ವಂದೇ ಮಾತರಂ 3 ಪ್ಯಾರಾ ಕಡಿತ:ಬಿಜೆಪಿ ಶಾಸಕಿ

ಮುಸ್ಲಿಮರಿಂದಾಗಿ ವಂದೇ ಮಾತರಂ 3 ಪ್ಯಾರಾ ಕಡಿತ:ಬಿಜೆಪಿ ಶಾಸಕಿ
ಇಂದೋರ್ , ಶನಿವಾರ, 20 ಸೆಪ್ಟಂಬರ್ 2014 (12:54 IST)
ನವರಾತ್ರಿ ಸಮಯದಲ್ಲಿ ನಡೆಯುವ ಗಾರ್ಬಾ ನೃತ್ಯೋತ್ಸವದಲ್ಲಿ ಮುಸ್ಲಿಮರ ಪ್ರವೇಶಕ್ಕೆ ನಿಷೇಧ ಹೇರಬೇಕು ಎಂದು ಇತ್ತೀಚಿಗೆ ಹೇಳಿಕೆ ನೀಡಿದ್ದ ಮಧ್ಯಪ್ರದೇಶದ ಬಿಜೆಪಿ ಶಾಸಕಿ ಉಷಾ ಠಾಕೂರ್ ಈಗ ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. 

ಮುಸ್ಲಿಮರ ಕಾರಣದಿಂದಾಗಿ ರಾಷ್ಟ್ರೀಯ ಹಾಡು ವಂದೇ ಮಾತರಮ್‌ ಅರ್ಧ ಭಾಗವನ್ನಷ್ಟೇ ಹಾಡಲಾಗುತ್ತಿದೆ ಎಂದು ಆಪಾದಿಸುವುದರ ಮೂಲಕ ಮತ್ತೆ ಅವರು ವಿವಾದದ ಕಿಡಿಯನ್ನು ಹೊತ್ತಿಸಿದ್ದಾರೆ.
 
ಅವರ ಪ್ರಕಾರ ಹಾಡಿನ ಮುಂದುವರೆದ ಭಾಗದಲ್ಲಿ ದುರ್ಗಾಮಾತೆಯ ಹೆಸರು ಕೂಡ ಬಳಕೆಯಾಗಿದೆ. ಇದರಿಂದ ಅಲ್ಪಸಂಖ್ಯಾತ ಬಂಧುಗಳ ಮನಸ್ಸಿಗೆ ದುಃಖವಾಗಬಹುದೆಂಬ ಕಾರಣಕ್ಕೆ 5 ಪ್ಯಾರಾಗಳ ಹಾಡನ್ನು ಕಡಿತಗೊಳಿಸಿ ಕೇವಲ 2 ಪ್ಯಾರಾಗಳನ್ನಷ್ಟೇ ಹಾಡಲಾಗುತ್ತದೆ.
 
ಅವರಿಗೆ ವಂದೇ ಮಾತರಂ ಹಾಡಲು ಆಕ್ಷೇಪಣೆ ಇದೆ ಎಂದಾದರೆ, ತಾಯಿ ದುರ್ಗೆಯ ಪ್ರತಿಮೆಯ ಸುತ್ತಮುತ್ತ ಗಾರ್ಬಾವನ್ನು  ಹೇಗೆ ಮಾಡುತ್ತಾರೆ ಎಂಬುದು ಅವರ ಪ್ರಶ್ನೆ. 
 
ಕೆಲ ದಿನಗಳ ಹಿಂದೆ ಕೂಡ ಮುಸ್ಲಿಮರ ವಿರುದ್ಧ ಹೇಳಿಕೆಯನ್ನು ನೀಡಿದ್ದ ಅವರು ತಮ್ಮ ಕ್ಷೇತ್ರ ಇಂದೋರ್(3)ನಲ್ಲಿ ಅಲ್ಪಸಂಖ್ಯಾತ ಸಮುದಾಯದವರರನ್ನು ನವರಾತ್ರಿ ಸಮಯದಲ್ಲಿ ನಡೆಯುವ ಗಾರ್ಬಾದಲ್ಲಿ ಪ್ರವೇಶಿಸಲು ಅವಕಾಶ ನೀಡಬೇಡಿ ಎಂದು ಪಕ್ಷದ ಕಾರ್ಯಕರ್ತರ ಬಳಿ ಕೇಳಿಕೊಂಡಿದ್ದರು. ಈ ಸಂದರ್ಭವನ್ನು ಮುಸ್ಲಿಮ್ ಯುವಕರು ಲವ್ ಜಿಹಾದ್ ನಡೆಸಲು ಬಳಸಬಹುದೆಂಬುದು ಅವರ ಅಭಿಪ್ರಾಯವಾಗಿತ್ತು. ಅಲ್ಪಸಂಖ್ಯಾತ ಸಮುದಾಯದವರು ಗಾರ್ಬಾದಲ್ಲಿ ಪಾಲ್ಗೊಳ್ಳಲು  ಬಯಸುವುದಾದರೆ ತಮ್ಮ ಪರಿವಾರದ ತಾಯಿ, ಸಹೋದರಿ ಅಥವಾ ಪತ್ನಿಯ ಜತೆ ಬರಲಿ ಎಂದು ಅವರು ಹೇಳಿದ್ದರು.

Share this Story:

Follow Webdunia kannada