Webdunia - Bharat's app for daily news and videos

Install App

ಇಂದಿನಿಂದ ಬಿಜೆಪಿ ಸದಸ್ಯತ್ವ ಅಭಿಯಾನ; 50 ಲಕ್ಷ ಹೊಸ ಸದಸ್ಯತ್ವದ ಗುರಿ

Webdunia
ಶನಿವಾರ, 1 ನವೆಂಬರ್ 2014 (17:34 IST)
ಪ್ರಧಾನಿ ನರೇಂದ್ರ ಮೋದಿಯವರು ಇಂದು ಬಿಜೆಪಿಯ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಲಿದ್ದು, ಪಕ್ಷದ ಬಲವನ್ನು ದಾಖಲೆಯ ಪ್ರಮಾಣದಲ್ಲಿ ಹೆಚ್ಚಿಸಿಕೊಳ್ಳುವ ಗುರಿಯನ್ನು ಇಟ್ಟುಕೊಳ್ಳಲಾಗಿದೆ ಎಂದು ಪಕ್ಷದ ರಾಷ್ಟ್ರಾಧ್ಯಕ್ಷರಾದ ಅಮಿತ್ ಶಾ ಹೇಳಿದ್ದಾರೆ. 

ಮಧ್ಯಪ್ರದೇಶದ ಸ್ಥಳೀಯ ಸಂಸ್ಥೆಗಳ ಚುನಾವಣೆಗಳ ಸಂದರ್ಭದಲ್ಲಿ ನಡೆದ ಕಾರ್ಯಕರ್ತರ ಸಂಕಲ್ಪ ಅಧಿವೇಶನವನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಶಾ "ಬಿಜೆಪಿಯ ಸಂವಿಧಾನದ ಪ್ರಕಾರ, ಪಕ್ಷ ಎರಡು ವರ್ಷಗಳಿಗೊಮ್ಮೆ ಸದಸ್ಯತ್ವವನ್ನು ನವೀಕರಿಸುತ್ತದೆ. ಪಕ್ಷ ಪ್ರಸ್ತುತ ಹೊಂದಿರುವ ಸದಸ್ಯ ಬಲದ ನಾಲ್ಕು ಪಟ್ಟು ಹೆಚ್ಚು ಸದಸ್ಯತ್ವವನ್ನು ಹೊಂದುವ ಗುರಿಯೊಂದಿಗೆ ನರೇಂದ್ರ ಮೋದಿಯವರು ಅಭಿಯಾನಕ್ಕೆ ಆರಂಭ ನೀಡಲಿದ್ದಾರೆ ಎಂದರು.
 
ಎಸ್ಎಂಎಸ್ ಮೂಲಕ ಸದಸ್ಯತ್ವ ನೋಂದಣಿ ಮಾಡಿಕೊಳ್ಳುವ ಹೊಸ ಪ್ರಯತ್ನಕ್ಕೆ ಬಿಜೆಪಿ ಕೈ ಹಾಕಿದೆ.  ಸದಸ್ಯತ್ವ ಬಯಸುವವರು ಟೋಲ್ ಫ್ರಿ ಸಂಖ್ಯೆಯೊಂದಕ್ಕೆ ಮಿಸ್ ಕಾಲ್ ನೀಡಬೇಕು. ನಂತರ ಅವರು ತಮ್ಮ ಸದಸ್ಯತ್ವದ ನಂಬರ್ ಮತ್ತು ಇತರ ಮಾಹಿತಿಯನ್ನು ಎಸ್ಎಂಎಸ್ ಮೂಲಕ ಪಡೆಯಲಿದ್ದಾರೆ ಎಂದು ಶಾ ಹೇಳಿದ್ದಾರೆ. 
 
ಪಕ್ಷದ ಪ್ರಬಲ ಹಿಡಿತ ಹೊಂದಿರುವ ರಾಜ್ಯಗಳಾದ ಮಧ್ಯ ಪ್ರದೇಶ, ರಾಜಸ್ಥಾನ, ಗುಜರಾತ್, ಗೋವಾ ಮತ್ತು  ಇತರ ಕೆಲವು ರಾಜ್ಯಗಳಲ್ಲಿ, ನಾಲ್ಕು ಪಟ್ಟು ಹೆಚ್ಚು  ಸದಸ್ಯತ್ವ ಹೆಚ್ಚಿಸಿಕೊಳ್ಳುವ ಗುರಿ ಮತ್ತು ನಿರೀಕ್ಷೆಗಳಿದ್ದು ಮತ್ತು ಇದನ್ನು ಶಾಶ್ವತವಾಗಿ ಗಟ್ಟಿಗೊಳಿಸುವಲ್ಲಿ ಶ್ರಮಿಸಲಾಗುವುದು ಎಂದು ಶಾ ತಿಳಿಸಿದ್ದಾರೆ. 
 
ಮಧ್ಯಪ್ರದೇಶದಲ್ಲಿ ಎರಡು ಕೋಟಿ ಸದಸ್ಯತ್ವ ಸಂಗ್ರಹಿಸುವ ಗುರಿ ಇಟ್ಟುಕೊಳ್ಳಲಾಗಿದೆ. ಪಕ್ಷ ಪ್ರಬಲವಾಗಿಲ್ಲದ ರಾಜ್ಯಗಳಲ್ಲಿ,  ಸದಸ್ಯತ್ವದ ಅಭಿಯಾನವನ್ನು ದೊಡ್ಡನಗರಗಳಿಂದ ಪಟ್ಟಣಗಳಿಗೆ​​, ಹಳ್ಳಿ ಮತ್ತು ಬೂತ್ ಮಟ್ಟದಲ್ಲಿ ತಲುಪಿಸುವತ್ತ ಪ್ರಯತ್ನಿಸಲಿದ್ದೇವೆ ಎಂದು ಬಿಜೆಪಿ ರಾಷ್ಟ್ರಧ್ಯಕ್ಷ ಅಮಿತ್ ಶಾ ಹೇಳಿದ್ದಾರೆ. 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments