Select Your Language

Notifications

webdunia
webdunia
webdunia
webdunia

ದೇಶವಿರೋಧಿ ಘೋಷಣೆ ಕೂಗಿದ್ರೆ ರುಂಡ ಕತ್ತರಿಸಿ ಹಾಕ್ತೇನೆ: ಬಿಜೆಪಿ ನಾಯಕನ ಗುಡುಗು

ದೇಶವಿರೋಧಿ ಘೋಷಣೆ ಕೂಗಿದ್ರೆ ರುಂಡ ಕತ್ತರಿಸಿ ಹಾಕ್ತೇನೆ: ಬಿಜೆಪಿ ನಾಯಕನ ಗುಡುಗು
ಕೋಲ್ಕತಾ , ಗುರುವಾರ, 3 ಮಾರ್ಚ್ 2016 (15:46 IST)
ದೇಶವಿರೋಧಿ ಘೋಷಣೆಗಳ ವಿವಾದಗಳು ಉಲ್ಘಣವಾಗಿರುವ ಸಂದರ್ಭದಲ್ಲಿಯೇ ಬಿಜೆಪಿ ನಾಯಕರೊಬ್ಬರು, ಒಂದು ವೇಳೆ, ಯಾರಾದರೂ ದೇಶ ವಿರೋಧಿ ಘೋಷಣೆ ಕೂಗಿದಲ್ಲಿ ಆರು ಇಂಚ್‌ಗಳಷ್ಟು ಕತ್ತರಿಸಿಹಾಕುವುದಾಗಿ ಹೇಳಿ ಮತ್ತೊಂದು ವಿವಾದಕ್ಕೆ ಕಾರಣರಾಗಿದ್ದಾರೆ.
 
ಬೀರ್‌ಭೂಮಿ ಜಿಲ್ಲೆಯ ಸಿಯೂರಿ ಪಟ್ಟಣದಲ್ಲಿ ನಡೆದ ಪ್ರತಿಭಟನಾ ಕಾರ್ಯಕ್ರಮದಲ್ಲಿ, ಪಶ್ಚಿಮ ಬಂಗಾಳದ ಬಿಜೆಪಿ ಅಧ್ಯಕ್ಷ ದಿಲೀಪ್ ಘೋಷ್, ದೇಶ ದ್ರೋಹಿ ಘೋಷಣೆಗಳನ್ನು ಕೂಗುವವರ ರುಂಡ ಕತ್ತರಿಸಿಹಾಕುವುದಾಗಿ ಬೆದರಿಕೆಯೊಡ್ಡಿದ್ದಾರೆ.  
 
ವಿದ್ಯಾರ್ಥಿಯೊಬ್ಬ ಸಾಮಾಜಿಕ ಅಂತರ್ಜಾಲ ತಾಣಗಳಲ್ಲಿ ಆಕ್ಷೇಪಾರ್ಹ ಸಂದೇಶವನ್ನು ಪೋಸ್ಟ್ ಮಾಡಿದ ನಂತರ ಎರಡು ಸಮುದಾಯಗಳಲ್ಲಿ ಘರ್ಷಣೆ ಉಂಟಾಗಿತ್ತು. 
 
ಪಾಕಿಸ್ತಾನ ಜಿಂದಾಬಾದ್ ಎಂದು ಯಾರಾದರೂ ಕೂಗಿದಲ್ಲಿ ಅವರ ರುಂಡವನ್ನು ಕತ್ತರಿಸಿ ಹಾಕುತ್ತೇನೆ ಎಂದು ಸಾರ್ವಜನಿಕ ಸಭೆಯಲ್ಲಿ ಬಹಿರಂಗವಾಗಿ ಘೋಷಿಸಿದ್ದಾರೆ.
 
ಕೆಲ ಹಿಂದು ಸಂಘಟನೆಗಳು ಹಿಂದು ಏಕತೆ ಎನ್ನುವ ಕರಪತ್ರಗಳನ್ನು ಹೊರಡಿಸಿರುವುದನ್ನು ಬಿಜೆಪಿ ವಿರೋಧಿಸಿಲ್ಲ. ಹಿಂದುಗಳಿಗೆ ಸ್ವಾಭಿಮಾನವನ್ನು ಕಳೆದುಕೊಳ್ಳದೆ ಶಾಂತಿಯಿಂದ ಬದುಕುವ ಹಕ್ಕಿದೆ ಎಂದು ಬಿಜೆಪಿ ಮುಖಂಡರು ಪ್ರತಿಪಾದಿಸಿದ್ದಾರೆ.

Share this Story:

Follow Webdunia kannada