Select Your Language

Notifications

webdunia
webdunia
webdunia
webdunia

ಆರೆಸ್ಸೆಸ್ ಬೆಂಬಲಿಸಿದ ಸಜ್ಜದ್ ಲೋನ್‌ಗೆ ಬಿಜೆಪಿ ಅಭಯ ಹಸ್ತ

ಆರೆಸ್ಸೆಸ್ ಬೆಂಬಲಿಸಿದ ಸಜ್ಜದ್ ಲೋನ್‌ಗೆ ಬಿಜೆಪಿ ಅಭಯ ಹಸ್ತ
ಕಾಶ್ಮಿರ , ಮಂಗಳವಾರ, 30 ಜೂನ್ 2015 (16:22 IST)
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವಿರುದ್ಧದ ಆರೋಪಗಳಲ್ಲಿ ಸತ್ಯಾಂಶವಿಲ್ಲ ಎನ್ನುವ ಪ್ರತ್ಯೇಕತಾವಾದಿ ನಾಯಕ ಸಚಿವ ಸಜ್ಜದ್ ಲೋನ್ ಅವರ ಹೇಳಿಕೆಯನ್ನು ಬಿಜೆಪಿ ಬೆಂಬಲಿಸಿದೆ.
 
ಆರೆಸ್ಸೆಸ್ ಜಮ್ಮು ಕಾಶ್ಮಿರದಲ್ಲಿ ಮಾಡಿದ ಜನಸೇವೆಯನ್ನು ಕಂಡು ಸಚಿವ ಸಜ್ಜದ್ ಲೋನ್ ಆರೆಸ್ಸೆಸ್ ಪರ ಹೇಳಿಕೆ ನೀಡಿದ್ದರಲ್ಲಿ ಯಾವುದೇ ತಪ್ಪಿಲ್ಲ ಎಂದು ಬಿಜೆಪಿ ವಿಧಾನಸಪರಿಷತ್ ಸದಸ್ಯ ಸುರೀಂದರ್ ಅಂಬರ್ದಾರ್ ಹೇಳಿದ್ದಾರೆ.
 
ಮಾಜಿ ಪ್ರಧಾನಿ ವಿ.ಪಿ.ಸಿಂಗ್ ಸರಕಾರದ ನಂತರ ಪ್ರತಿಯೊಬ್ಬ ರಾಜಕಾರಣಿ ಅಥವಾ ಪ್ರತ್ಯೇಕತವಾದಿ ನಾಯಕರು ಆರೆಸ್ಸೆಸ್ ಕೇಂದ್ರ ಕಚೇರಿ ಝಂಡೇವಾಲನ್‌ಗೆ ಭೇಟಿ ನೀಡುತ್ತಾರೆ ಎಂದು ತಿಳಿಸಿದ್ದಾರೆ.  
 
ಪಶುವೈದ್ಯ ಸಂಗೋಪನಾ ಮತ್ತು ವಿಜ್ಞಾನ ಹಾಗೂ ತಂತ್ರಜ್ಞಾನ ಕ್ಷೇತ್ರದ ಸಚಿವರಾದ ಲೋನ್, ಆರೆಸ್ಸೆಸ್ ಹಲವು ದಶಕಗಳಿಂದ ಕಾಶ್ಮಿರದಲ್ಲಿದೆ. ಒಂದು ವೇಳೆ ಇಲ್ಲಿಯ ಜನತೆ ಆರೆಸ್ಸಸ್ ನಾಯಕರನ್ನು ಸ್ವೀಕರಿಸಿದಲ್ಲಿ ತಪ್ಪೇನು? ಎಂದು ಪ್ರಶ್ನಿಸಿದ್ದಾರೆ. 
 
ಆರೆಸ್ಸೆಸ್ ವಿರುದ್ಧ ಇತರ ರಾಜಕೀಯ ಪಕ್ಷಗಳು ಅಪಪ್ರಚಾರ ಮಾಡುತ್ತಿವೆ. ಇತರ ಪಕ್ಷಗಳ ಆರೋಪಗಳಲ್ಲಿ ಸತ್ಯಾಂಶವಿಲ್ಲ. ಮಾಜಿ ಪ್ರಧಾನಿ ವಾಜಪೇಯಿ ಅವರ ಕಾಲದಿಂದ ಬಿಜೆಪಿಯತ್ತ ನಾನು ಆಕರ್ಷಿತನಾಗಿದ್ದೇನೆ ಎಂದು ತಿಳಿಸಿದ್ದಾರೆ.
 
ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ, ಬಿಜೆಪಿ ಸಚಿವ ಲೋನ್ ವಿರುದ್ಧ ವಾಗ್ದಾಳಿ ನಡೆಸಿ, ಲೋನ್ ಬಿಜೆಪಿ ರವಾಗಿದ್ದರಿಂದ ಕುರಿ ಮತ್ತು ಆಡುಗಳನ್ನು ಉಡುಗೊರೆಯಾಗಿ ನೀಡಲಾಗಿದೆ. ಅವುಗಳನ್ನು ಕಾಯಿವುದಕ್ಕಾಗಿ ಬಿಜೆಪಿ ನೇಮಿಸಿದೆ. ಮುಂಬರುವ ದಿನಗಳಲ್ಲಿ ಆರೆಸ್ಸೆಸ್ ಲೋನ್‌ಗೆ ಸಹಾಯ ನೀಡಲಿದೆ ಎಂದು ಭಾವಿಸುವುದಾಗಿ ಟ್ವೀಟ್ ಮಾಡಿದ್ದರು. 
 

Share this Story:

Follow Webdunia kannada