Webdunia - Bharat's app for daily news and videos

Install App

ನೆಹರು ಉತ್ತರಾಧಿಕಾರಿಗಳು ದೇಶವನ್ನು ಹಾಳುಗೆಡವಿದ್ದಾರೆ: ರಾಜನಾಥ್ ಸಿಂಗ್

Webdunia
ಸೋಮವಾರ, 5 ಮೇ 2014 (11:19 IST)
ಸ್ವಾತಂತ್ರ್ಯಾ ಪಡೆದ ನಂತರ ಅಧಿಕಾರ ನಡೆಸಿದ  ಜವಾಹರಲಾಲ್ ನೆಹರೂ ಆಡಳಿತವನ್ನು ಶ್ಲಾಘಿಸಿದ ಬಿಜೆಪಿ ಅಧ್ಯಕ್ಷ ರಾಜನಾಥ್ ಪಂಡಿತ್ ನೆಹರು ಉತ್ತರಾಧಿಕಾರಿಗಳು ದೇಶವನ್ನು ಹಾಳುಗೆಡವಿದ್ದಾರೆ ಎಂದು ಕಿಡಿಕಾರಿದ್ದಾರೆ.
 
ಹಿಮಾಚಲ ಪ್ರದೇಶದ ನಹಾನಾದಲ್ಲಿ ಚುನಾವಣಾ ಪ್ರಚಾರ ಸಭೆಯನ್ನು ನಡೆಸುತ್ತ ಮಾತನಾಡುತ್ತಿದ್ದ ಸಿಂಗ್  ಸ್ವತಂತ್ರ್ಯಾ ನಂತರ "ನೆಹರು ದೇಶವನ್ನು ಕಟ್ಟುವ ಮಾತನಾಡುತ್ತಿದ್ದರು ಮತ್ತು ಅವರ ಪರಿವಾರದವರು ದೇಶವನ್ನು ಉತ್ತಮಗೊಳಿಸುವ ಮಾತನಾಡುತ್ತಿದ್ದಾರೆ". 
 
"ಕಾಂಗ್ರೆಸ್ ಮತಬ್ಯಾಂಕ್ ರಾಜಕಾರಣ ಮಾಡುತ್ತಿದೆ. ದುರಾಡಳಿತ ನಡೆಸಿದ ಯುಪಿಎ  ಸರ್ಕಾರದ ಹಗರಣಗಳು ಒಂದೊಂದಾಗಿ ಬಹಿರಂಗವಾಗುತ್ತಿವೆ. ಪ್ರಧಾನಿ ಮನಮೋಹನ್ ಸಿಂಗ್ ಮಾಧ್ಯಮ ಸಲಹೆಗಾರ ಬರೆದ ಪುಸ್ತಕ "ಆಕಸ್ಮಿಕ ಪ್ರಧಾನಿ" ಬಗ್ಗೆ ದೇಶದ ಜನರು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಪ್ರತಿಕ್ರಿಯೆ ಬಯಸುತ್ತಿದ್ದಾರೆ. ಕಾಂಗ್ರೆಸ್ ಯಾವಾಗಲೂ ಜನರನ್ನು ವಂಚಿಸಿದೆ. ಆದ್ದರಿಂದ ರಾಜಕಾರಣಿಗಳ ಮೇಲೆ ಸಾಮಾನ್ಯ ಜನರು ನಂಬಿಕೆ ಕಡಿಮೆಯಾಗುತ್ತಿದೆ" ಎಂದು ಸಿಂಗ್ ಹೇಳಿದರು.
 
"ಭಾರತದಲ್ಲಿ ನೈಸರ್ಗಿಕ ಸಂಪನ್ಮೂಲಗಳಿಗೆ ಯಾವುದೇ ಕೊರತೆಯಿಲ್ಲ.  ಆದರೆ ಕಾಂಗ್ರೆಸ್ ಇದನ್ನು ಉಪಯೋಗಿಸಿಕೊಂಡಿಲ್ಲ. ಏಕೆಂದರೆ ಜನರು ಬಡತನ ಮತ್ತು ನಿರುದ್ಯೋಗದ ಜತೆ ಬದುಕ ಬೇಕೆಂಬುದು ಕಾಂಗ್ರೆಸ್ ಉದ್ದೇಶವಾಗಿತ್ತು" ಎಂದು ಸಿಂಗ್ ಗಂಭೀರವಾಗಿ ಆರೋಪಿಸಿದ್ದಾರೆ. 

"ಸ್ವಾತಂತ್ರ್ಯ ಬಂದ 67 ವರ್ಷಗಳಲ್ಲಿ,  55 ವರ್ಷಗಳ ಕಾಲ ಕಾಂಗ್ರೆಸ್ ಆಳ್ವಿಕೆ ನಡೆಸಿದೆ. ಆದರೆ ದೇಶಕ್ಕೆ ಇನ್ನೂ ಆಹಾರ ಭದ್ರತಾ ಮಸೂದೆಯ ಅಗತ್ಯವಿದೆ. ಇದು ಕಾಂಗ್ರೆಸ್ ಸಮಾಜದ ದುರ್ಬಲ ವರ್ಗಗಳಿಗಾಗಿ ಏನನ್ನೂ ಮಾಡಿಲ್ಲ ಎಂಬುದನ್ನು ಸೂಚಿಸುತ್ತದೆ" ಎಂದು ಸಿಂಗ್ ಅಭಿಪ್ರಾಯ ಪಟ್ಟಿದ್ದಾರೆ.
 
ವೀರೇಂದ್ರ ಕಶ್ಯಪ್ ಪರ ಮತ ಚಲಾಯಿಸುವಂತೆ ಜನರಲ್ಲಿ ಮನವಿ ಮಾಡಿದ ,ರಾಜನಾಥ್ ಸಿಂಗ್ ದೇಶದಲ್ಲಿನ ಗುಡ್ಡಗಾಡು ರಾಜ್ಯಗಳ ಪ್ರಗತಿಗಾಗಿ ಬಿಜೆಪಿ ಬದ್ಧವಾಗಿದೆ. ಶಿಮ್ಲಾದಲ್ಲಿ ಪಕ್ಷ ಗೆಲುವು ಸಾಧಿಸಿದರೆ ಮತ್ತೆ ರಾಜ್ಯಕ್ಕೆ ಭೇಟಿ ನೀಡುವುದಾಗಿ ಭರವಸೆ ನೀಡಿದರು.
 
ಬೃಹತ್ ಸಭಿಕರನ್ನು ಉದ್ದೇಶಿಸಿ ಮಾತನಾಡಿದ "ರಾಜಕಾರಣಿಗಳು ಸುಳ್ಳು ಭರವಸೆಗಳನ್ನು ನೀಡಬಾರದು.ಸೋನಿಯಾ ಗಾಂಧಿ ಮತ್ತು ಮನಮೋಹನ್ ಸಿಂಗ್ ಕಳೆದ 10 ವರ್ಷಗಳಿಂದ ಅದನ್ನೇ ಮಾಡುತ್ತಿದ್ದಾರೆ" ಎಂದು ಸಿಂಗ್ ಛೇಡಿಸಿದರು. 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments