Select Your Language

Notifications

webdunia
webdunia
webdunia
webdunia

ಯುಪಿಎ ಅಧಿಕಾರದಲ್ಲಿದ್ದಾಗ ಯಾಕೆ ಪ್ರಶಸ್ತಿ ಮರಳಿಸಿಲ್ಲ: ಸಾಹಿತಿಗಳ ವಿರುದ್ಧ ಬಿಜೆಪಿ ಕಿಡಿ

ಯುಪಿಎ ಅಧಿಕಾರದಲ್ಲಿದ್ದಾಗ ಯಾಕೆ ಪ್ರಶಸ್ತಿ ಮರಳಿಸಿಲ್ಲ: ಸಾಹಿತಿಗಳ ವಿರುದ್ಧ ಬಿಜೆಪಿ ಕಿಡಿ
ನವದೆಹಲಿ , ಮಂಗಳವಾರ, 13 ಅಕ್ಟೋಬರ್ 2015 (20:02 IST)
ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ ಕಳೆದ 10 ವರ್ಷಗಳವರೆಗೆ ಅಧಿಕಾರದಲ್ಲಿದ್ದಾಗ ದೇಶದ ಖ್ಯಾತ ಸಾಹಿತಿಗಳು ಸರಕಾರ ನೀಡಿದ್ದ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳನ್ನು ಯಾಕೆ ವಾಪಸ್ ಮಾಡಲಿಲ್ಲ ಎಂದು ಬಿಜೆಪಿ ಮುಖಂಡ ವಿಜಯ್ ಗೋಯಲ್ ಪ್ರಶ್ನಿಸಿದ್ದಾರೆ.  
 
ಸಾಹಿತಿಗಳು ತಮ್ಮ ಪೆನ್ನುಗಳ ಬಗ್ಗೆ ಕಳವಳ ಹೊಂದಿರಬೇಕು. ಇಲ್ಲವಾದಲ್ಲಿ ಸಾಹಿತಿಗಳಿಗೆ ಪ್ರಶಸ್ತಿ ನೀಡುವುದನ್ನು ನಿಲ್ಲಿಸಬೇಕಾಗುತ್ತದೆ ಎಂದು ಗುಡುಗಿದ್ದಾರೆ.
 
ಒಂದು ವೇಳೆ ಸಾಹಿತಿಗಳಿಗೆ ತಾವು ಪಡೆದ ಪ್ರಶಸ್ತಿಗಳನ್ನು ವಾಪಸ್ ಕೊಡಬೇಕು ಎಂದು ಬಯಸಿದಲ್ಲಿ ಅವರಿಗೆ ಪ್ರಶಸ್ತಿ ನೀಡಿದ ಸರಕಾರ ಅಧಿಕಾರದಲ್ಲಿದ್ದಾಗಲೇ ಕೊಡಬೇಕು. ಪ್ರಶಸ್ತಿಯ ಜೊತೆಗೆ ನೀಡಲಾಗುವ ಪರಿಗಣನೆಯನ್ನು ಸಾಹಿತಿಗಳು ಹೇಗೆ ವಾಪಸ್ ಕೊಡಲು ಸಾಧ್ಯ ಎಂದಿದ್ದಾರೆ.
  
ಕರ್ನಾಟಕದ ಹಿರಿಯ ಸಾಹಿತಿ, ಸಂಶೋಧಕ ಎಂ.ಎಂ.ಕಲಬುರ್ಗಿಯವರ ಹತ್ಯೆ ಕುರಿತಂತೆ ಸರಕಾರದ ಮೌನ ಪ್ರಶ್ನಿಸಿ ನೂರಾರು ಖ್ಯಾತ ಸಾಹಿತಿಗಳು ಸರಕಾರ ತಮಗೆ ನೀಡಿದ ಪ್ರಶಸ್ತಿಗಳನ್ನು ವಾಪಸ್ ಮರಳಿಸಿದ್ದಾರೆ.   

Share this Story:

Follow Webdunia kannada