Select Your Language

Notifications

webdunia
webdunia
webdunia
webdunia

ವಿಲಕ್ಷಣ ವಿವಾಹ: ಪ್ರಾಣಿಗಳೇ ವಿಶೇಷ ಅತಿಥಿಗಳು, ನಗರವನ್ನೆಲ್ಲಾ ಸ್ವಚ್ಛಗೊಳಿಸಿದ ವಧುವರರು

ವಿಲಕ್ಷಣ ವಿವಾಹ: ಪ್ರಾಣಿಗಳೇ ವಿಶೇಷ ಅತಿಥಿಗಳು, ನಗರವನ್ನೆಲ್ಲಾ ಸ್ವಚ್ಛಗೊಳಿಸಿದ ವಧುವರರು
ಭಿವಾನಿ , ಸೋಮವಾರ, 8 ಡಿಸೆಂಬರ್ 2014 (15:37 IST)
ಹರಿಯಾಣಾದ ಹಿಸಾರ್ ಜಿಲ್ಲೆಯಲ್ಲೊಂದು ಅನನ್ಯ ಮದುವೆ ನಡೆಯಿತು. ಸನ್ನಿ ಪಾನು ಮತ್ತು ಕವಿತಾ ಇಬ್ಬರು ಪವಿತ್ರ ಬಂಧನಕ್ಕೆ ಕಾಲಿರಿಸಿದರು. ಅವರ ಮದುವೆಯ ಆರತಕ್ಷತೆ ನಡೆದದ್ದು ಹೋಟೆಲ್‌ನಲ್ಲಿ ಅಲ್ಲ.. ಬದಲಾಗಿ ಹಸುವಿನ ಡೈರಿಯಲ್ಲಿ...

ವಿಶೇಷ ಮತ್ತು ಆಶ್ಚರ್ಯಕರವಾದುದೆಂದರೆ, ಬೆರಳಣಿಕೆಷ್ಟು ಜನರನ್ನು ಹೊರತು ಪಡಿಸಿದರೆ ವಿಶೇಷ ಅತಿಥಿಗಳಾಗಿ ಮದುವೆಯಲ್ಲಿ ಹಾಜರಿದ್ದವರು 2,000 ಹಸುಗಳು ಮತ್ತು ಇತರೆ ಪ್ರಾಣಿಗಳು. ಯಜ್ಞದ ನಂತರ ಆಕಳುಗಳ ಪೂಜೆ ನಡೆಯಿತು. ನವ ದಂಪತಿಗಳಾದ ಸನ್ನಿ ಮತ್ತು ಕವಿತಾ ಬೆಲ್ಲದ ಅಕ್ಕಿಯನ್ನು ಹಸುಗಳಿಗೆ ತಿನ್ನಿಸಿದರು ಮತ್ತು ಬೆಲ್ಲ, ಬಾಳೆಹಣ್ಣು, ಕಡಲೆ ಕಾಳು, ಜೋಳ ಮತ್ತು ಒಣ ಗಂಜಿಯನ್ನು ಕೋತಿಗಳು, ನಾಯಿಗಳು, ಹಕ್ಕಿಗಳು, ಮತ್ತು ಮೀನುಗಳಿಗೆ ತಿನ್ನಿಸಿದರು. 
 
ತದನಂತರ ನೆರೆದಿದ್ದ ಜನರಿಗೆ ಪ್ರಸಾದವನ್ನು ಹಂಚಲಾಯಿತು ಮತ್ತು ನವ ವಧುವರರು ನಗರವನ್ನು ಸ್ವಚ್ಛಗೊಳಿಸುವ ವಿನೂತನ ಕಾರ್ಯವನ್ನು ಕೈಗೈತ್ತಿಕೊಂಡರು. ಅವರಿಬ್ಬರೂ ಹಿಸಾರ್‌ನಲ್ಲಿರುವ ರಾಜ್ಯ ಪಾಲಿಟೆಕ್ನಿಕ್‌ನಲ್ಲಿ ವಕ್ತಾರರಾಗಿ ಕಾರ್ಯವಿರ್ವಹಿಸುತ್ತಾರೆ.  ಸಂಪೂರ್ಣ್ ಸಿಂಗ್ ಅವರ ಕುಟುಂಬ ವರದಕ್ಷಿಣೆ ಮತ್ತು ದುಂದುವೆಚ್ಚದಂತಹ ಅನಿಷ್ಠ ಪದ್ಧತಿಗಳ ವಿರುದ್ಧ ಒಂದು ಉತ್ತಮ ಉದಾಹರಣೆಯನ್ನು ಪ್ರದರ್ಶಿಸಿತು. ತನ್ನ ಮಗನ ಮದುವೆ ಸಂದರ್ಭದಲ್ಲಿ ನಗರದ ಕಲ್ಯಾಣಕ್ಕೆ ತಮ್ಮಿಂದಾದಷ್ಟನ್ನು ಮಾಡಬೇಕೆಂದು ಚಿಂತಿಸಿದ ಅವರು ನಗರವನ್ನು ಸ್ವಚ್ಛಗೊಳಿಸುವಂತೆ ಮಗ- ಸೊಸೆಯನ್ನು ಪ್ರೇರೇಪಿಸಿದರು. 
 
ಮದುವೆಯಲ್ಲಿ ಹಣ, ಬಂಗಾರ, ಬಟ್ಟೆಗಳನ್ನು ಕೊಡುವ ಬದಲಿಗೆ, ವರನ ಕಡೆಯವರು 102 ಕಸದ ತೊಟ್ಟಿಗಳು, 125 ಕೆಜಿ ಜೋಳ, ಧಾನ್ಯಗಳು ಮತ್ತು ದನಗಳಿಗಾಗಿ ಹಸಿರು ಮೇವನ್ನು ಖರೀದಿಸಿದರು. ನೆರೆದ ಜನರು ಈ ಉದಾತ್ತ ಕೊಡುಗೆಗಳನ್ನು ಶ್ಲಾಘಿಸಿದರು ಮತ್ತು ಈ ವಿನೂತನ ಯತ್ನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
 
ನವ ದಂಪತಿಗಳು  ವ್ಯಾಕ್ಯೂಮ್ ಕ್ಲೀನರ್ ಬಳಸಿ ವಾಲ್ಮೀಕಿ ಬಸ್ತಿ ಪ್ರದೇಶ ಮತ್ತು ಸರ್ಕ್ಯುಲರ್ ರೋಡ್‌ನ್ನು 2 ಗಂಟೆಯವರೆಗೆ ಸ್ವಚ್ಛಗೊಳಿಸಿದರು. ಈ ಬೃಹತ್ ಯಂತ್ರಗಳಿಂದ  ರಸ್ತೆಗಳನ್ನು ಸ್ವಚ್ಛಗೊಳಿಸಲು  14 ಲಕ್ಷ ರೂಪಾಯಿ ಖರ್ಚಾಯಿತು. ಒಂದು ಕ್ಲೀನರ್‌ನ್ನು ವಧುವಿನ ತಂದೆ ಕೊಂಡುಕೊಂಡರೆ, ಇನ್ನೊಂದನ್ನು ವಧುವಿನ ಅತ್ತೆ ಮಾವಂದಿರು ಕೊಡುಗೆಯಾಗಿ ನೀಡಿದ್ದರು. 1 ತಿಂಗಳುಗಳ ಕಾಲ ನಗರವನ್ನು ಸ್ವಚ್ಛಗೊಳಿಸುವ ಯೋಜನೆ ಹಾಕಿಕೊಂಡಿರುವ ವಧುವರರು ತದನಂತರ, ಎರಡೂ ಯಂತ್ರಗಳನ್ನು ಪುರಸಭೆಗೆ ದಾನ ಮಾಡಲಿದ್ದಾರೆ.

Share this Story:

Follow Webdunia kannada