Select Your Language

Notifications

webdunia
webdunia
webdunia
webdunia

ಮೋದಿ ನಾಮಪತ್ರಕ್ಕೆ ಅನುಮೋದನೆ ನೀಡಲು ನಿರಾಕರಿಸಿದ ಬಿಸ್ಮಿಲ್ಲಾ ಖಾನ್ ಪುತ್ರ

ಮೋದಿ ನಾಮಪತ್ರಕ್ಕೆ ಅನುಮೋದನೆ ನೀಡಲು ನಿರಾಕರಿಸಿದ  ಬಿಸ್ಮಿಲ್ಲಾ ಖಾನ್ ಪುತ್ರ
ವಾರಣಾಸಿ , ಸೋಮವಾರ, 21 ಏಪ್ರಿಲ್ 2014 (19:26 IST)
ಬಿಜೆಪಿಯ ಬಿಜೆಪಿ ಪ್ರಧಾನಮಂತ್ರಿ ಅಭ್ಯರ್ಥಿ ಮತ್ತು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಗುರುವಾರ ವಾರಣಾಸಿಯಲ್ಲಿ ನಾಮಪತ್ರವನ್ನು ಸಲ್ಲಿಸಲಿದ್ದು ನರೇಂದ್ರ ಮೋದಿ ಅವರ ನಾಮಪತ್ರ ಅನುಮೋದನೆಗೆ ಬಿಜೆಪಿ ಕೆಲವು ಜನರ ಹೆಸರುಗಳ ಪಟ್ಟಿಯನ್ನು ಸಿದ್ಧಪಡಿಸಿದೆ.
 
ಅವುಗಳಲ್ಲಿ  ಶೆಹನಾಯಿ ಮಾಂತ್ರಿಕ ಉಸ್ತಾದ್ ಬಿಸ್ಮಿಲ್ಲಾ ಖಾನ್ ಮಗ ಜಮೀನ್ ಹುಸೇನ್ ಖಾನ್ ಅವರ ಹೆಸರು ಕೂಡ ಸೇರಿದೆ. 
 
ಮೋದಿ ಹೆಸರನ್ನು ಪ್ರಸ್ತಾಪಿಸಲು ಬಿಜೆಪಿ ಕಾರ್ಯಕರ್ತರು ಖಾನ್‌ರವರನ್ನು  ಕೇಳಿಕೊಂಡರು. ಆದರೆ, ಅವರು ಅದನ್ನು ನಿರಾಕರಿಸಿದ್ದಾರೆ ಎಂದು ವರದಿಯಾಗಿದೆ. 
"ಮೋದಿಗೆ ನನ್ನ ಬೆಂಬಲವಿದೆ. ಆದರೆ ನಾನು ರಾಜಕೀಯದಿಂದ ದೂರ ಉಳಿಯಲು ಬಯಸುತ್ತೇನೆ.  ನನ್ನ ತಂದೆ ಅರಾಜಕೀಯ ವ್ಯಕ್ತಿ ಮತ್ತು ಅವರೆಂದಿಗೂ ಯಾವುದೇ ರಾಜಕಾರಣಿಯ ಹೆಸರನ್ನು ಪ್ರಸ್ತಾಪಿಸಿಲ್ಲ" ಎಂದು ಅವರು ಹೇಳಿದರು.
 
ಈ ಪಟ್ಟಿ ಬನಾರಸ್ ಹಿಂದೂ ವಿಶ್ವವಿದ್ಯಾನಿಲಯದ ಸ್ಥಾಪಕರಾದ ಪಂಡಿತ್ ಮದನ್ ಮೋಹನ್ ಮಾಳವೀಯ, ಮತ್ತು ಹಿಂದೂಸ್ತಾನಿ ಶಾಸ್ತ್ರೀಯ ಗಾಯಕರಾದ  ಚನ್ನುಲಾಲ್ ಮಿಶ್ರಾ ಕುಟುಂಬ ಸದಸ್ಯರನ್ನು ಕೂಡ ಒಳಗೊಂಡಿದೆ.
 
ಭಾರತವನ್ನು ಮುಂದಕ್ಕೆ ತರಲು  ಮೊದಿ ನಂಬಿಕೆಗೆ ಅರ್ಹ ವ್ಯಕ್ತಿ ಎನ್ನುವುದು ನನ್ನ ಭಾವನೆ ಎಂದು ಪಂಡಿತ್ ಮದನ್ ಮೋಹನ್ ಮಾಲವೀಯ ಮೊಮ್ಮಗ, ಜಸ್ಟಿಸ್ ಗಿರಿಧರ್ ಮಾಳವೀಯ ಹೇಳಿದ್ದಾರೆ. 
 
ಪಟ್ಟಿಯಲ್ಲಿ ಚಹಾ ಮಾರಾಟಗಾರ ಪಪ್ಪು ಅವರ ಹೆಸರು ಕೂಡ ಇದ್ದು ಮೋದಿ ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ಅನುಮೋದನೆ ನೀಡಲು ಒಪ್ಪಿಕೊಂಡಿದ್ದಾರೆ. ಪಟ್ಟಿಯಲ್ಲಿ ಒಬ್ಬ ಅಂಬಿಗ ಮತ್ತು ಎರಡು ನೇಕಾರರ ಹೆಸರು ಕೂಡ ಇದೆ ಎಂದು ಬಿಜೆಪಿ ಪಕ್ಷದ ವಕ್ತಾರರು ತಿಳಿಸಿದ್ದಾರೆ.
 

Share this Story:

Follow Webdunia kannada