Select Your Language

Notifications

webdunia
webdunia
webdunia
webdunia

ಬಕ್ರಿದ್ ಹಬ್ಬ: ಬಿಹಾರ್ ಮೇಕೆ ಮಾರಾಟಗಾರರಿಂದ ಓಎಲ್‌ಎಕ್ಸ್‌‍ನಲ್ಲಿ ಜಾಹೀರಾತು

ಬಕ್ರಿದ್ ಹಬ್ಬ: ಬಿಹಾರ್ ಮೇಕೆ ಮಾರಾಟಗಾರರಿಂದ ಓಎಲ್‌ಎಕ್ಸ್‌‍ನಲ್ಲಿ ಜಾಹೀರಾತು
ಭಾಗಲ್ಪುರ್ , ಬುಧವಾರ, 24 ಸೆಪ್ಟಂಬರ್ 2014 (13:07 IST)
ಆನ್‌ಲೈನ್ ವಹಿವಾಟಿನಲ್ಲಿ ಮುಂಚೂಣಿಯಲ್ಲಿರುವ ಓಎಲ್‌ಎಕ್ಸ್‌‍ನಲ್ಲಿ ಇಲ್ಲಿಯವರೆಗೆ ವಸ್ತುಗಳ ಮಾರಾಟದ ಬಗ್ಗೆ ಜಾಹೀರಾತು ಕಂಗೊಳಿಸುತ್ತಿದ್ದವು. ಇದೀಗ ಪ್ರಾಣಿಗಳ ಜಾಹೀರಾತುಗಳು ರಾರಾಜಿಸುತ್ತಿವೆ.

ಅಚ್ಚರಿ ಪಡಬೇಡಿ, ಇದೀಗ ಮೇಕೆಗಳ ಮಾರಾಟಗಾರರು ಬಕ್ರಿ ಹಬ್ಬದಲ್ಲಿ ಮೇಕೆಗಳನ್ನು ಮಾರಾಟ ಮಾಡಲು ತಮ್ಮ ಮೇಕೆಗಳ ಜಾಹೀರಾತಿನೊಂದಿಗೆ ಆನ್‌ಲೈನ್‌ ವಹಿವಾಟಿಗೆ ಶರಣಾಗಿದ್ದಾರೆ. 
 
ಭಾಗಲ್ಪುರ್, ಸಮಷ್ಠಿಪುರ, ಸಿವಾನ್, ಧರ್ಭಂಗಾ, ಆರಾ ಮತ್ತು ಮುಜಫರ್‌ಪುರ್ ಜಿಲ್ಲೆಗಳಲ್ಲಿರುವ ಮೇಕೆ ಮಾರಾಟಗಾರರು ತಮ್ಮ ಮೇಕೆಗಳ ಭಾವಚಿತ್ರಗಳನ್ನು ಒಎಲ್‌ಎಕ್ಸ್‌‌ನಲ್ಲಿ ಪೋಸ್ಟ್ ಮಾಡಿದ್ದಾರೆ.
 
ಭಾಗಲ್ಪುರ್‌ನ ಮೇಕೆ ಮಾರಾಟಗಾರನಾದ ಹೀರಾ ಖಾನ್, ತಮ್ಮ ಮೇಕೆಯ ಹೊಟ್ಟೆಯ ಎಡಭಾಗದಲ್ಲಿ ನೈಸರ್ಗಿಕವಾಗಿ ಬಂದ ಅಲ್ಲಾಹ ಸಂಕೇತವಿರುವ ಚಿತ್ರವನ್ನು ಪೋಸ್ಟ್ ಮಾಡಿದ್ದಾರೆ. ಆದರೆ, ಪವಿತ್ರ ಮೇಕೆಯ ದರವನ್ನು  ನಿಗದಿಪಡಿಸಿಲ್ಲ.  
 

Share this Story:

Follow Webdunia kannada