Webdunia - Bharat's app for daily news and videos

Install App

ಬಿಹಾರ್ ಮೇವು ಹಗರಣದ ಕಡತ ನಾಪತ್ತೆ

Webdunia
ಬುಧವಾರ, 8 ಜೂನ್ 2016 (13:02 IST)
900ಕೋಟಿ ರೂಪಾಯಿ ಅಕ್ರಮದ ಮೇವು ಹಗರಣದ ಕಡತಗಳು ಬಿಹಾರ ಪಶುಸಂಗೋಪನೆ ಇಲಾಖೆಯಿಂದ ನಾಪತ್ತೆಯಾಗಿದ್ದು, ಪಾಟ್ಣಾ ಸಚಿವಾಲಯ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ. 
 
ಆರ್‌ಜೆಡಿ ವರಿಷ್ಠ ಮತ್ತು ಬಿಹಾರ್ ಮಾಜಿ ಸಿಎಂ ಲಾಲು ಪ್ರಸಾದ್ ಯಾದವ್ ಈ ಮೇವು ಹಗರಣಕ್ಕೆ ಸಂಬಂಧಿಸಿದ ಒಂದು ಪ್ರಕರಣದಲ್ಲಿ 
 
ಅಪರಾಧಿಯಾಗಿದ್ದು ಅವರಿಗೆ ಒಂದು ವರ್ಷ ಜೈಲು ಶಿಕ್ಷೆಯನ್ನು ಸಹ ವಿಧಿಸಲಾಗಿತ್ತು. ಯಾವುದೇ ಚುನಾವಣೆಗೆ ಸ್ಪರ್ಧಿಸಲು ಸಹ 
ಅವರನ್ನು ಅನರ್ಹಗೊಳಿಸಲಾಗಿದೆ. 
 
ಕಡತಗಳು ಕಣ್ಮರೆಯಾಗಲು ಬಿಹಾರ್ ಸಿಎಂ ನಿತೀಶ್ ಕುಮಾರ್ ಕಾರಣ ಎಂದು ಭಾರತೀಯ ಜನತಾ ಪಕ್ಷ ಆರೋಪಿಸುತ್ತಿದೆ. 
 
ಹೇಗೆ ಮತ್ತು ಯಾಕೆ ಲಾಲು ಪ್ರಸಾದ್ ಯಾದವರನ್ನು ರಕ್ಷಿಸುತ್ತಿದ್ದಾರೆ ಎನ್ನುವುದನ್ನು ಸಿಎಂ ನಿತೀಶ್ ಕುಮಾರ್ ಅವರೇ ಹೇಳಬೇಕು. 
 
ಕಡತಗಳ ನಾಪತ್ತೆ ಬಿಹಾರ್ ಭವಿಷ್ಯದ ಮೇಲೆ ಪರಿಣಾಮ ಬೀರಲಿದೆ ಎಂದು ಬಂಕಿಪುರ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಬಿಜೆಪಿ ಶಾಸಕ ನಿತಿನ್ ನವೀನ್ ತಿಳಿಸಿದ್ದಾರೆ. 
 
ನಿತೀಶ್ ಅವರ ಜೆಡಿ(ಯು) ಲಾಲು ಅವರ ಆರ್‌ಜೆಡಿ ಮತ್ತು ಕಾಂಗ್ರೆಸ್ ಮೈತ್ರಿಯೊಂದಿಗೆ ಬಿಹಾರದಲ್ಲಿ ಸರ್ಕಾರವನ್ನು ನಡೆಸುತ್ತಿದೆ. 

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Indus Water treaty: ಸಿಂಧೂ ನದಿ ಒಪ್ಪಂದ ಎಂದರೇನು, ಇದನ್ನ ಮಾಡಿದವರು ಯಾರು: ಪಾಕಿಸ್ತಾನಕ್ಕೆ ಆಗುವ ನಷ್ಟವೇನು

Pahalgram: ಸಕಲ ಸರ್ಕಾರಿ ಗೌರವಗಳೊಂದಿಗೆ ಮಂಜುನಾಥ್‌, ಭರತ್ ಭೂಷಣ್‌ಗೆ ಅಂತ್ಯಕ್ರಿಯೆ

Pehlagam ಪ್ರವಾಸಿಗರ ರಕ್ಷಣೆಗೆ ಹೋಗಿ ಜೀವ ಕಳೆದುಕೊಂಡ ಮುಸ್ಲಿಂ ಯುವಕ, ತಂದೆಯ ಮಾತು ಕೇಳಿದ್ರೆ ಮೈ ರೋಮಾಂಚನ

‌Pahalgam Terror Attack:ಸರ್ವಪಕ್ಷ ಸಭೆಗೂ ಮುನ್ನಾ ರಾಷ್ಟ್ರಪತಿಯನ್ನು ಭೇಟಿಯಾದ ಅಮಿತ್ ಶಾ

Pahalgam Terror Attack: ವಾಘಾ ಅಟ್ಟಾರಿ ಗಡಿ ಬಂದ್‌ನಿಂದ ಪಾಕ್‌ನ ಮೇಲೆ ಬೀರುವ ಪರಿಣಾಮಗಳು

ಮುಂದಿನ ಸುದ್ದಿ
Show comments