Select Your Language

Notifications

webdunia
webdunia
webdunia
webdunia

ಮತ್ತೆ ನರೇಂದ್ರ ಮೋದಿ ಸರಕಾರವನ್ನು ಹೊಗಳಿದ ಬಿಹಾರ್ ಸಿಎಂ

ಮತ್ತೆ ನರೇಂದ್ರ ಮೋದಿ ಸರಕಾರವನ್ನು ಹೊಗಳಿದ ಬಿಹಾರ್ ಸಿಎಂ
ಗಯಾ , ಶನಿವಾರ, 24 ಜನವರಿ 2015 (19:13 IST)
ಗಯಾವನ್ನು ಪಾರಂಪರಿಕ ನಗರಗಳ ಪಟ್ಟಿಯಲ್ಲಿ ಸೇರಿಸಿರುವ ಕೇಂದ್ರದ ಕ್ರಮಕ್ಕೆ ಸಂತೋಷಗೊಂಡಿರುವ ಬಿಹಾರದ ಮುಖ್ಯಮಂತ್ರಿ ಜಿತನ್ ರಾಮ್ ಮಾಂಜ್ಹಿ ಬಿಜೆಪಿ ಸರಕಾರವನ್ನು ಕೊಂಡಾಡಿದ್ದಾರೆ. 
 
ತಾವು ಕೇಂದ್ರ ಸರಕಾರವನ್ನು ಹೊಗಳುತ್ತಿರುವುದು ಬಹಳ ಜನರಿಗೆ ಇಷ್ಟವಾಗದಿರಬಹುದು. ಆದರೂ ತಾವು ಪ್ರಶಂಸಿಸಲು ಹಿಂಜರಿಯುವುದಿಲ್ಲ ಎಂದು ಅವರು ಹೇಳಿದ್ದಾರೆ. 
 
ಕಳೆದ ಕೆಲ ತಿಂಗಳುಗಳ ಹಿಂದೆ ನಡೆದ ಪಿತೃಪಕ್ಷ ಸಮಾರಂಭದಲ್ಲಿ ಮಾಜಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಮೋದಿಯನ್ನು ಹೊಗಳಿದ್ದರು. ಸ್ವತಂತ್ರವಾಗಿ ಕಾರ್ಯನಿರ್ವಹಿಸಬೇಕು ಎನ್ನುವುದೇ ನನ್ನ ಬಯಕೆ. ನನ್ನ ಹೇಳಿಕೆಗಳು ನಿತೀಶ್ ಅವರ ಪ್ರಧಾನಿಯಾಗಬೇಕು ಎನ್ನುವ ಕನಸಿಗೆ ಅಡ್ಡಿಯಾಗುವುದಿಲ್ಲ ಎಂದು ಟೀಕಾಕಾರರಿಗೆ ತಿರುಗೇಟು ನೀಡಿದ್ದರು.
 
ಬಿಹಾರ್ ಸಿಎಂ ಬಿಜೆಪಿ ಸಂಸದರಿಗೆ ಬಹಿರಂಗವಾಗಿ ಆದ್ಯತೆ ನೀಡುತ್ತಿರುವುದನ್ನು ರಾಜಕೀಯ ವೀಕ್ಷಕರು ಈ ಮೊದಲು ಗಮನಿಸಿದ್ದಾರೆ. ಜೆಡಿ (ಯು) ಶಾಸಕ ಕೃಷ್ಣನಂದನ್ ಯಾದವ್ ಸೇರಿದಂತೆ ತಮ್ಮ ಪಕ್ಷದ ಅನೇಕ ನಾಯಕರು  ವೇದಿಕೆಯಲ್ಲಿದ್ದ ಸಭೆಯೊಂದರಲ್ಲಿ ,ಮೊದಲು ಮಾತನಾಡಲು ಅವರು ಬಿಜೆಪಿಯ ಗಯಾದ ಸಂಸದ  ಹರಿ ಮಾಂಜ್ಹಿ ಮತ್ತು  ಶಾಸಕರಾದ ಶ್ಯಾಮ್ ದೇವ್ ಪಾಸ್ವಾನ್ ಮತ್ತು ಪ್ರೇಮ್ ಕುಮಾರ್ ಅವರಿಗೆ ಅವಕಾಶ ನೀಡಿರುವುದು ಜೆಡಿಯು ಸಂಸದರ ಕೆಂಗೆಣ್ಣಿಗೆ ಗುರಿಯಾಗಿತ್ತು. 
 
ಮಾಂಜ್ಹಿ ತಮ್ಮ ಮಾಜಿ ಗುರು ನಿತೀಶ್ ಕುಮಾರ್ ಮೇಲೆ ಬಹಳ ಹಿಂದಿನಿಂದಲೂ ಅಸಮಾಧಾನವನ್ನು ಹೊಂದಿದ್ದಾರೆ ಎಂದು ಹೇಳಲಾಗುತ್ತಿದೆ. ಕೇವಲ ಒಂದು ಕಾರಣವಲ್ಲ, ಬಹಳ ಕಾರಣಗಳಿಂದಾಗಿ ಅವರು ನಿತೀಶ್ ವಿರುದ್ಧ ಕೋಪವನ್ನು ಹೊಂದಿದ್ದಾರೆ ಎಂಬುದು ರಾಜಕೀಯ ವೀಕ್ಷಕರ ಅಂಬೋಣ. 2005ರಲ್ಲಿ ಮಾಂಜ್ಹಿ ವಿರುದ್ಧ ವಿಜಿಲೆನ್ಸ್ ತನಿಖೆ ಪ್ರಾರಂಭವಾದಾಗ ಸಚಿವರಾಗಿ ಅವರು ಪ್ರಮಾಣವಚನ ಸ್ವೀಕರಿಸಿದ ಕೆಲವೇ ಗಂಟೆಗಳಲ್ಲಿ ರಾಜೀನಾಮೆ ನೀಡುವಂತೆ ನಿತೀಶ್ ಸೂಚಿಸಿದ್ದರು. ಅವರ ಅಂದಿನ ವರ್ತನೆ ಕೂಡ ಬಿಹಾರದ ಹಾಲಿ ಸಿಎಂ ಅವರನ್ನು ಕಾಡುತ್ತಿದೆ ಎನ್ನಲಾಗುತ್ತಿದೆ. 

Share this Story:

Follow Webdunia kannada