Select Your Language

Notifications

webdunia
webdunia
webdunia
webdunia

ಬಿಜೆಪಿ ನಾಯಕನಿಗೆ ಜೀವಾವಧಿ ಶಿಕ್ಷೆ

ಬಿಜೆಪಿ ನಾಯಕನಿಗೆ ಜೀವಾವಧಿ ಶಿಕ್ಷೆ
ಪಾಟ್ಣಾ , ಮಂಗಳವಾರ, 23 ಆಗಸ್ಟ್ 2016 (15:46 IST)
ಅಪಹರಣ ಮತ್ತು ಹತ್ಯೆ ಪ್ರಕರಣದಲ್ಲಿ ಆರೋಪ ಸಾಬೀತಾಗಿದ್ದರಿಂದ ಬಿಜೆಪಿ ನಾಯಕ ಜೀತೆಂದ್ರ ಸ್ವಾಮಿಗೆ ಬಿಹಾರ್ ನ್ಯಾಯಾಲಯ ಸೋಮವಾರ 16 ವರ್ಷ ಜೀವಾವಧಿ ಶಿಕ್ಷೆಯನ್ನು ವಿಧಿಸಿದೆ. 

ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಅವಧೇಶ್ ಕುಮಾರ್ ದುಬೇಗೆ ಈ ಶಿಕ್ಷೆಯನ್ನು ಪ್ರಕಟಿಸಿದ್ದಾರೆ. 
 
2000ರ ವಿಧಾನಸಭಾ ಚುನಾವಣೆಯಲ್ಲಿ ಸಂಯುಕ್ತ ಜನತಾದಳ ಪಕ್ಷದಿಂದ ಕಣಕ್ಕಿಳಿದಿದ್ದ ಅಭ್ಯರ್ಥಿ ದಾಮೋದರ್ ಸಿಂಗ್ ಸಹೋದರ ಭರತ್ ಸಿಂಗ್ ಅವರನ್ನು ಅಪಹರಿಸಿ ಕೊಲೆಗೈದ ಆರೋಪ ಸ್ವಾಮಿ ಮೇಲಿತ್ತು. ಸ್ವಾಮಿ ಆರ್‌ಜೆಡಿ ಸಂಸದ ಉಮಾಶಂಕರ್ ಸಿಂಗ್ ಅವರ ಪುತ್ರನಾಗಿದ್ದಾನೆ.
 
ಪೊಲೀಸರ ಪ್ರಕಾರ ಭರತ್ ಸಿಂಗ್ ಫೆಬ್ರವರಿ 15, 2000ದಂದು ಅಪಹರಣಕ್ಕೊಳಗಾಗಿದ್ದ, ಎರಡು ದಿನಗಳ ಬಳಿಕ ಆತನ ದೇಹ ಪತ್ತೆಯಾಗಿತ್ತು. ಮೃತನ ಸಂಬಂಧಿಕರು ಸ್ವಾಮಿ ವಿರುದ್ಧ ದೂರು ದಾಖಲಿಸಿದ್ದರು.
 
ಕೆಳಹಂತದ ನ್ಯಾಯಾಲಯ ಸ್ವಾಮಿಯನ್ನು ಖುಲಾಸೆಗೊಳಿಸಿತ್ತು. ಆದರೆ ಭರತ್ ಕುಟುಂಬ ಪಾಟ್ಣಾ ಹೈಕೋರ್ಟ್‌ನಲ್ಲಿ ಮೈಲ್ಮನವಿ ಸಲ್ಲಿಸಿದ್ದರು. 

Share this Story:

Follow Webdunia kannada

ಮುಂದಿನ ಸುದ್ದಿ

ಹಾರ್ದಿಕ್ ಮೀಸಲಾತಿ ಹೋರಾಟದ ಹಿಂದೆ ನಾಯಕ, ಕೋಟ್ಯಾಧಿಪತಿಯಾಗುವ ವಾಂಛೆ