Select Your Language

Notifications

webdunia
webdunia
webdunia
webdunia

ಬಿಹಾರ್ ವಿಧಾನಸಭಾ ಚುನಾವಣೆ: 130 ಅಭ್ಯರ್ಥಿಗಳ ಮೇಲೆ ಗಂಭೀರ ಕ್ರಿಮಿನಲ್ ಆರೋಪ

ಬಿಹಾರ್ ವಿಧಾನಸಭಾ ಚುನಾವಣೆ: 130 ಅಭ್ಯರ್ಥಿಗಳ ಮೇಲೆ ಗಂಭೀರ ಕ್ರಿಮಿನಲ್ ಆರೋಪ
ನವದೆಹಲಿ , ಸೋಮವಾರ, 5 ಅಕ್ಟೋಬರ್ 2015 (15:59 IST)
ಬಿಹಾರದಲ್ಲಿ ಅಕ್ಟೋಬರ್ 12 ರಂದು ನಡೆಯಲಿರುವ ಪ್ರಥಮ ಹಂತದ ಚುನಾವಣೆಯಲ್ಲಿ ಕಣಕ್ಕಿಳಿದಿರುವ ಅಭ್ಯರ್ಥಿಗಳ ಪೈಕಿ ಬರೊಬ್ಬರಿ 130 ಜನ ಕೊಲೆ ಸೇರಿದಂತೆ ಗಂಭೀರ ಕ್ರಿಮಿನಲ್ ಆರೋಪಗಳನ್ನು ಹೊತ್ತುಕೊಂಡವರಾಗಿದ್ದಾರೆ ಎಂಬ ಆಘಾತಕಾರಿ ಸುದ್ದಿ ಹೊರಬಿದ್ದಿದೆ. 

ರಾಜ್ಯದ 243 ವಿಧಾನಸಭಾ ಸ್ಥಾನಗಳಲ್ಲಿ 49 ಸ್ಥಾನಗಳಿಗೆ ಪ್ರಥಮ ಹಂತದಲ್ಲಿ ಚುನಾವಣೆ ನಡೆಯಲಿದ್ದು, 583 ಅಭ್ಯರ್ಥಿಗಳು ಕಣದಲ್ಲಿದ್ದಾರೆ. 
 
ಚುನಾವಣಾ ಆಯೋಗ (ECI) ವೆಬ್ಸೈಟ್‌ನಿಂದ ಪಡೆದ ಅಭ್ಯರ್ಥಿಗಳು ಅಫಿಡವಿಟ್ ಆಧಾರದ ಮೇಲೆ ಪ್ರಜಾಪ್ರಭುತ್ವ ಸುಧಾರಣೆಗಳ ಸಂಘ(ಎಡಿಆರ್), ಸಿದ್ಧಪಡಿಸಿರುವ ವರದಿಯ ಪ್ರಕಾರ 37 ಸ್ಥಾನಗಳಲ್ಲಿ ಕಣಕ್ಕಿಳಿದಿರುವ 170 ಅಭ್ಯರ್ಥಿಗಳು ಗಂಭೀರವಾದ ಕ್ರಿಮಿನಲ್ ಆರೋಪಗಳನ್ನು ಎದುರಿಸುತ್ತಿದ್ದು, ಅವರಲ್ಲಿ 130 ಜನರು ಜಾಮೀನು ರಹಿತ ಆರೋಪಗಳನ್ನು ಹೊತ್ತಿದ್ದಾರೆ. 
 
16 ಅಭ್ಯರ್ಥಿಗಳು ಕೊಲೆ ಪ್ರಕರಣವನ್ನು ಎದುರಿಸುತ್ತಿದ್ದು, ಅದರಲ್ಲಿ ಜೆಡಿ(ಯು) ಪಕ್ಷವನ್ನು ಪ್ರತಿನಿಧಿಸುವ ವರ್ಸಾಲಿಂಗಜ್ ಕ್ಷೇತ್ರದ ಅಭ್ಯರ್ಥಿ ಪ್ರದೀಪ್ ಕುಮಾರ್ ವಿರುದ್ಧ ನಾಲ್ಕು ಕೊಲೆಗಳ ಆರೋಪವಿದೆ.  7 ಪಕ್ಷೇತರ ಅಭ್ಯರ್ಥಿಗಳು ಸಹ ಕೊಲೆ ಆರೋಪವನ್ನು ಎದುರಿಸುತ್ತಿರುವುದು ವರದಿಯಿಂದ ಬಹಿರಂಗಗೊಂಡಿದೆ. 
 
37 ಅಭ್ಯರ್ಥಿಗಳು ಕೊಲೆ ಯತ್ನ ಪ್ರಕರಣದ ಆರೋಪಿಗಳಾಗಿದ್ದು ಹಿಸುವಾ ಕ್ಷೇತ್ರದಿಂದ ಕಣಕ್ಕಿಳಿದಿರುವ ರಾಮಸ್ವರೂಪ್ ಯಾದವ್  ಮೇಲೆ 5 ಕೊಲೆ ಯತ್ನ ಪ್ರಕರಣಗಳಿವೆ. ಜೆಡಿ(ಯು)ನ 3 ಅಭ್ಯರ್ಥಿಗಳು, ಬಿಎಸ್ಪಿ, ಬಿಜೆಪಿ ಮತ್ತು ಜನ ಅಧಿಕಾರ್ ಪಾರ್ಟಿ (ಲೋಕತಾಂತ್ರಿಕ)ಯ ತಲಾ ಒಬ್ಬರು ಕೊಲೆ ಯತ್ನ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ. 

Share this Story:

Follow Webdunia kannada