Webdunia - Bharat's app for daily news and videos

Install App

ಮುಸ್ಲಿಮರು ಯಾಕೆ ಜೈಲಿನಿಂದ ಪರಾರಿಯಾಗ್ತಾರೆ, ಹಿಂದೂಗಳೇಕಿಲ್ಲ: ದಿಗ್ವಿಜಯ್ ಸಿಂಗ್

Webdunia
ಮಂಗಳವಾರ, 1 ನವೆಂಬರ್ 2016 (15:44 IST)
ಭೋಪಾಲ್‌ನಲ್ಲಿ ನಡೆದ ಸಿಮಿ ಎನ್‌ಕೌಂಟರ್ ಕುರಿತಂತೆ ಪ್ರತಿಕ್ರಿಯೆ ನೀಡಿದ ಹಿರಿಯ ಕಾಂಗ್ರೆಸ್ ಮುಖಂಡ ದಿಗ್ವಿಜಯ್ ಸಿಂಗ್, ಜೈಲಿನಿಂದ ಕೇವಲ ಮುಸ್ಲಿಂ ಸಮುದಾಯದ ಕೈದಿಗಳೇ ಏಕೆ ಪರಾರಿಯಾಗುತ್ತಾರೆ? ಹಿಂದು ಕೈದಿಗಳು ಯಾಕೆ ಪರಾರಿಯಾಗುವುದಿಲ್ಲ ಎಂದು ಪ್ರಶ್ನಿಸಿದ್ದಾರೆ.
 
ಸಿಮಿ ಉಗ್ರರ ಎನ್‌ಕೌಂಟರ್ ನಕಲಿ ಎನ್ನುವ ಅನುಮಾನ ವ್ಯಕ್ತವಾಗುತ್ತಿರುವುದರಿಂದ ಘಟನೆಯ ಬಗ್ಗೆ ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ತನಿಖೆಯಾಗಬೇಕು ಎಂದು ಒತ್ತಾಯಿಸಿದ್ದಾರೆ.
 
ಭೋಪಾಲ್‌ನ ಖಾಂಡ್ವಾ ಜೈಲಿನಿಂದ ಯಾಕೆ ಕೇವಲ ಸಿಮಿ ಉಗ್ರರು ಪರಾರಿಯಾಗಿದ್ದಾರೆ. ಮುಸ್ಲಿಮರು ಮಾತ್ರ ಯಾಕೆ ಜೈಲಿನಿಂದ ಪರಾರಿಯಾಗುತ್ತಾರೆ? ಹಿಂದುಗಳು ಯಾಕೆ ಜೈಲಿನಿಂದ ಪರಾರಿಯಾಗುವುದಿಲ್ಲ ಎಂದು ಘಟನೆಗೆ ಕೋಮುವಾದ ಬಣ್ಣ ಬಳೆಯಲು ಪ್ರಯತ್ನಿಸಿದ್ದಾರೆ.
 
ರಾಷ್ಟ್ರೀಯ ತನಿಖಾ ಸಂಸ್ಥೆ ಎನ್‌ಐಎ ಘಟನೆಯ ಬಗ್ಗೆ ತನಿಖೆ ನಡೆಸಬೇಕು. ತನಿಖೆ ಕೋರ್ಟ್‌ ಮೇಲ್ವಿಚಾರಣೆಯಲ್ಲಿ ನಡೆಯಬೇಕು. ಮುಸ್ಲಿಮರು ಯಾಕೆ ಜೈಲಿನಿಂದ ಪರಾರಿಯಾಗುತ್ತಾರೆ. ಇದರ ಹಿಂದಿನ ಸಮಸ್ಯೆ ಯಾವುದು ಎನ್ನುವ ಬಗ್ಗೆ ತನಿಖೆಯಾಗಬೇಕು ಎಂದು ಆಗ್ರಹಿಸಿದ್ದಾರೆ. 
 
ಸಿಮಿ ಉಗ್ರರಿಂದ ಹತನಾದ ಭೋಪಾಲ್ ಜೈಲಿನ ಭದ್ರತಾ ಸಿಬ್ಬಂದಿ ರಮಾಶಂಕರ್ ಯಾದವ್ ಅಂತ್ಯಸಂಸ್ಕಾರದಲ್ಲಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾನ್ ಸೇರಿದಂತೆ ಸಾವಿರಾರು ಜನರು ಪಾಲ್ಗೊಂಡಿದ್ದ ದಿನವೇ ದಿಗ್ವಿಜಯ್ ಸಿಂಗ್ ನೀಡಿರುವ ಹೇಳಿಕೆ ಹೊರಬಿದ್ದಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಮಾತೃಪಕ್ಷಕ್ಕೆ ಮೋಸಮಾಡಿದ ಸಿದ್ದರಾಮಯ್ಯನವರು ಹೆತ್ತ ತಾಯಿಗೆ ಮಾಡಿದ ದ್ರೋಹಕ್ಕೆ ಸಮ: ನಿಖಿಲ್ ಕುಮಾರಸ್ವಾಮಿ

ಇರಾನ್ ದಾಳಿ ಬೆನ್ನಲ್ಲೇ ಅಮೆರಿಕ ಪ್ರವಾಸ ಕೈಗೊಂಡ ಇಸ್ರೇಲ್‌ ಪ್ರಧಾನಿ ನೆತನ್ಯಾಹು

ಬೆಲೆ ಏರಿಕೆಯ ಮಧ್ಯೆ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ ಬೆಲೆ ₹58.50ಕಡಿತ

ಕೈಲಾಗದವನು ಮೈಪರಚಿಕೊಂಡ, ಕೋವಿಡ್ ಲಸಿಕೆ ಬಿಜೆಪಿ ಲಸಿಕೆಯಲ್ಲ: ಸಿಎಂಗೆ ಟಾಂಗ್ ಕೊಟ್ಟ ಆರ್‌ ಅಶೋಕ್‌

ಏರ್‌ ಇಂಡಿಯಾ ವಿಮಾನ ದುರಂತ: ವಾರದೊಳಗೆ ಪ್ರಾಥಮಿಕ ವರದಿ ಹೊರಬೀಳುವ ಸಾಧ್ಯತೆ

ಮುಂದಿನ ಸುದ್ದಿ
Show comments