Webdunia - Bharat's app for daily news and videos

Install App

ಮಲೆಯಾಳಂ ನಟಿಗೆ ವಿವಾಹವಾಗುವಂತೆ ಮ್ಯಾಸೇಜ್ ಕಳುಹಿಸುತ್ತಿದ್ದ ಆರೋಪಿ ಅರೆಸ್ಟ್

Webdunia
ಸೋಮವಾರ, 30 ಅಕ್ಟೋಬರ್ 2017 (13:49 IST)
ಮಲೆಯಾಳಂ ಚಿತ್ರನಟಿಗೆ ವಿವಾಹವಾಗುವುದಾಗಿ ನಿರಂತರ ಮೊಬೈಲ್ ಸಂದೇಶಗಳನ್ನು ರವಾನಿಸಿ ಕಿರುಕುಳ ನೀಡುತ್ತಿದ್ದ 28 ವರ್ಷದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.
ಜಾಕೋಬಿಂಟೆ ಸ್ವರ್ಗರಾಜ್ಯಂ ಎನ್ನುವ ಸಿನೆಮಾದಿಂದ ಮಲೆಯಾಳಂ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಕೋರಮಂಗಲ ನಿವಾಸಿಯಾದ ರೆಬಾ ಮೊನಿಕಾ ಜಾನ್, ಆರೋಪಿ ಫ್ರಾಂಕ್ಲಿನ್ ವಿಸಿಲ್ ವಿರುದ್ಧ ಮಡಿವಾಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ಹಿನ್ನೆಲೆಯಲ್ಲಿ ಆರೋಪಿಯನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ, 
 
ಆರೋಪಿ ಫ್ರಾಂಕ್ಲಿನ್ ವಿಸಿಲ್ ಎಲೆಕ್ಟ್ರಾನಿಕ್ಸ್ ಸಿಟಿ ನಿವಾಸಿಯಾಗಿದ್ು ಬಸವನಗುಡಿಯಲ್ಲಿರುವ ಖಾಸಗಿ ಕಂಪೆನಿಯಲ್ಲಿ ಉದ್ಯೋಗಿಯಾಗಿದ್ದಾನೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
 
ಕಳೆದ 13 ವರ್ಷಗಳಿಂದ ಬೆಂಗಳೂರು ನಿವಾಸಿಯಾಗಿರುವ ರೆಬಾ ಮೋನಿಕಾ ಜಾನ್, ಪ್ರತಿ ರವಿವಾರ ಮಡಿವಾಳದ ಹೊಸೂರು ರಸ್ತೆಯಲ್ಲಿರುವ ಸೇಂಟ್ ಅಂಥೋನಿ ಚರ್ಚ್‌ಗೆ ಭೇಟಿ ನೀಡುತ್ತಿದ್ದರು. ಆರೋಪಿ ಫ್ರಾಂಕ್ಲಿನ್ ವಿಸಿಲ್ ನಿರಂತರವಾಗಿ ಫಾಲೋ ಮಾಡುತ್ತಿರುವುದಲ್ಲದೇ ಮೊಬೈಲ್‌ಗೆ ವಿವಾಹವಾಗುವಂತೆ ಒತ್ತಡ ಹೇರುತ್ತಿದ್ದಾನೆ ಎಂದು ಪೊಲೀಸರಿಗೆ ದೂರು ನೀಡಿದ್ದರು.  
 
ಕಳೆದ 2013ರಲ್ಲಿ ಎರಡನೇ ಟಿವಿ ರಿಯಾಲಿಟಿ ಶೋ ನಂತರ ಕೇರಳದಲ್ಲಿ ಜನಪ್ರಿಯರಾಗಿರುವ ರೆಬಾ ಜಾಕೊಬಿಂಚೆ ಸ್ವರ್ಗರಾಜ್ಯಂ ಚಿತ್ರದಲ್ಲಿ ನಟಿಸಿ ಮಲೆಯಾಳಂ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

14ದಿನ ನ್ಯಾಯಾಂಗ ಬಂಧನಕ್ಕೆ ಮಹೇಶ್ ಶೆಟ್ಟಿ ತಿಮರೋಡಿ, ಕಾನೂನಿನ ಮುಂದಿನ ನಡೆಯೇನು

ನವದೆಹಲಿ ಪೊಲೀಸ್ ಆಯುಕ್ತರಾಗಿ ಸತೀಶ್‌ ಗೋಲ್ಚಾ ನೇಮಕ

ಸಿದ್ಧರಾಮಯ್ಯ ವಿರುದ್ಧ ಚುನಾವಣಾ ಆಯೋಗಕ್ಕೆ ದಿಢೀರ್ ದೂರು ಕೊಟ್ಟ ಬಿಜೆಪಿ, ಯಾಕೆ ಗೊತ್ತಾ

ಮಹೇಶ್‌ ಶೆಟ್ಟಿ ತಿಮರೋಡಿ ಬಂಧನವಾಗುತ್ತಿದ್ದಂತೆ ಕಲ್ಲಡ್ಕ ಪ್ರಭಾಕರ ಭಟ್‌ ಅನ್ನು ಕೆಣಕಿದ ಕಾಂಗ್ರೆಸ್‌ ನಾಯಕ

ನಟ ವಿಜಯ್ ರಾಜ್ಯ ಮಟ್ಟದ ಎರಡನೇ ಸಮ್ಮೇಳನಕ್ಕೆ ಸೂತಕದ ಛಾಯೆ, ಏನಾಯಿತು

ಮುಂದಿನ ಸುದ್ದಿ
Show comments