Select Your Language

Notifications

webdunia
webdunia
webdunia
webdunia

ಆತ್ಮಹತ್ಯೆಗೆ ಶರಣಾದ ಕಿರುತೆರೆ ಅಭಿನೇತ್ರಿ?

ಆತ್ಮಹತ್ಯೆಗೆ ಶರಣಾದ ಕಿರುತೆರೆ ಅಭಿನೇತ್ರಿ?
ಕೋಲಕಾತಾ , ಶುಕ್ರವಾರ, 10 ಏಪ್ರಿಲ್ 2015 (11:09 IST)
ಬಂಗಾಳದ ಕಿರುತೆರೆ ನಟಿ ದಿಶಾ ಗಂಗೂಲಿ ಗುರುವಾರ ಶಂಕಾಸ್ಪದವಾಗಿ ಸಾವನ್ನಪ್ಪಿದ್ದಾರೆ. ಅವರ ದೇಹ ಫ್ಯಾನ್‌ನಲ್ಲಿ ನೇತು ಹಾಕಿಕೊಂಡ ಸ್ಥಿತಿಯಲ್ಲಿ ಕಂಡುಬಂದಿದೆ. 

ದಕ್ಷಿಣ ಕೋಲಕಾತಾದ ಬೆಹಲಾದಡಿಯಲ್ಲಿ ಬರುವ ಪರ್ಣಶ್ರೀ ಪ್ರದೇಶದಲ್ಲಿನ ಆವಾಸದಲ್ಲಿ ಅವರು ಸಾವಿಗೆ ಶರಣಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಕೃತ್ಯದ ಹಿಂದಿರುವ ಕಾರಣ ಇನ್ನೂ ಪತ್ತೆಯಾಗಿಲ್ಲ. ಇದು ಆತ್ಮಹತ್ಯೆಯೇ ಇರಬಹುದು ಎಂದು ಪೊಲೀಸರು ಊಹಿಸಿದ್ದಾರೆ. ಸ್ಥಳದಲ್ಲಿ ಡೆತ್ ನೋಟ್ ಕೂಡ ಪತ್ತೆಯಾಗಿಲ್ಲ.
 
ನಿವಾಸದಲ್ಲಿ ಒಂಟಿಯಾಗಿ ಇರುತ್ತಿದ್ದ 23 ವರ್ಷದ ದಿಶಾ, ಪ್ರಖ್ಯಾತ ಬಂಗಾಲಿ ಧಾರವಾಹಿಗಳಲ್ಲಿ ಅಭಿನಯಿಸಿದ್ದರು. 'ಕನಕಾಂಜಲಿ' ಮತ್ತು 'ತುಮ್ಹಿ ಅಶ್ಬೆ ಬೋಲೆ' ಆಕೆಗೆ ಹೆಚರು ತಂದು ಕೊಟ್ಟಿದ್ದವು. ನೈರೋಬಿಯಲ್ಲಿರುವ ಆಕೆಯ ಪೋಷಕರಿಗೆ ಸುದ್ದಿ ಮುಟ್ಟಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. 
 
ಆಕೆಗೆ ಫೋನ್ ಕರೆ ಮಾಡಿದ ಸ್ನೇಹಿತನೊಬ್ಬ ಪ್ರತಿಕ್ರಿಯೆ ಸಿಗದಿದ್ದಾಗ ಮನೆಗೆ ಬಂದು ಪರಿಶೀಲಿಸಿದ್ದಾನೆ. ರೂಮ್ ಒಳಗಿನಿಂದ ಲಾಕ್ ಮಾಡಲ್ಪಟ್ಟಿದ್ದು ಬಾಗಿಲು ಒಡೆದು ನೋಡಿದಾಗ ಶವ ಫ್ಯಾನ್‌ನಲ್ಲಿ ನೇತಾಡುತ್ತಿತ್ತು ಎಂದು ತಿಳಿದು ಬಂದಿದೆ.
 
ಪ್ರಕರಣವನ್ನು ದಾಖಲಿಸಿಕೊಂಡಿರುವ ಪೊಲೀಸರು ಆಕೆಯ ಸ್ನೇಹಿತರ ವಿಚಾರಣೆ ನಡೆಸುತ್ತಿದ್ದಾರೆ. 

Share this Story:

Follow Webdunia kannada